Site icon Vistara News

ICC World Cup 2023 : ಟಾಸ್​ ಸೋತಿದ್ದಕ್ಕೆ ಚಿಂತೆ ಬೇಡ, ಟಾಸ್​ ಸೋತ ಪಂದ್ಯದಲ್ಲೂ ಭಾರತ ಗೆದ್ದಿದೆ

Toss win

ಅಮಹದಾಬಾದ್​: ವಿಶ್ವ ಕಪ್​ ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಸೋತಿದ್ದು ಮೊದಲು ಬ್ಯಾಟಿಂಗ್ ಮಾಡುವಂತೆ ಎದುರಾಳಿ ಆಸ್ಟ್ರೇಲಿಯಾ ತಂಡದ ನಾಯಕ ಆಹ್ವಾನ ಕೊಟ್ಟಿದ್ದಾರೆ ಆದರೆ, ಮೊದಲು ಬ್ಯಾಟ್ ಮಾಡಿದ ಭಾರತ 81 ರನ್​ಗೆ 3 ವಿಕೆಟ್​ ಕಳೆದುಕೊಂಡಿದೆ.

ಮೆನ್ ಇನ್ ಬ್ಲೂ ತಂಡವು 10 ಪಂದ್ಯಗಳ ಗೆಲುವಿನ ಹಾದಿಯಲ್ಲಿದೆ. ಇಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿದೆ. ಏತನ್ಮಧ್ಯೆ, ಆಸೀಸ್ ಸತತ ಎರಡು ಸೋಲಿನ ನಂತರ ಪುಟಿದೆದ್ದಿದ್ದು, ಎಂಟು ಪಂದ್ಯಗಳನ್ನು ಸತತವಾಗಿ ಗೆದ್ದಿದೆ.

ಇದನ್ನೂ ಓದಿ : ICC World Cup 2023: ಟಾಸ್ ಗೆದ್ದ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ; ಪಿಚ್ ಯಾರಿಗೆ ಅನುಕೂಲಕರ?

ಈ ಪಂದ್ಯಾವಳಿಯಲ್ಲಿ ಭಾರತ ತಂಡ ಟಾಸ್ ವಿಚಾರದಲ್ಲಿ ಹೆಚ್ಚು ಅದೃಷ್ಟಶಾಲಿಯಾಗಿಲ್ಲ. ಆದರೆ ಅದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿಲ್ಲ. ಅಂತೆಯೇ ಫೈನಲ್​ನಲ್ಲೂ ಭಾರತ ತಂಡ ಟಾಸ್ ಸೋತಿದೆ. ಆದರೂ ಮ್ಯಾಚ್​ ಗೆಲ್ಲುವ ಎಲ್ಲ ಅವಕಾಶಗಳನ್ನು ಹೊಂದಿದೆ.

ನಿರೀಕ್ಷೆ ಏನು?

ಆಸ್ಟ್ರೇಲಿಯಾ ನಾಯಕ ಪಿಚ್ ಒಣಗಿರುವುದರಿಂದ ಹಾಗೂ ಇಬ್ಬನಿ ಪರಿಣಾಮ ಹೆಚ್ಚಿರುವ ಕಾರಣ ಮೊದಲು ಫೀಲ್ಡಿಂಗ್ ಮಾಡಿ ಆ ಬಳಿಕ ಚೇಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಟಾಸ್​ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸೂಕ್ತ ಆಯ್ಕೆಯನ್ನು ಮಾಡಿಕೊಂಡಿದ್ದಾರೆ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ. ಆದರೆ, ಭಾರತ ತಂಡದ ಪಾಲಿಗೆ ಟಾಸ್ ಸೋಲು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಗೊತ್ತಿಲ್ಲ. ಯಾಕೆಂದರೆ ಭಾರತ ತಂಡ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸಲು ರೆಡಿಯಾಗಿದೆ ಎಂಬುದಾಗಿ ಕ್ರಿಕೆಟ್​ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಟಾಸ್ ಸೋಲಿನಿಂದ ನಮಗೇನು ನಷ್ಟವಾಗಿಲ್ಲ ಎಂಬುದಾಗಿ ಭಾರತ ತಂಡ ನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ನಾವು ಟಾಸ್ ಗೆದ್ದಿದ್ದರೆ ನಮ್ಮದು ಬ್ಯಾಟಿಂಗ್ ಆಯ್ಕೆಯೇ ಆಗಿರುತ್ತಿತ್ತು ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಟಾಸ್​ ನಿರ್ಣಯದಲ್ಲಿ ಎರಡೂ ತಂಡಗಳು ಸಂತೋಷಗೊಂಡಿವೆ ಎಂದೇ ಹೇಳಬಹುದು. ರೋಹಿತ್ ಮಾತಿನಲ್ಲಿ ಸತ್ಯವಿದೆ. ಯಾಕೆಂದರೆ ಭಾರತ ತಂಡ ದೊಡ್ಡ ಮೊತ್ತವನ್ನು ಪೇರಿಸಿಯೇ ಎದುರಾಳಿಯನ್ನು ನಿಯಂತ್ರಣ ಮಾಡುವ ಗುರಿಯನ್ನು ಹೊಂದಿರುವುದು ತಂಡದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ಸ್ಪಷ್ಟವಾಗುತ್ತದೆ. ಪಿಚ್​ ಸ್ವಲ್ಪ ಮಟ್ಟಿಗೆ ಸ್ಪಿನ್​ಗೆ ನೆರವಾಗುತ್ತದೆ ಎಂಬ ಸುಳಿವು ಇರುವ ಹೊರತಾಗಿಯೂ ರೋಹಿತ್ ಶರ್ಮಾ ಅಶ್ವಿನ್ ಅವರನ್ನು 11ರ ಬಳಗಕ್ಕೆ ಸೇರಿಸದೇ ಸೂರ್ಯಕುಮಾರ್ ಅವರನ್ನು ಉಳಿಸಿಕೊಂಡಿದ್ದಾರೆ. ಅಂದರೆ ಭಾರತ ತಂಡದ ಗುರಿ ಸ್ಪಷ್ಟವಾಗಿದೆ. ಅಂದರೆ, ಮೊದಲು ಬ್ಯಾಟ್​ ಮಾಡಿದ ಒಡ್ಡಿ ಮೊತ್ತವನ್ನು ಪೇರಿಸಿ ಎದುರಾಳಿಯನ್ನು ನಿಯಂತ್ರಿಸುವುದೇ ಟೀಮ್ ಇಂಡಿಯಾದ ಗುರಿಯಾಗಿದೆ.

ಭಾತದ ಟಾಸ್ ಮತ್ತು ಪಂದ್ಯದ ಫಲಿತಾಂಶ

Exit mobile version