Site icon Vistara News

Rahul Dravid : ದ್ರಾವಿಡ್​ ಮಗ vs ಸೆಹ್ವಾಗ್ ಮಗ; ಚಿಣ್ಣರ ಭರ್ಜರಿ ಫೈಟ್​

Anvay Dravid

ಬೆಂಗಳೂರು: ಭಾರತದ ಕ್ರಿಕೆಟ್ ಲೆಜೆಂಡ್​ಗಳಾದ ರಾಹುಲ್ ದ್ರಾವಿಡ್ (Rahul Dravid) ಮತ್ತು ವೀರೇಂದ್ರ ಸೆಹ್ವಾಗ್ ಅವರ ಹೆಸರುಗಳು ಕ್ರಿಕೆಟ್​ ಟೂರ್ನಮೆಂಟ್ ಸ್ಕೋರ್ ಬೋರ್ಡ್​​ನಲ್ಲಿ ನೋಡಿ ಸುಮಾರು ಒಂದು ದಶಕ ಕಳೆದಿದೆ. ಆದರೆ, ಡಿಸೆಂಬರ್ 11 ರಂದು ಪ್ರಾರಂಭವಾದ ವಿಜಯ್ ಮರ್ಚೆಂಟ್ ಟ್ರೋಫಿ ರಾಷ್ಟ್ರೀಯ ಅಂಡರ್ -16 ಬಾಲಕರ ಟೂರ್ನಮೆಂಟ್ ನಲ್ಲಿ ಕರ್ನಾಟಕ ಮತ್ತು ದೆಹಲಿ ನಡುವಿನ ಮೂರು ದಿನಗಳ ಮುಖಾಮುಖಿಯಲ್ಲಿ ದ್ರಾವಿಡ್ ಮತ್ತು ಸೆಹ್ವಾಗ್ ಕಾಣಿಸಿಕೊಂಡಿದ್ದಾರೆ.

ಕರ್ನಾಟಕ ಅಂಡರ್-16 ತಂಡದ ನಾಯಕ ಅನ್ವಯ್​ ದ್ರಾವಿಡ್ ಮತ್ತು ದೆಹಲಿ ಆರಂಭಿಕ ಬ್ಯಾಟರ್​ ಆರ್ಯವೀರ್ ಸೆಹ್ವಾಗ್ ತಮ್ಮ ತಮ್ಮ ರಾಜ್ಯ ತಂಡಗಳಿಗಾಗಿ ಪರಸ್ಪರ ಸೆಣಸಾಡಿದ್ದಾರೆ. ವರದಿಯ ಪ್ರಕಾರ, ಮೊದಲ ದಿನ ಜೂನಿಯರ್ ದ್ರಾವಿಡ್ ಡಕ್ ಔಟ್ (ಶೂನ್ಯಕ್ಕೆ) ಆಗಿದ್ದರೆ, ಕಿರಿಯ ಸೆಹ್ವಾಗ್ ಅಜೇಯ 50 ರನ್ ಗಳಿಸಿದ್ದರು.

ಅನ್ವೇ ಕೂಡ ವಿಕೆಟ್​ಕೀಪರ್​

ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್​ ದ್ರಾವಿಡ್ ಕೂಡ ತಂಡದ ವಿಕೆಟ್ ಕೀಪರ್. ಸೆಹ್ವಾಗ್ ಅವರ ಹಿರಿಯ ಮಗ ತನ್ನ ತಂದೆಯಂತೆಯೇ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಮಂಗಳಗಿರಿಯ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ಪಂದ್ಯದಲ್ಲಿ ಕರ್ನಾಟಕ 56.3 ಓವರ್ ಗಳಲ್ಲಿ 144 ರನ್ ಗಳಿಗೆ ಆಲೌಟ್ ಆಗಿದೆ. 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಅನ್ವೇ ಅವರನ್ನು ದೆಹಲಿಯ ಅತ್ಯಂತ ಯಶಸ್ವಿ ಬೌಲರ್ ಆಯುಷ್ ಲಾಕ್ರಾ ಔಟ್​ ಮಾಡಿದ್ದಾರೆ. ಅವರು ಕೇವಲ ಎರಡು ಎಸೆತಗಳನ್ನು ಎದುರಿಸುವಲ್ಲಿ ಯಶಸ್ವಿಯಾದರು.

ಮೊದಲ ದಿನದಾಟದ ಅಂತ್ಯಕ್ಕೆ ಡೆಲ್ಲಿ 30 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದ್ದು, ಆರ್ಯವೀರ್ 98 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದ್ದಾರೆ. ಅಂಡರ್ -16 ನಲ್ಲಿ ಆರ್ಯವೀರ್ ಅವರ ಎರಡನೇ ಸೀಸನ್ ಇದಾಗಿದ್ದರೂ, ಕಳೆದ ವರ್ಷ ಅವರು ಪ್ರಯಾಣ ತಂಡದ ಸದಸ್ಯರಾಗಿ ಬೆಂಚ್ ಅನ್ನು ಬೆಚ್ಚಗಾಗಿಸಿದ್ದರು. ಆ ವರ್ಷ ಅವರಿಗೆ ಯಾವುದೇ ಪಂದ್ಯಗಳನ್ನು ಆಡಲು ಅವಕಾಶ ಸಿಗಲಿಲ್ಲ.

ಮಗನಿಗಾಗಿ ಮೈಸೂರಿಗೆ ಹೋಗಿದ್ದ ದ್ರಾವಿಡ್

ಭಾರತ ಕ್ರಿಕೆಟ್​ ತಂಡದ ಕೋಚ್​​ ರಾಹುಲ್ ದ್ರಾವಿಡ್ ಆಟದ ದಿನಗಳಿಂದಲೂ ಅತ್ಯಂತ ನಿರ್ಗವಿ ಆಟಗಾರ. ಒಣ ಜಂಭ. ಆಹಂಕಾರ, ದ್ವೇಷ- ಅಸೂಯೆಗಳು ಅವರ ಸನಿಹವೂ ಸುಳಿಯುವುದಿಲ್ಲ. ಇದೇ ವ್ಯಕ್ತಿತ್ವ ಅವರನ್ನು ಸಾಧನೆಯ ಉತ್ತುಂಗಕ್ಕೇರಿಸಿದೆ. ಅವರ ಕೋಚಿಂಗ್ ಹುದ್ದೆಯೂ ವಿಸ್ತರಣೆಗೊಂಡಿದೆ. ಇಷ್ಟೆಲ್ಲ ಜನಪ್ರಿಯತೆ ಹೊಂದಿರುವ ಆಟಗಾರ ಹಾಗೂ ಕೋಚ್ ಮಣ್ಣಿನ ನೆಲದ ಮೇಲೆ ಕುಳಿತು ಕ್ರಿಕೆಟ್​ ನೋಡುವುದೆಂದರೆ ನಂಬಲು ಸಾಧ್ಯವೇ. ಆದರೆ ನಂಬಲೇ ಬೇಕು. ಯಾಕೆಂದರೆ ಅವರು ಮೈಸೂರಿನಲ್ಲಿ ಕ್ರೀಡಾಂಗಣದ ಮಣ್ಣಿನ ಮೆಟ್ಟಿಲ ಮೇಲೆ ಕುಳಿತು ಪಂದ್ಯ ನೋಡುತ್ತಿರುವ ಚಿತ್ರಗಳು ವೈರಲ್ ಆಗಿದ್ದವು.

ಅಂದ ಹಾಗೆ ದ್ರಾವಿಡ್ ವೀಕ್ಷಿಸಿದ್ದು ತಮ್ಮ ಪುತ್ರ ಸುಮಿತ್ ದ್ರಾವಿಡ್ ಆಟವನ್ನು. ಈ ಮೂಲಕ ರಾಹುಲ್ ತಾವು ಕೋಚ್​ಗಿಂತಲೂ ಅಪ್ಪನೆಂಬ ಜವಾಬ್ದಾರಿಯೇ ದೊಡ್ಡದು ಎಂಬುದನ್ನು ಸಾಬೀತುಮಾಡಿದ್ದಾರೆ. ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಮೈಸೂರು ವಲಯ ಆಯೋಜಿಸಿದ್ದ 19 ವರ್ಷದೊಳಗಿನವರ ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಮಾನಸಗಂಗೋತ್ರಿಯ ಎಸ್ ಡಿಎನ್ ಆರ್ (ಶ್ರೀಕಂಠದತ್ತ ನರಸಿಂಹರಾಜ) ಒಡೆಯರ್ ಕ್ರೀಡಾಂಗಣದಲ್ಲಿ ಡಿಸೆಂಬರ್​ 1ರಂದು ಆರಂಭಗೊಂಡಿದೆ. ಈ ಪಂದ್ಯವನ್ನು ವೀಕ್ಷಿಸಲು ದ್ರಾವಿಡ್ ಅಲ್ಲಿಗೆ ಬಂದಿದ್ದರು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಉತ್ತರಾಖಂಡ್ 38 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತ್ತು. ಆತಿಥೇಯ ಕರ್ನಾಟಕ ಪರ ಮೈಸೂರಿನ ಇಶಾನ್ 3 ವಿಕೆಟ್ ಪಡೆದರೆ, ಸಮರ್ಥ್ 2 ವಿಕೆಟ್ ಪಡೆದರು. ಬಿಸಿಸಿಐ ರಾಷ್ಟ್ರೀಯ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಈ ಪಂದ್ಯದಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ : MS Dhoni : ಧೋನಿಯೂ ಕೋಪ ಮಾಡ್ಕೋತಾರೆ; ಮಾಜಿ ಆಟಗಾರ ಹೀಗೆ ಹೇಳಿದ್ದು ಯಾಕೆ?

ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಫೈನಲ್ನಲ್ಲಿ ಆತಿಥೇಯ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ರಾಹುಲ್ ದ್ರಾವಿಡ್ ಮತ್ತು ಅವರ ಪತ್ನಿ ಡಾ.ವಿಜೇತಾ ಅವರು ಮೈಸೂರಿನಲ್ಲಿ ನಡೆದ 19 ವರ್ಷದೊಳಗಿನವರ ಪಂದ್ಯಾವಳಿಯಲ್ಲಿ ತಮ್ಮ ಮಗನ ಆಟವನ್ನು ವೀಕ್ಷಿಸುತ್ತಿದ್ದಾರೆ. ಈ ವೇಳೆ ರಾಹುಲ್ ದ್ರಾವಿಡ್ ಯಾರಗೊಂದಿಗೆ ಮಾತನಾಡಲೂ ಒಪ್ಪಲಿಲ್ಲ. ತಮ್ಮ ಮಗುವಿನ ಆಟವನ್ನು ವೀಕ್ಷಿಸಲು ಕ್ರಿಕೆಟಿಗನ ಪೋಷಕನಾಗಿ ಇಲ್ಲಿಗೆ ಬಂದಿದ್ದೇನೆ. ಎಂದಷ್ಟೇ ಹೇಳಿದ್ದಾರೆ. ಸಮಿತ್ ದ್ರಾವಿಡ್ ಉತ್ತಮ ಆಲ್ರೌಂಡರ್, ಅವರು ಪಂದ್ಯದಲ್ಲಿ 5 ಓವರ್ ಬೌಲಿಂಗ್​ ಮಾಡಿ 11 ರನ್ ಬಾರಿಸಿದ್ದರು.

Exit mobile version