ಅಹಮದಾಬಾದ್: ಕಳೆದ ಬಾರಿ ವಿಶ್ವಕಪ್ ಫೈನಲಿಸ್ಟ್ಗಳಾದ ಹಾಲಿ ಚಾಂಪಿಯನ್(ICC World Cup 2023) ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್(England vs New Zealand, 1st Match) ವಿಶ್ವಕಪ್ ಸಮರಕ್ಕೆ ಸಜ್ಜಾಗಿದೆ. ಗುರುವಾರ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಇತ್ತಂಡಗಳು ಕಾದಾಡಲಿವೆ. ಈ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಅಣಿಯಾಗಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ದೊಡ್ಡ ಮತ್ತವನ್ನು ಇಲ್ಲಿ ನಿರೀಕ್ಷೆ ಮಾಡಬಹುದು. ಉಭಯ ತಂಡಗಳಲ್ಲಿಯೂ ಸಮರ್ಥ ಆಟಗಾರರು ನೆಚ್ಚಿಕೊಂಡಿದ್ದಾರೆ. ಸ್ಲೋ ವೇಗಿಗಳಿಗೆ ಈ ಪಿಚ್ ಹೆಚ್ಚಿನ ನೆರವು ನೀಡುತ್ತದೆ. ಸ್ಪಿನ್ ಬೌಲಿಂಗ್ ಅಷ್ಟರ ಮಟ್ಟಿಗೆ ಇಲ್ಲಿ ಯಶಸ್ಸು ಕಾಣುವುದು ಕಷ್ಟ.
ವಿಶ್ವಕಪ್ ಮುಖಾಮುಖಿ
12 ಆವೃತ್ತಿಯ ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ 10 ಬಾರಿ ಮುಖಾಮುಖಿಯಾಗಿವೆ. ಇತ್ತಂಡಗಳು ತಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಿವೀಸ್ ಮತ್ತು ಇಂಗ್ಲೆಂಡ್ ತಲಾ ಎರಡು ಪಂದ್ಯಗಳನ್ನು ಆಡಿದ್ದರು. ಇಂಗ್ಲೆಂಡ್ 1 ಪಂದ್ಯ ಗೆದ್ದರೆ, ನ್ಯೂಜಿಲ್ಯಾಂಡ್ 2 ಪಂದ್ಯಗಳನ್ನು ಗೆದ್ದಿದೆ. ಒಟ್ಟಾರೆ ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು 95 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ 45, ಕಿವೀಸ್ 44 ಗೆಲುವು ಕಂಡಿದೆ. 4 ಪಂದ್ಯಗಳು ಫಲಿತಾಂಶ ಕಂಡಿಲ್ಲ,
ಹವಾಮಾನ ವರದಿ
ವಿಶ್ವಕಪ್ ಅಭ್ಯಾಸ ಪಂದ್ಯಕ್ಕೆ ಮಳೆಯ ಭೀತಿ ಕಾಡಿತ್ತು. ಭಾರತದ ಎರಡೂ ಪಂದ್ಯಗಳು ಮಳೆಯಿಂದ ರದ್ದುಗೊಂಡಿತ್ತು. ಆದರೆ ಲೀಗ್ನ ಉದ್ಘಾಟನ ಪಂದ್ಯಕ್ಕೆ ಮಳೆಯ ಯಾವುದೇ ಕಾಟ ಇರದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಮಧ್ಯಾಹ್ನ ಪಂದ್ಯ ಆರಂಭವಾಗುವ ಕಾರಣ ಇಲ್ಲಿ ಬಿಸಿಲ ಧಗೆ ಹೆಚ್ಚಾಗಿ ಇರರಲಿದೆ.ಹೀಗಾಗಿ ಮೊದಲು ಫಿಲ್ಡಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಆಯಾಸವಾಗಿ ಬ್ಯಾಟಿಂಗ್ ನಡೆಸಲು ಕಷ್ಟವಾಗುವುದು ಖಚಿತ. ಹೀಗಾಗಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿದರೆ ಉತ್ತಮ.
ಇದನ್ನೂ ಓದಿ ICC World Cup 2023: ‘ಚೋಕರ್ಸ್’ ಹಣೆಪಟ್ಟಿ ಕಳಚಲು ದಕ್ಷಿಣ ಆಫ್ರಿಕಾ ಪಣ; ಹೀಗಿದೆ ತಂಡದ ಬಲಾಬಲ
ಇಂಗ್ಲೆಂಡ್ ತಂಡದ ಪ್ಲಸ್ ಪಾಯಿಂಟ್: ಯಾವಾಗಲೂ ಸ್ಥಿರವಾಗಿ ಬ್ಯಾಟ್ ಬೀಸುವ ಡೇವಿಡ್ ಮಲಾನ್ ಏಕದಿನದ ಅತ್ಯುನ್ನತ ಶ್ರೇಯಾಂಕದ ಬ್ಯಾಟರ್ ಆಗಿದ್ದಾರೆ. ನಾಯಕ ಜಾಸ್ ಬಟ್ಲರ್, ಬೇರ್ಸ್ಟೋ, ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಅವರನ್ನೊಳಗೊಂಡ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ.
ಮೈನಸ್ ಪಾಯಿಂಟ್: ಇಂಗ್ಲೆಂಡ್ಗೆ ಇರುವ ಮೈನಸ್ ಪಾಯಿಂಟ್ ಎಂದರೆ ಅದು ಜೋಫ್ರಾ ಆರ್ಚರ್ ಅವರ ಅಲಭ್ಯತೆ. ಕಳೆದ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಫೈನಲ್ ಪಂದ್ಯದ ಸೂಪರ್ ಓವರ್ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ನ್ಯೂಜಿಲ್ಯಾಂಡ್ ತಂಡದ ಪ್ಲಸ್ ಪಾಯಿಂಟ್: ಕೇನ್ ವಿಲಿಯಮ್ಸನ್ ಎಂಬ ಕೂಲ್ ಕ್ಯಾಪ್ಟನ್ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ನ್ಯೂಜಿಲ್ಯಾಂಡ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಒತ್ತಡದ ಸಂದರ್ಭದಲ್ಲೂ ತಂಡವನ್ನು ನಿಭಾಯಿಸುವ ರೀತಿ, ತೆಗೆದುಕೊಳ್ಳುವ ನಿರ್ಧಾರಗಳು ನ್ಯೂಜಿಲ್ಯಾಂಡ್ ತಂಡದ ಭವಿಷ್ಯವನ್ನೇ ನಿರ್ಧರಿಸಲಿದೆ.
ಇದನ್ನೂ ಓದಿ ICC World Cup 2023: ವಿಶ್ವಕಪ್ ಟಿಕೆಟ್ ಕೇಳಬೇಡಿ; ಕೊಹ್ಲಿಯ ಕ್ಯೂಟ್ ರಿಕ್ವೆಸ್ಟ್
ಮೈನಸ್ ಪಾಯಿಂಟ್: ಭಾರತದ ನೆಲದಲ್ಲಿ ಸ್ಪಿನ್ನರ್‌ಗಳನ್ನು ಎದುರಿಸುವುದು ನ್ಯೂಜಿಲ್ಯಾಂಡ್ ತಂಡಕ್ಕೆ ಕಷ್ಟವಾಗಬಹುದು. ಅದರಲ್ಲೂ, ಗ್ಲೆನ್ ಫಿಲಿಪ್ಸ್, ಡೆರಿಲ್ ಮಿಚೆಲ್ ಅವರು ಭಾರತದಲ್ಲಿ ಸ್ಪಿನ್ನರ್‌ಗಳಿಗೆ ತಡಕಾಡಿದ ಉದಾಹರಣೆ ಸಾಕಷ್ಟಿವೆ.
ಸಂಭಾವ್ಯ ತಂಡಗಳು
ಇಂಗ್ಲೆಂಡ್: ಜಾಸ್ ಬಟ್ಲರ್ (ನಾಯಕ),ಡೇವಿಡ್ ಮಾಲನ್, ಜಾನಿ ಬೆರ್ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.
ನ್ಯೂಜಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.