Site icon Vistara News

Eng vs Ned | 50 ಓವರ್‌ಗಳಲ್ಲಿ 498 ರನ್!ಇಂಗ್ಲೆಂಡ್‌ ತಂಡದ ವಿಶ್ವ ದಾಖಲೆ!

Eng vs Ned

ನವ ದೆಹಲಿ: Eng vs Ned | ಇಂಗ್ಲೆಂಡ್ ಹಾಗೂ ನೆದರ್‌ಲ್ಯಾಂಡ್‌ ನಡುವಿನ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ಅತಿ ಹೆಚ್ಚು ಸ್ಕೋರ್‌ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಕೇವಲ 50 ಓವರ್‌ಗಳಲ್ಲಿ 498 ರನ್‌ ಬಾರಿಸಿದ ಇಂಗ್ಲೆಂಡ್‌ ತಂಡ ಕ್ರಿಕೆಟ್‌ ಚರಿತ್ರೆಯಲ್ಲೇ ಅತಿ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದೆ. ಈ ಹಿಂದೆ ತಾನೇ ನಿರ್ಮಿಸಿದ ದಾಖಲೆಯನ್ನು ಇಂಗ್ಲೆಂಡ್‌ ತಂಡ ಮುರಿದು ಕ್ರಿಕೆಟ್‌ ಪ್ರಿಯರನ್ನು ರೋಮಾಂಚನಗೊಳಿಸಿದೆ.

2018ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ಆಟಗಾರರು 481 ರನ್‌ ಗಳಿಸಿ ಕ್ರಿಕೆಟ್‌ ಚರಿತ್ರೆಯಲ್ಲಿ ಹೊಸ ದಾಖಲೆ ಬರೆದಿದ್ದರು. ಆದರೆ, ಈ ಬಾರಿ ಮಾರ್ಗನ್‌ ಪಡೆ ಆ ದಾಖಲೆಯನ್ನೂ ಮುರಿದಿದೆ.

ಪಂದ್ಯ ಹೇಗಿತ್ತು?

ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಆಟಗಾರರಿಗೆ ಉತ್ತಮವಾದ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್‌ ಜೇಸನ್‌ ರಾಯ್‌ ಎರಡನೇ ಓವರ್‌ನಲ್ಲಿ ಔಟಾಗಿ ಪೆವಿಲಿಯನ್‌ ಸೇರಿದರು. ಆದರೆ, ನಂತರ ಬ್ಯಾಟ್‌ ಮಾಡಿದ ಫಿಲ್‌ ಸಾಲ್ಟ್‌, ಡೇವಿಡ್‌ ಮಲನ್‌ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಸಾಲ್ಟ್ 122 ರನ್‌ ಹಾಗೂ ಮಲನ್‌ 125 ರನ್‌ ಗಳಿಸಿ ಔಟಾದರು. ಆದರೆ, ನಂತರ ಬಂದ ಜಾಸ್‌ ಬಟ್ಲರ್‌ ಕೇವಲ 70 ಎಸೆತಗಳಲ್ಲಿ ಅಜೇಯ 162 ರನ್‌ ಬಾರಿಸಿ ಅಬ್ಬರಿಸಿದರು. ಲಿವಿಂಗ್‌‌ ಸ್ಟೋನ್‌ ಕೂಡ ಕೇವಲ 22 ಎಸೆತಗಳಲ್ಲಿ 66 ರನ್‌ ಗಳಿಸಿ ಮಿಂಚಿದರು

ನೆದರ್‌ಲ್ಯಾಂಡ್ ತಂಡದ ಬೌಲರ್‌ಗಳಿಗೆ ಬೆವರಿಳಿಸಿದ ಇಂಗ್ಲೆಂಡ್‌ ಬ್ಯಾಟರ್‌ಗಳು ಇನಿಂಗ್ಸ್ ಮುಗಿಯುವ ಹೊತ್ತಿಗೆ ವಿಶ್ವ‌ ದಾಖಲೆಯನ್ನೇ ಸೃಷ್ಟಿಸಿದರು.

ಬಟ್ಲರ್‌ಗೆ ಸ್ಕೋರ್‌ 500 ಆಗದ ಬೇಸರ!

ಐತಿಹಾಸಿಕ ಗೆಲುವು ಸಾಧಿಸಿ ವಿಶ್ವದಾಖಲೆ ಬರೆದಿದ್ದರೂ ಇಂಗ್ಲೆಂಡ್‌ ನಾಯಕ ಜಾಸ್‌ ಬಟ್ಲರ್‌ಗೆ ಇದು ಸಮಾಧಾನ ತಂದಿಲ್ಲ. 500ರ ಗಡುವು ದಾಟಲು ಸಾಧ್ಯವಾಗಿಲ್ಲವಲ್ಲ ಎಂದು ಬಟ್ಲರ್‌ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ 500ಕ್ಕೂ ಅಧಿಕ ರನ್‌ ಹೊಡೆಯಲು ನಾವು ಪರಿಶ್ರಮ ಹಾಕುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ನೆದರ್‌ಲ್ಯಾಂಡ್‌ ವಿರುದ್ಧ ಈ ಪಂದ್ಯದಲ್ಲಿ ಇಂಗ್ಲೆಂಡ 232 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ತಂಡಗಳು:

ತಂಡರನ್ಯಾರ ವಿರುದ್ಧ?
ಇಂಗ್ಲೆಂಡ್498/4ನೆದರ್‌ಲ್ಯಾಂಡ್
ಇಂಗ್ಲೆಂಡ್481/6ಆಸ್ಟ್ರೇಲಿಯಾ
ಇಂಗ್ಲೆಂಡ್444/3ಪಾಕಿಸ್ತಾನ
ಶ್ರೀಲಂಕಾ443/9ನೆದರ್‌ಲ್ಯಾಂಡ್
ದಕ್ಷಿಣ ಆಫ್ರಿಕ439/2ವೆಸ್ಟ್‌ ಇಂಡೀಸ್

ಇದನ್ನೂ ಓದಿ: ಇಂಗ್ಲೆಂಡ್‌ ಪ್ರವಾಸಕ್ಕಿಲ್ಲ ಕೆ.ಎಲ್​. ರಾಹುಲ್, ಚಿಕಿತ್ಸೆ ಪಡೆಯಲು ಹಾರುತ್ತಿರೋದೆಲ್ಲಿಗೆ?

Exit mobile version