Site icon Vistara News

MS Dhoni : ಧೋನಿ ಮುಂದಿನ ವರ್ಷವೂ ಆಡುತ್ತಾರೆ ಎಂಬ ಸೂಚನೆ ನೀಡಿದ ಡ್ವೇನ್​ ಬ್ರಾವೊ

Dwayne Bravo hints that Dhoni will play next year as well

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) (IPL 2023) 16ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ (CSK) ಫೈನಲ್​​ಗೆ ಪ್ರವೇಶ ಪಡೆದಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ತಂಡವು ಫೈನಲ್ ತಲುಪುವ ಮತ್ತೊಂದು ಅವಕಾಶವನ್ನು ಪಡೆದುಕೊಂಡಿದೆ. ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಅವರು ಎದುರಿಸಲಿದ್ದಾರೆ.

ಈ ಎಲ್ಲ ಸುದ್ದಿಗಳ ನಡುವೆ ಮಹೇಂದ್ರ ಸಿಂಗ್ ಧೋನಿ (MS Dhoni) 2023ರ ಋತುವಿನ ಬಳಿಕ ಆಡುವುದಿಲ್ಲ ಎಂಬ ಊಹಾಪೋಹಗಳು ಹರಡಿವೆ. 2024ರ ಆವೃತ್ತಿಯಲ್ಲಿ ಫ್ರಾಂಚೈಸಿಗೆ ಮತ್ತೆ ಮರಳುತ್ತೀರಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವನ್ನು ಅವರು ಕೊಟ್ಟಿಲ್ಲ. ಹೀಗಾಗಿ ಚರ್ಚೆ ಮುಂದುವರಿದಿದೆ. ಏತನ್ಮಧ್ಯೆ, ಸಿಎಸ್​ಕೆ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಸಹಾಯಕ ಬಳಗದಲ್ಲಿರುವ ಡ್ವೇನ್​ ಬ್ರಾವೊ (Dwayne Bravo) ಮುಂದಿನ ಆವೃತ್ತಿಯಲ್ಲೂ ಧೋನಿ ಆಡಲಿದ್ದಾರೆ ಎಂಬ ಮಾಹಿತಿಯನ್ನು ಪ್ರಕಟಿಸಿದ್ದಾರೆ.

ಕ್ವಾಲಿಫೈಯರ್​ ಪಂದ್ಯದಲ್ಲಿ ಗೆದ್ದ ಬಳಿಕ ಮಾತನಾಡಿದ್ದ ಮಹೇಂದ್ರ ಸಿಂಗ್ ಧೋನಿ, ಇದು ಭಾರಿ ಹಾನಿಯನ್ನುಂಟು ಮಾಡುತ್ತದೆ. ನಾನು ಅಕ್ಷರಶಃ ನಾಲ್ಕು ತಿಂಗಳುಗಳಿಂದ ಮನೆಯಿಂದ ಹೊರಗಿದ್ದೇನೆ ಎಂದು ಹೇಳಿದ್ದರು.

ನಾನು ಯಾವಾಗಲೂ ಬೇಕಾದರೂ ಸಿಎಸ್​ಕೆ ತಂಡಕ್ಕೆ ಬರುತ್ತೇನೆ. ಜನವರಿ 31ರಂದು ನಾನು ಮನೆಯಿಂದ ಹೊರಬಂದು, ಮಾರ್ಚ್ 2 ಅಥವಾ 3 ರಿಂದ ಅಭ್ಯಾಸ ಮಾಡಲು ಪ್ರಾರಂಭಿಸಿದೆ. ಮುಂದಿನ ಆವೃತ್ತಿ ಆರಂಭವಾಗಲು ಇನ್ನೂ ಸಾಕಷ್ಟು ಸಮಯವಿದೆ. ಈಗಲೇ ನಿವೃತ್ತಿ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಮುಂದಿನ ಹರಾಜಿನ ವೇಳೆ ಎಲ್ಲವೂ ಗೊತ್ತಾಗಲಿದೆ ಎಂದು ಧೋನಿ ಹೇಳಿದ್ದಾರೆ.

ಇದನ್ನೂ ಓದಿ : IPL 2023: ಚಹರ್​ ಮಂಕಡಿಂಗ್ ಪ್ರಯತ್ನ​ ಕಂಡ ಬಳಿಕ ಧೋನಿಯ ರಿಯಾಕ್ಷನ್​ ಹೇಗಿತ್ತು?

ಧೋನಿಯ ಮಾಜಿ ಸಹ ಆಟಗಾರ ಹಾಗೂ ತಂಡದ ಬೌಲಿಂಗ್ ಕೋಚ್ ಡ್ವೇನ್ ಬ್ರಾವೊ ಮಾತನಾಡುತ್ತಾ ಮುಂದಿನ ಆವೃತ್ತಿಯಲ್ಲಿ ಧೋನಿ ಆಟಗಾರನಾಗಿ ತಂಡಕ್ಕೆ ಮರಳುತ್ತಾರೆ ಎಂದು ದೃಢಪಡಿಸಿದ್ದಾರೆ. ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್​​ಗೆ ನೀಡಿದ ಸಂದರ್ಶನದಲ್ಲಿ, ನಿರೂಪಕಿ ಮಾಯಂತಿ ಲ್ಯಾಂಗರ್ ಜತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರಾವೋ 100 ಪ್ರತಿಶತ ಎಂದು ಹೇಳಿದ್ದಾರೆ.

“ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅವಕಾಶವನ್ನು ಬಳಸಿಕೊಳ್ಳುತ್ತೇವೆ. ಹೀಗಾಗಿ ಸಿಎಸ್​ಕೆ ಪರ ಮತ್ತೊಂದು ಬಾರಿ ಆಡಲಿದ್ದಾರೆ ಎಂದು ಬ್ರಾವೋ ಹೇಳಿದರು.

“ತಂಡದ ಎಲ್ಲರೂ ಚೆನ್ನಾಗಿ ಬ್ಯಾಟ್​ ಮಾಡುತ್ತಿದ್ದಾರೆ. ಅಜಿಂಕ್ಯ ರಹಾನೆ, (ಶಿವಂ) ದುಬೆ ತಂಡಕ್ಕೆ ದೊಡ್ಡ ಕೊಡುಗೆಗಳನ್ನು ಕೊಡುತ್ತಿದ್ದಾರೆ. ಹೀಗಾಗಿ ಧೋನಿಯ ಲಭ್ಯತೆ ಸುಲಭವಿದೆ. ಧೋನಿ ಬ್ಯಾಟಿಂಗ್ ಮಾಡುವ ಅಗತ್ಯವೇನೂ ಇಲ್ಲ. ಅವರು ಒತ್ತಡದ ಸಂದರ್ಭದಲ್ಲಿ ತಂಡವನ್ನು ಕಾಪಾಡಿದರೆ ಸಾಕು ಬ್ರಾವೊ ಹೇಳಿದ್ದಾರೆ.

Exit mobile version