ಲಂಡನ್: ಓವಲ್ನಲ್ಲಿ ಸೋಮವಾರ ನಡೆದ ಆ್ಯಶಸ್ ಸರಣಿಯ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು 49 ರನ್ಗಳಿಂದ ಸೋಲಿಸಿ ಆಶಸ್ ಸರಣಿಯನ್ನು 2-2 ರಿಂದ ಸಮಬಲಗೊಳಿಸಿತು. ಗೆಲ್ಲಲು 384 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 264 ರನ್ ಬಾರಿಸಿತ್ತು. ಅಂತಿಮವಾಗಿ ಮಾರಕ ದಾಳಿ ಸಂಘಟಿಸಿದ ಇಂಗ್ಲೆಂಡ್ ಬೌಳರ್ಗಳು 334 ರನ್ಗಳಿಗೆ ಎದುರಾಳಿ ತಂಡವನ್ನು ಆಲ್ಔಟ್ ಮಾಡಿದರು. ವಿಶೇಷ ಏನೆಂದರೆ ಈ ಸರಣಿಯಲ್ಲಿ ನಿವೃತ್ತಿ ಘೋಷಿಸಿದ್ದ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್, ತಮ್ಮ ವೃತ್ತಿ ಜೀವನದ ಕೊನೇ ಎಸೆತದಲ್ಲಿ ಅಲೆಕ್ಸ್ ಕ್ಯೇರಿ ವಿಕೆಟ್ ಪಡೆಯುವ ಮೂಲಕ ಗೆಲುವನ್ನು ಸ್ಮರಣೀಯಗೊಳಿಸಿದರು.
ಇಂಗ್ಲೆಂಡ್ನ ಬೌಲರ್ಗಳಾ ಮೊಯಿನ್ ಅಲಿ ಮತ್ತು ಕ್ರಿಸ್ ವೋಕ್ಸ್ ಕೊನೇ ಹಂತದಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಮುರಿಯಿತು. ಅದಕ್ಕಿಂತ ಮೊದಲು ಮೂರು ಗಂಟೆಗಳ ಹೆಚ್ಚು ಕಾಲ ಮಳೆ ಸುರಿಯಿತು. ಪಂದ್ಯ ಡ್ರಾ ಗೊಂಡಿದ್ದರೆ ಇಂಗ್ಲೆಂಡ್ ತಂಡ ಸರಣಿ ಕಳೆದುಕೊಳ್ಳುತ್ತಿತ್ತು. ಆದರೆ, ಮಳೆ ನಿಂತ ಬಳಿಕ ಬೌಲಿಂಗ್ ಮ್ಯಾಜಿಕ್ ಮಾಡಿದ ಇಂಗ್ಲೆಂಡ್ ಬೌಲರ್ಗಳು ತಂಡಕ್ಕೆ ಗೆಲುವು ತಂದುಕೊಟ್ಟರು.
ಆಸ್ಟ್ರೇಲಿಯ ತಂಡ ಪರ ಸ್ಟೀವ್ ಸ್ಮಿತ್ ಅಜೇಯ 40 ರನ್ ಗಳಿಸಿದರೆ, ಎಡಗೈ ಬ್ಯಾಟರ್ಟ್ರಾವಿಸ್ ಹೆಡ್ 43 ರನ್ ಗಳಿಸಿದರು. 89 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಮಿತ್ 54 ರನ್ಗಳಿಗೆ ಔಟಾದರು. ಆಲ್ರೌಂಡರ್ ಮಿಚೆಲ್ ಮಾರ್ಷ್ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್ ಅವರ ಅದ್ಭುತ ಕ್ಯಾಚ್ಗೆ ಬಲಿಯಾದರು.
ಬೌಲರ್ ವೋಕ್ಸ್ ಮತ್ತು ಫೀಲ್ಡರ್ ಕ್ರಾವ್ಲಿ ಮತ್ತೆ ಜೊತೆಗೂಡಿ ಮಿಚೆಲ್ ಸ್ಟಾರ್ಕ್ ಅವರನ್ನು ಡಕ್ ಔಟ್ ಮಾಡಿದರು. ನಾಯಕ ಪ್ಯಾಟ್ ಕಮಿನ್ಸ್ 9 ರನ್ ಬಾರಿಸಿ ಮೊಯಿನ್ ಅಲಿ ಎಸೆತಕ್ಕೆ ಬಲಿಯಾದರು. ಇದಕ್ಕೂ ಮುನ್ನ ವೋಕ್ಸ್ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅವರ ವಿಕೆಟ್ ಪಡೆದಿದ್ದರು. ಮಾರ್ನಸ್ ಲಾಬುಶೇನ್ ಗಳಿಕೆ 13 ರನ್.
ಇದನ್ನೂ ಓದಿ : Ashes 2023: ಆ್ಯಶಸ್ ಟೆಸ್ಟ್ ಸರಣಿಯಿಂದ ಹೊರಬಿದ್ದ ನಥಾನ್ ಲಿಯೋನ್
ಪಂದ್ಯದ ನಂತರ ನಿವೃತ್ತಿ ಘೋಷಿಸುವುದಾಗಿ ಶನಿವಾರ ಆಘಾತಕಾರಿ ಘೋಷಣೆ ಮಾಡಿದ ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ಗೆ ಈ ಗೆಲುವು ಉಡುಗೊರೆಯಂತೆ ದೊರೆಯಿತು.