ಬರ್ಮಿಂಗ್ಹಮ್: ಬಹುನಿರೀಕ್ಷಿತ ಆ್ಯಶಸ್ 2023ರ (The Ashes 2023) ಮೊದಲ ಟೆಸ್ಟ್ ಪಂದ್ಯ ಶುಕ್ರವಾರ ಆರಂಭಗೊಂಡಿತು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಎಡ್ಜ್ ಬಾಸ್ಟನ್ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಜೋ ರೂಟ್ (ಅಜೇಯ 118 ರನ್) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ. ಬಳಿಕ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಅಂತ್ಯಕ್ಕೆ 14 ರನ್ ಬಾರಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡ ಮೊದಲ ದಿನ ಮೇಲುಗೈ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಜಾಕ್ ಕ್ರಾವ್ಲಿ (61) ಅರ್ಧ ಶತಕ ಬಾರಿಸುವ ಮೂಲಕ ಉತ್ತಮ ಆರಂಭ ತಂದುಕೊಟ್ಟರು. ಇಂಗ್ಲೆಂಡ್ ಸಕಾರಾತ್ಮಕ ಆರಂಭ ಪಡೆದ ಹೊರತಾಗಿಯೂ ಜೋಶ್ ಹೇಜಲ್ವುಡ್ ನಾಲ್ಕನೇ ಓವರ್ನಲ್ಲಿ ಬೆನ್ ಡಕೆಟ್ (12) ಅವರನ್ನು ಔಟ್ ಇಂಗ್ಲೆಂಡ್ 22 ರನ್ಗಳಿಗೆ ಮೊದಲ ವಿಕೆಟ್ ಕಳೆದಕೊಂಡಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಲಿ ಪೋಪ್ 31 ರನ್ ಗಳಿಸಿ ನೇಥನ್ ಲಯಾನ್ಗೆ ವಿಕೆಟ್ ಒಪ್ಪಿಸಿದರು.
ಮತ್ತೊಂದು ತುದಿಯಲ್ಲಿ ಕ್ರಾವ್ಲಿ ಸಕಾರಾತ್ಮಕವಾಗಿ ಬ್ಯಾಟಿಂಗ್ ಮುಂದುವರಿಸಿದರು ಮತ್ತು ತಮ್ಮ ಅರ್ಧಶತಕವನ್ನು ಪೂರೈಸಿದರು. ಆದಾಗ್ಯೂ, ಅವರು ಭೋಜನ ವಿರಾಮದ ವೇಳೆ 61 ವಿಕೆಟ್ ಒಪ್ಪಿಸಿದರು. ಬಳಿಕ ಹ್ಯಾರಿ ಬ್ರೂಕ್ (37 ಎಸೆತಗಳಲ್ಲಿ 32 ರನ್) ಭೋಜನ ವಿರಾಮದ ನಂತರ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಆದರೆ ಲಿಯಾನ್ ಎಸೆತಕ್ಕೆ ವಿಲಕ್ಷಣ ರೀತಿಯಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ನಾಯಕ ಬೆನ್ ಸ್ಟೋಕ್ಸ್ (1) ಮುಂದಿನ ಓವರ್ ನಲ್ಲಿ ಔಟಾಗುವ ಮೂಲಕ ಇಂಗ್ಲೆಂಡ್ ತಂಡ 176 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಮಧ್ಯಮ ಕ್ರಮಾಂಕದಲ್ಲಿ ಜಾನಿ ಬೇರ್ಸ್ಟೋವ್ (78 ಎಸೆತಗಳಲ್ಲಿ 78 ರನ್) ಮತ್ತು ಜೋ ರೂಟ್ 121 ರನ್ಗಳ ಜತೆಯಾಟ ನೀಡಿದರು. ಲಿಯಾನ್ ಎಸೆತಕ್ಕೆ ಸ್ಟಂಪ್ ಆಗಿ ಬೇರ್ಸ್ಟೋವ್ ಕ್ರೀಸ್ ತೊರೆದರು. ಸ್ಪಿನ್ನರ್ ಮೊಯಿನ್ ಅಲಿ (17 ಎಸೆತಗಳಲ್ಲಿ 18 ರನ್) ಅವರ ಸಂಕ್ಷಿಪ್ತ ಇನ್ನಿಂಗ್ಸ್ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ಗಳಿದ್ದವು. ಇಂಗ್ಲೆಂಡ್ ಈ ವೇಳೆ ಇಂಗ್ಲೆಂಡ್ 7 ವಿಕೆಟ್ಗೆ 323 ರನ್ ಬಾರಿಸಿತ್ತು. ಬಳಿಕ ಸ್ಟುವರ್ಟ್ ಬ್ರಾಡ್ 21 ಎಸೆತಗಳಲ್ಲಿ 16 ರನ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ 350 ರನ್ ಗಡಿ ದಾಟಿಸಲು ನೆರವಾದರು. ಮತ್ತೊಂದೆಡೆ, ಜೋ ರೂಟ್ ನಿರಂತರವಾಗಿ ಬ್ಯಾಟ್ ಬೀಸಿದರು.
ಇದನ್ನೂ ಓದಿ : Ashes 2023 : ಐಪಿಎಲ್ನಲ್ಲಿ ಫೇಲ್, ಆ್ಯಶಸ್ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್; ಇಂಗ್ಲೆಂಡ್ ಬ್ಯಾಟರ್ನ ಬ್ಯಾಡ್ಲಕ್!
ಜೋ ರೂಟ್ 30ನೇ ಟೆಸ್ಟ್ ಶತಕ
ದಿನದ 76 ನೇ ಓವರ್ನಲ್ಲಿ ಜೋ ರೂಟ್ ಶತಕದ ಈ ಮೈಲಿಗಲ್ಲನ್ನು ತಲುಪಿದರು. ಅದು ಅವರ 30 ನೇ ಅಂತರರಾಷ್ಟ್ರೀಯ ಟೆಸ್ಟ್ ಶತಕ ಈ ಮೈಲಿಗಲ್ಲನ್ನು ಸಾಧಿಸಿದ ನಂತರ ತಕ್ಷಣವೇ 8 ವಿಕೆಟ್ ನಷ್ಟಕ್ಕೆ 393 ರನ್ನೊಂದಿಗೆ ಇಂಗ್ಲೆಂಡ್ ತಂಡ ಡಿಕ್ಲೇರ್ ಘೋಷಿಸಿತು. ರೂಟ್ ಅಜೇಯ 118 (152) ರನ್ ಗಳಿಸಿದರು. ಒಲಿ ರಾಬಿನ್ಸನ್ (17*) ಅವರೊಂದಿಗೆ ಅಜೇಯರಾಗಿ ಉಳಿದರು. ಅವರಿಬ್ಬರು 43 ರನ್ಗಳ ಜತೆಯಾಟದಲ್ಲಿ ಭಾಗಿಯಾದರು.
ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾದ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅರ್ಧ ಗಂಟೆ ಕಾಲ ಆಡಿದರು. ಆಸ್ಟ್ರೇಲಿಯಾ 4 ಓವರ್ ಗಳಲ್ಲಿ 14 ರನ್ ಬಾರಿಸಿದರು.