ನವ ದೆಹಲಿ: ಬೆಲ್ಜಿಯಂನಲ್ಲಿ ನಡೆದ ಫಾರ್ಮುಲಾ ರೀಜನಲ್ ಯುರೋಪಿಯನ್ ಚಾಂಪಿಯನ್ಷಿಪ್ನಲ್ಲಿ(Car Race) ಅವಘಡ ಉಂಟಾಗಿ ಎಮ್ಪಿ ಮೋಟೋಸ್ಪೋರ್ಟ್ಸ್ ತಂಡದ ಯುವ ಚಾಲಕ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಮೋಟೋಸ್ಪೋಟ್ಸ್ ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಡಚ್ ಮೂಲದ 18 ವರ್ಷದ ಡಿಲಾನೊ ವ್ಯಾನ್ಟ್ ಹಾಫ್ ಮೃತಪಟ್ಟವರು ಎಂದು ಸಂಘಟಕರು ಶನಿವಾರ ತಿಳಿಸಿದ್ದಾರೆ. ಅವರು ಓಡಿಸುತ್ತಿದ್ದ ಕಾರು ಟ್ರ್ಯಾಕ್ನಲ್ಲಿ ಹಲವು ತುಂಡುಗಳಾಗಿ ಬಿದ್ದಿದ್ದು ಘಟನೆಯ ತೀವ್ರತೆಗೆ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
18 ವರ್ಷದ ಎಂಪಿ ಮೋಟಾರ್ ಸ್ಪೋರ್ಟ್ ಚಾಲಕ ಸ್ಪಾ-ಫ್ರಾಂಕೋರ್ಚಾಂಪ್ಸ್ ಸರ್ಕೀಟ್ನಲ್ಲಿ ಬೆಳಿಗ್ಗಿನ ರೇಸ್ನಲ್ಲಿ ಸ್ಪರ್ಧಿಸುತ್ತಿದ್ದರು. ಚಾಲಕ ಡಿಲಾನೊ ವ್ಯಾನ್’ಟಿ ಹಾಫ್ ಅವರು ಅವಘಡದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರೇಸ್ಗೆ ಸಂಬಂಧಿಸಿದ ಪ್ರತಿಯೊಬ್ಬರೂ ಆಘಾತಕ್ಕೊಳಗಾಗಿದ್ದಾರೆ ಎಂದು ರೇಸ್ ಸಂಘಟಕರುತಿಳಿಸಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಎಂಪಿ ಮೋಟಾರ್ ಸ್ಪೋರ್ಟ್ ಗೆ ನಮ್ಮ ಸಂತಾಪಗಳು ಎಂದು ಬರೆದುಕೊಂಡಿದೆ.
ಇದನ್ನೂ ಓದಿ : World Cup 2023 : ಇದು ಆಘಾತಕಾರಿ ಸುದ್ದಿ; ಭಾರತದಲ್ಲಿ ನಡೆಯುವ ವಿಶ್ವ ಕಪ್ಗೆ ವೆಸ್ಟ್ ಇಂಡೀಸ್ ತಂಡ ಇಲ್ಲ!
ಎಫ್ಆರ್ಇಸಿ ಚಾಲಕನ ಕುಟುಂಬ, ತಂಡ ಮತ್ತು ಸ್ನೇಹಿತರಿಗೆ ಸಂತಾಪವನ್ನು ವ್ಯಕ್ತಪಡಿಸಿದೆ. ಸ್ಪಾ ರೇಸ್ ನ ಮುಖ್ಯ ರೇಸ್ ಆರಂಭಕ್ಕೆ ಮೊದಲು ಒಂದು ನಿಮಿಷ ಮೌನ ಆಚರಿಸಲಾಯಿತು. 2019 ರಲ್ಲಿ ಬೆಲ್ಜಿಯಂ ಗ್ರ್ಯಾನ್ ಪ್ರಿ ಫಾರ್ಮುಲಾ 2 ರೇಸ್ ಸಮಯದಲ್ಲಿ ಫ್ರೆಂಚ್ ಚಾಲಕ ಆಂಥೋಯಿನ್ ಹಬರ್ಟ್ ಅಪಘಾತದಲ್ಲಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.
Racing for you today. Rest in Peace Dilano Van ‘t Hoff ❤️ pic.twitter.com/RzDO22o6LO
— Lando Norris (@LandoNorris) July 1, 2023