ಧರ್ಮಶಾಲಾ : ಡೇವಿಡ್ ಮಲಾನ್ ಅವರ ಅಮೋಘ 140 ರನ್ ಹಾಗೂ ರೀಸ್ ಟೋಪ್ಲೆಯ 4 ವಿಕೆಟ್ ಸಾಧನೆಯೊಂದಿಗೆ ಮಿಂಚಿದ ಇಂಗ್ಲೆಂಡ್ ತಂಡ ವಿಶ್ವ ಕಪ್ನ (ICC world Cup 2023) ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 137 ರನ್ಗಳಿಂದ ಸೋಲಿಸಿದೆ. ಇದರೊಂದಿಗೆ ಆಂಗ್ಲರ ಪಡೆ ಗೆಲುವಿನ ಹಳಿಗೆ ಮರಳಿದೆ. ಜೋಸ್ ಬಟ್ಲರ್ ನೇತೃತ್ವದ ಮಾಜಿ ಚಾಂಪಿಯನ್ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ 9 ವಿಕೆಟ್ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಇದೀಗ ದೊಡ್ಡ ಅಂತರದ ಗೆಲುವು ಸಾಧಿಸುವ ಮೂಲಕ ವಿಶ್ವಾಸ ಮೂಡಿಸಿಕೊಂಡಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 364 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾ ಬಳಗ 48. 2 ಓವರ್ಗಳಲ್ಲಿ 227 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಬಾಂಗ್ಲಾದೇಶ ವಿಶ್ವ ಕಪ್ನLFLI ತನ್ನ ಮೊದಲ ಸೋಲಿಗೆ ಒಳಗಾಯಿತು. ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡ ಅಫಘಾನಿಸ್ತಾನ ತಂಡವನ್ನು ಮಣಿಸಿತ್ತು.
England step up in Dharamsala to garner their first #CWC23 win ⚡#ENGvBAN 📝: https://t.co/5YbMGSEr8G pic.twitter.com/oL2N4fiViz
— ICC Cricket World Cup (@cricketworldcup) October 10, 2023
ಬ್ಯಾಟಿಂಗ್ ಆಹ್ವಾನ ಪಡೆದ ಬಾಂಗ್ಲಾದೇಶ ತಂಡ ಅತ್ಯುತ್ತಮ ಆರಂಭ ಪಡೆಯಿತು. ಜಾನಿ ಬೇರ್ಸ್ಟೋವ್ (52) ಹಾಗೂ ಡೇವಿಡ್ ಮಲಾನ್ ಅವರ ಬ್ಯಾಟಿಂಗ್ ನೆರವಿನಿಂದ ಮೊದಲ ವಿಕೆಟ್ಗೆ 115 ರನ್ ಬಾರಿಸಿತು. 18 ಓವರ್ಗಳ ಒಳಗೆ ಇಷ್ಟೊಂದು ರನ್ ಬಾರಿಸಿದ್ದ ಕಾರಣ ಇಂಗ್ಲೆಂಡ್ ತಂಡ ದೊಡ್ಡ ಮೊತ್ತ ಬಾರಿಸುವ ಸುಳಿವು ಸಿಕ್ಕಿತು. ಬೇರ್ಸ್ಟೋವ್ ಔಟಾದ ಬಳಿಕ ಕ್ರೀಸ್ಗೆ ಇಳಿದ ಸ್ಪೆಷಲಿಸ್ಟ್ ಬ್ಯಾಟರ್ ಜೋ ರೂಟ್ 68 ಎಸೆತಗಳಲ್ಲಿ 82 ರನ್ ಬಾರಿಸಿ ಮಿಂಚಿದರು. ಮಲಾನ್ ಹಾಗೂ ರೂಟ್ ಮೂರನೇ ವಿಕೆಟ್ಗೆ 151 ರನ್ಗಳ ಜತೆಯಾಟವಾಡಿತು.
ಈ ಸುದ್ದಿಗಳನ್ನೂ ಓದಿ
Viral Video: ಶತಕ ವಂಚಿತವಾದ ಬೇಸರದಲ್ಲಿ ತಲೆ ಚಚ್ಚಿಕೊಂಡ ವಿರಾಟ್ ಕೊಹ್ಲಿ
Virat kohli : ನಾಲ್ಕು ಪದಗಳಲ್ಲಿ ಅಣ್ಣನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿಯ ತಂಗಿ
ICC World Cup 2023: ಒಂದೇ ಎಸೆತದಲ್ಲಿ 13 ರನ್ ಗಳಿಸಿದ ಮಿಚೆಲ್ ಸ್ಯಾಂಟ್ನರ್
ಮಲಾನ್ ಔಟಾಗುತ್ತಿದ್ದಂತೆ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬಲ ಕುಗ್ಗಿತು. ನಾಯಕ ಬಟ್ಲರ್ 20 ರನ್ ಬಾರಿಸಿದರೆ ಹ್ಯಾರಿ ಬ್ರೂಕ್ ಕೂಡ ಅಷ್ಟೇ ರನ್ ಪೇರಿಸಿದರು. ಲಿವಿಂಗ್ಸ್ಟನ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಸ್ಯಾಮ್ ಕರ್ರನ್ 11, ಕ್ರಿಸ್ ವೋಕ್ಸ್ 14, ಅದಿಲ್ ರಶೀದ್ 11 ರನ್ ಬಾರಿಸಿದರು. ರನ್ ಗಳಿಕೆಯ ಹೊರತಾಗಿಯೂ ಇಂಗ್ಲೆಂಡ್ ತಂಡ ಸತತವಾಗಿ ವಿಕೆಟ್ ಕಳೆದುಕೊಂಡಿತು.
ಲಿಟನ್ ಹೋರಾಟ
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಬಾಂಗ್ಲಾದೇಶ ತಂಡ ಶೋಚನೀಯ ಆರಂಭ ಪಡೆಯಿತು. 26ರನ್ಗಳಿಗೆ 3 ವಿಕೆಟ್ ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಆರಂಭಿಕ ಬ್ಯಾಟರ್ ಲಿಟನ್ ದಾಸ್ 76 ರನ್ ಬಾರಿಸಿ ತಂಡದ ಇತರರಿಗೆ ವಿಶ್ವಾಸ ಮೂಡಿಸಿದರು. ವಿಕೆಟ್ಕೀಪರ್ ಮುಷ್ಫಿಕರ್ ರಹೀಮ್ 51 ರನ್ ಬಾರಿಸಿ ಮಿಂಚಿದರು. ತೌಹಿದ್ ಹೃದೋಯ್ 39 ಬಾರಿಸಿ ಸ್ವಲ್ಪ ಹೊತ್ತು ಕ್ರೀಸ್ನಲ್ಲಿ ನಿಂತರು. ಆದರೆ, ಉಳಿದ ಬ್ಯಾಟರ್ಗಳಿಂದ ಅಷ್ಟೊಂದು ನೆರವು ಸಿಗಲಿಲ್ಲ. ಮೆಹೆದಿ ಹಸನ್ 14 ರನ್ ಬಾರಿಸಿದರೆ, ಟಸ್ಕಿನ್ ಅಹಮದ್ 15 ರನ್ ಬಾರಿಸಿದರು. ಸತತವಾಗಿ ವಿಕೆಟ್ ಕಳೆದುಕೊಂಡ ಬಾಂಗ್ಲಾ ಪಡೆ ಅಂತಿಮವಾಗಿ ಸೋಲೊಪ್ಪಿಕೊಂಡಿತು.