Site icon Vistara News

Ellyse Perry: ಆರ್​ಸಿಬಿ ಬ್ಯಾಟರ್​ ಎಲ್ಲಿಸ್‌ ಪೆರ್ರಿ ಸಿಕ್ಸರ್​ ಏಟಿಗೆ ಕಾರಿನ ಕಿಟಕಿ ಗಾಜು ಪುಡಿಪುಡಿ

Ellyse Perry

ಬೆಂಗಳೂರು: ಯುಪಿ ವಾರಿಯರ್ಸ್​ ವಿರುದ್ಧ ಸಾಗುತ್ತಿರುವ ಡಬ್ಬ್ಯುಪಿಎಲ್​ ಟೂರ್ನಿಯ 11ನೇ ಪಂದ್ಯದಲ್ಲಿ ಆರ್​ಸಿಯ ಬ್ಯಾಟರ್​, ಆಸ್ಟ್ರೇಲಿಯಾದ ಎಲ್ಲಿಸ್‌ ಪೆರ್ರಿ(Ellyse Perry) ಅವರು ಬಾರಿಸಿದ ಬಲಿಷ್ಠ ಸಿಕ್ಸರ್ ರಭಸಕ್ಕೆ ​ಕಾರಿನ ಕಿಟಕಿ ಗಾಜು ಪುಡಿಪುಡಿಯಾಗಿದೆ. ಈ ವಿಡಿಯೊ ವೈರಲ್​ ಆಗಿದೆ.

ಟೂರ್ನಿಯಲ್ಲಿ ಸೂಪರ್ ಸ್ಟ್ರೈಕರ್ ಪಡೆದ ಆಟಗಾರ್ತಿಗೆ ಕಾರನ್ನು ಪ್ರಶಸ್ತಿಯಾಗಿ ನೀಡಲಾಗುತ್ತದೆ. ಈ ಬಾರಿ ಟಾಟಾ ಪಂಚ್​ ಕಾರನ್ನು ಪ್ರಶಸ್ತಿಯಾಗಿ ನೀಡಲಾಗುವುದು. ಹೀಗಾಗಿ ಈ ಕಂಪೆನಿಯ ಕಾರೊಂದನ್ನು ಪ್ರದರ್ಶನವಾಗಿ ಪ್ರತಿ ಪಂದ್ಯದಲ್ಲಿಯೂ ಇರಿಸಲಾಗುತ್ತದೆ. ಎಲ್ಲಿಸ್‌ ಪೆರ್ರಿ ಬಾರಿಸಿದ ಸಿಕ್ಸರ್​ ನೇರವಾಗಿ ಕಾರಿನ ಕಿಟಕಿ ಗಾಜಿಗೆ ಬಿದ್ದಿದೆ. ಚೆಂಡು ಬಿದ್ದ ರಭಸಕ್ಕೆ ಗಾಜು ಪುಡಿಪುಡಿಯಾಗಿದೆ. 16 ಆವೃತ್ತಿಯ ಪುರುಷರ ಐಪಿಎಲ್​ ಟೂರ್ನಿಯಲ್ಲಿಯೂ ಇದುವರೆಗೆ ಯಾರು ಕೂಡ ಸಿಕ್ಸರ್​ನಿಂದ ಕಾರಿನ ಗಾಜು ಹೊಡೆಯಲು ಸಾಧ್ಯವಾಗಿರಲಿಲ್ಲ. ಈ ಸಾಧನೆಯನ್ನು ಮಹಿಳಾ ಕ್ರಿಕೆಟರ್​ ಮಾಡಿದ್ದು ನಿಜ್ಜಕ್ಕೂ ಮೆಚ್ಚಲೇ ಬೇಕು.

ದೀಪ್ತಿ ಶರ್ಮ ಅವರು ಎಸೆದ 19ನೇ ಓವರ್​ನ 5ನೇ ಎಸೆತದಲ್ಲಿ ಎಲ್ಲಿಸ್‌ ಪೆರ್ರಿ ಈ ಸಿಕ್ಸರ್​ ಬಾರಿಸಿದರು. ಎಲ್ಲಿಸ್‌ ಪೆರ್ರಿ ಅವರ ಭಯಾನಕ ಸಿಕ್ಸರ್​ನ ಫೋಟೊ ಮತ್ತು ವಿಡಿಯೊ ವೈರಲ್​ ಆಗಿದೆ. ಅಲ್ಲದೆ ‘ಪಂಚ್​ಗೆ ಸೂಪರ್​ ಪಂಚ್​ ನೀಡಿದ ಎಲ್ಲಿಸ್‌ ಪೆರ್ರಿ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಕಾರಿನ ಹೆಸರು ಪಂಚ್​ ಆಗಿರುವುದರಿಂದ ಈ ಕಮೆಂಟ್​ ಮಾಡಿದ್ದಾರೆ.

ದ್ವಿತೀಯ ಕ್ರಮಾಂಕದಲ್ಲಿ ಆಡಲಿಳಿದ ಎಲ್ಲಿಸ್‌ ಪೆರ್ರಿ ತಾವೆದುರಿಸಿದ ಮೊದಲ ಎಸತವನ್ನೇ ಬೌಂಡರಿಗೆ ಅಟ್ಟಿ ಆರಂಭಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಒಟ್ಟು 37 ಎಸೆತ ಎದುರಿಸಿದ ಅವರು ಸೊಗಸಾದ 4 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 58 ರನ್​ ಚಚ್ಚಿದರು. ಇವರ ಜತೆಗಾರ್ತಿ ಸ್ಮೃತಿ ಮಂಧಾನ ಕೂಡ ಬಿರುಸಿನ ಬ್ಯಾಟಿಂಗ್​ ನಡೆಸಿ ಬರೋಬ್ಬರಿ 10 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 80 ರನ್​ಗಳಿಸಿ ವಿಕೆಟ್​ ಕೈಚೆಲ್ಲಿದರು. ಕೇವಲ 20 ರನ್​ ಕೊರತೆಯಿಂದ ಶತಕ ವಂಚಿತರಾದರು. ಉಭಯ ಆಟಗಾರ್ತಿಯರು ಸೇರಿಕೊಂಡು ನೆರದಿದ್ದ 26 ಸಾವಿರಕ್ಕೂ ಅಧಿಕ ಕ್ರಿಕೆಟ್​ ಪ್ರೇಕ್ಷಕರಿಗೆ ಸಂಪೂರ್ಣ ರಸದೌತಣ ಒದಗಿಸಿದರು. ಇವರ ಬ್ಯಾಟಿಂಗ್​ ಅಬ್ಬರದಿಂದ ಆರ್​ಸಿಬಿ 20 ಓವರ್​ಗಳಲ್ಲಿ 3 ವಿಕೆಟ್​ಗೆ 198 ರನ್​ ಬಾರಿಸಿದೆ.

Exit mobile version