Site icon Vistara News

Rishabh Pant: ಮೊದಲ ಬಾರಿಗೆ ಅಪಘಾತದ ಕರಾಳ ನೆನಪು ಬಿಚ್ಚಿಟ್ಟ ರಿಷಭ್​ ಪಂತ್​

Rishabh Pant

ನವದೆಹಲಿ: ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್​ ಟೂರ್ನಿ(IPL 2024) ಆರಂಭಕ್ಕೆ ಕ್ರಿಕೆಟ್​ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಈ ಟೂರ್ನಿ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಎಲ್ಲರೂ ಕಾಯುತ್ತಿರುವ ಇನ್ನೊಂದು ವಿಷಯವೆಂದರೆ ವಿಕೆಟ್ ಕೀಪರ್-ಬ್ಯಾಟರ್ ರಿಷಭ್​ ಪಂತ್(Rishabh Pant) ಮರಳುವಿಕೆ.

2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಅಂದಿನಿಂದ ಪಂತ್​ ಕ್ರಿಕೆಟ್​ನಿಂದ ಹೊರಗುಳಿದಿದ್ದಾರೆ. ಸಂಪೂರ್ಣ ತೇತರಿಕೆ ಕಂಡಿರುವ ಪಂತ್​ ಈ ಬಾರಿಯ ಐಪಿಎಲ್ ಋತುವಿನಲ್ಲಿ ಮೈದಾನಕ್ಕಿಳಿಯಲು ಸಿದ್ಧರಾಗಿದ್ದಾರೆ.

ಪಂತ್​ ಅವರು ಕ್ರಿಕೆಟ್​ಗೆ ಮರಳುವು ನಿಟ್ಟಿನಲ್ಲಿ ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ಮತ್ತು ಬ್ಯಾಟಿಂಗ್​ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಇದೇ ವೇಳೆ ಪಂತ್​ ಸ್ಟಾರ್​ ಸ್ಟೋರ್ಟ್ಸ್​ ನಡೆಸಿದ ‘ಬಿಲೀವ್ ರಿಷಭ್​ ಪಂತ್” ಸಂದರ್ಶನದಲ್ಲಿ ಅಂದಿನ ಅಪಘಾತದ ಕರಾಳ ನೆನಪನ್ನು ಬಿಚ್ಚಿಟ್ಟಿದ್ದಾರೆ. ಸಂಪೂರ್ಣ ಸಂದರ್ಶನ ಫೆ.1 ರಂದು ಸಂಜೆ 7 ಗಂಟೆಗೆ ಪ್ರಸಾರಗೊಳ್ಳಲಿದೆ. ಇದೀಗ ಈ ಕಾರ್ಯಕ್ರಮದ ಪ್ರೋಮೊವನ್ನು ಸ್ಟಾರ್​ ಸ್ಪೋರ್ಟ್​ ತನ್ನ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದು ಇದರಲ್ಲಿ ಪಂತ್​ ಅಂದಿನ ಘಟನೆಯ ಬಗ್ಗೆ ಹೇಳಿದ ಕೆಲವು ತುಣುಕುಗಳಿವೆ.


“ನನ್ನ ಜೀವನದಲ್ಲಿ ಮೊದಲ ಬಾರಿಗೆ, ಈ ಜಗತ್ತಿನಲ್ಲಿ ನನ್ನ ಸಮಯ ಮುಗಿದಿದೆ ಎಂದು ನಾನು ಭಾವಿಸಿದೆ. ಅಪಘಾತದ ಸಮಯದಲ್ಲಿ ನನಗೆ ಗಾಯಗಳ ಬಗ್ಗೆ ಅರಿವಿತ್ತು. ಆದರೆ, ನಾನು ಅದೃಷ್ಟಶಾಲಿಯಾಗಿದ್ದೆ. ಕಣ್ಣು ತೆರೆಯುವಷ್ಟರಲ್ಲಿ ಆಸ್ಪತ್ರೆಯಲ್ಲಿದೆ. ಯಾರಾದರೂ ನನ್ನನ್ನು ಉಳಿಸುವ ಪ್ರಯತ್ನ ಮಾಡುತ್ತಾರೆ ಎಂದು ನಾನು ಭಾವಿಸಿದ್ದೆ” ಎಂದು ಪಂತ್ ಈ ವಿಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ Team India : ಬಾಂಗ್ಲಾದೇಶಕ್ಕಿಂತಲೂ ಕೆಳಗಿಳಿದ ಭಾರತ ತಂಡದ ಡಬ್ಯ್ಲುಟಿಸಿ ಸ್ಥಾನ

“ನಾನು ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನಾನು ವೈದ್ಯರನ್ನು ಕೇಳಿದೆ? ಅವರು 16-18 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ಈ ಚೇತರಿಕೆಯ ಸಮಯವನ್ನು ಕಡಿತಗೊಳಿಸಲು ನಾನು ಕಷ್ಟಪಟ್ಟು ಕೆಲಸ ಮಾಡಬೇಕೆಂದು ನನಗೆ ತಿಳಿದಿತ್ತು” ಎಂದು ಪಂತ್ ಹೇಳಿದರು.

ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದ ಪಂತ್​ ಕಾರು

rishabh pant accident


ಸುಟ್ಟ ಗಾಯಗಳು ಹಾಗೂ ಮಂಡಿಗೆ ಗಾಯಗೊಂಡಿಗೆ ರಿಷಭ್​ ಪಂತ್​ಗೆ ಆರಂಭದಲ್ಲಿ ಡೆಹ್ರಾಡೂನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಪಂತ್​ ದುಬೈಯಲ್ಲಿ ಕ್ರಿಸ್​ಮಸ್​ ಪಾರ್ಟಿಯಲ್ಲಿ ಮುಗಿಸಿ ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್​ಪ್ರೈಸ್​ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್​ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. 

ಹರಿಯಾಣ ರಾಜ್ಯ ಸಾರಿಗೆ ನಿಗಮದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್‌ಜೀತ್ ಅಪಘಾತಕ್ಕೀಡಾಗಿ ನೋವಿನಿಂದ ನರಳುತ್ತಿದ್ದ ಕ್ರಿಕೆಟಿಗ ರಿಷಭ್​ ಪಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪಾಣ ಉಳಿಸುವಂತೆ ಮಾಡಿದ್ದರು. ರಸ್ತೆ ವಿಭಜಕಕ್ಕೆ ಕಾರೊಂದು ಡಿಕ್ಕಿ ಹೊಡೆದದ್ದನ್ನು ನೋಡಿದ ಸುಶೀಲ್ ಕುಮಾರ್ ಕುಮಾರ್​ ಮತ್ತು ಪರಮ್‌ಜೀತ್ ತಕ್ಷಣ ಬಸ್​ ನಿಲ್ಲಿಸಿ ಪಂತ್​ ಅವರಿಗೆ ಆರೈಕೆ ಮಾಡಿದ್ದರು.

rishabh pant accident


ರಿಷಭ್​ ಪಂತ್​ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್​ ಕ್ರಿಕೆಟ್​ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್​ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್​ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು.

rishabh pant accident


ಮೊದಲ ಬಾರಿಗೆ ಪಂತ್​ ಅವರು ತಮ್ಮ ಚೇತರಿಕೆ ಅಪ್​ಡೇಟ್​ ನೀಡಿದ್ದು ಊರುಗೋಲಿನ ಸಹಾಯದಿಂದ ನಡೆದಾಡುವ ಫೋಟೊ ಹಂಚಿಕೊಂಡು. ಬಳಿಕ ಸ್ವಿಮಿಂಗ್​ ಪೂಲ್​ನಲ್ಲಿ ನಡೆದಾಡುವ ಮೂಲಕ. ಹೀಗೆ ಚೇತರಿಕೆಯ ಎಲ್ಲ ಹಂತವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದರು. ಇದೀಗ ಸಂಪೂರ್ಣವಾಗಿ ಗುಣಮುಖರಾಗಿರುವ ಅವರು ಈ ವರ್ಷ ಐಪಿಎಲ್​ ಆಡುವ ಮೂಲಕ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದಷ್ಟು ಬೇಗ ಅವರು ಕ್ರಿಕೆಟ್​ ಮೈದಾನಕ್ಕೆ(rishabh pant comeback) ಬರಲಿ ಎಂಬುದು ಅವರ ಅಭಿಮಾನಿಗಳ(rishabh pant fans) ಆಶಯಾಗಿದೆ.

Exit mobile version