Site icon Vistara News

Ind vs eng : ಆಕಾಶ್​ದೀಪ್​ ಭರ್ಜರಿ ಬೌಲಿಂಗ್ ನಡುವೆಯೂ ಉತ್ತಮ ಮೊತ್ತ ಬಾರಿಸಿದ ಇಂಗ್ಲೆಂಡ್

Joe Root

ರಾಂಚಿ: ಇಲ್ಲಿ ಆರಂಭಗೊಂಡಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ (Ind vs eng) ಜೋ ರೂಟ್ (Joe Root) ಅವರ ಉಪಯುಕ್ತ ಶತಕದ ನೆರವಿನಿಂದ ನೆರವಿನಿಂದ ಇಂಗ್ಲೆಂಡ್ ತಂಡ ಉತ್ತಮ ಮೊತ್ತ ಪೇರಿಸಿದೆ. ಮೊದಲ ದಿನದಾಟ ಮುಕ್ತಾಯದ ವೇಳೆಗೆ ಪ್ರವಾಸಿ ತಂಡ 7 ವಿಕೆಟ್ ನಷ್ಟಕ್ಕೆ 302 ರನ್ ಬಾರಿಸಿದೆ. ಕಳೆದ ಮೂರು ಪಂದ್ಯಗಳಲ್ಲಿ ವಿಫಲಗೊಂಡಿದ್ದ ಇಂಗ್ಲೆಂಡ್ ಮಾಜಿ ನಾಯಕ ಅಮೋಘ ಶತಕದ ಮೂಲಕ ಮುನ್ನಡೆ ಟೀಕಾಕಾರಿಗೆ ಉತ್ತರ ನೀಡಿದರು. ಏತನ್ಮಧ್ಯೆ ಭಾರತ ತಂಡದ ಪರ ಪದಾರ್ಪಣೆ ಮಾಡಿರುವ ವೇಗದ ಬೌಲರ್ ಆಕಾಶ್​ ದೀಪ್​ ಮೊದಲ ಸೆಷನ್​ನಲ್ಲಿಯೇ 3 ವಿಕೆಟ್ ಪಡೆದು ಮಿಂಚಿದರು.

ಜಾರ್ಖಂಡ್​ ಕ್ರಿಕೆಟ್​ ಅಸೋಷಿಯೇಷನ್​ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪದಾರ್ಪಣೆ ಮಾಡಿದ ಆಕಾಶ್ ದೀಪ್ ಮಾರಕ ದಾಳಿಗೆ ಪ್ರವಾಸಿ ತಂಡ ಬೆದರಿತು. ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಕೂಡ ಇಂಗ್ಲೆಂಡ್​ ಬ್ಯಾಟರ್​ಗಳಿಗೆ ಸೆಡ್ಡು ಹೊಡೆದರು.

ಆರಂಭಿಕರಾಗಿ ಕಣಕ್ಕಿಳಿದ ಬೆನ್ ಡಕೆಟ್ 11, ಒಲಿ ಫೋಪ್ 0, ಜಾಕ್ ಕ್ರ್ಯಾವ್ಲಿ 42, ಜಾನಿ ಬೈರ್​ಸ್ಟೋ 38, ಬೆನ್​ ಸ್ಟೋಕ್ಸ್ 3, ಬೆನ್ ಫೋಕ್ಸ್ 47 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ 112 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ರೂಟ್​ ಮತ್ತು 7ನೇ ಸ್ಲಾಟ್​ನಲ್ಲಿ ಕಣಕ್ಕಿಳಿದ ಬೆನ್​ ಫೋಕ್ಸ್ ನೆರವಾದರು.

ರೂಟ್​​ 31ನೇ ಟೆಸ್ಟ್ ಶತಕ

ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಜೋ ರೂಟ್ ತನ್ನ 31ನೇ ಟೆಸ್ಟ್ ಶತಕವನ್ನು ಸಿಡಿಸಿ ಸಂಭ್ರಮಿಸಿದರು. 219 ಎಸೆತಗಳಲ್ಲಿ ನೂರರ ಗಡಿ ದಾಟಿದ ರೂಟ್, ಭಾರತದ ವಿರುದ್ಧ 10ನೇ ಟೆಸ್ಟ್​ ಶತಕದ ಸಾಧನೆ ಮಾಡಿದರು. ಅಲ್ಲದೆ, 6ನೇ ವಿಕೆಟ್​ಗೆ ಬೆನ್​ಫೋಕ್ಸ್ ಜೊತೆ ಸೇರಿ 113 ರನ್​ಗಳ ಜೊತೆಯಾಟವಾಡಿದರು. 226 ಎಸೆತಗಳಲ್ಲಿ 9 ಬೌಂಡರಿ ಸಹಿತ 106 ರನ್ ಕಲೆ ಹಾಕಿ ಎರಡನೇ ದಿನಕ್ಕೆ ಆಟ ಮುಂದುವರಿಸಿದ್ದಾರೆ.

ಇದೇ ಮೊದಲ ಬಾರಿಗೆ ಅವಕಾಶ ಪಡೆದ ಒಲಿ ರಾಬಿನ್ಸನ್ 31 ರನ್ ಸಿಡಿಸಿ ರೂಟ್​ಗೆ ನೆರವು ಕೊಡುತ್ತಿದ್ದಾರೆ. ಇಬ್ಬರು ಸೇರಿ 57 ರನ್​ಗಳ ಜತೆಯಾಟ ಆಡಿದ್ದಾರೆ. ಮೊದಲ ಸೆಷನ್​ನಲ್ಲಿ ಐವರನ್ನು ಔಟ್ ಮಾಡಿದ ಭಾರತದ ಬೌಲರ್​​ಗಳು ಎರಡನೇ ಸೆಷನ್​ ವಿಕೆಟ್ ಪಡೆಯಲಿಲ್ಲ. 3ನೇ ಸೆಷನ್​ನಲ್ಲಿ 2 ವಿಕೆಟ್ ಪಡೆದರು.

ಇದನ್ನೂ ಓದಿ : IPL 2024 : ಸಿಎಸ್​ಕೆ ತಂಡದ ಇನ್ನೊಬ್ಬ ಆಲ್​ರೌಂಡರ್​ ಗೆ ಗಾಯ; ಟೂರ್ನಿಗೆ ಮೊದಲೇ ಆಘಾತ

ಆಕಾಶ್ ದೀಪ್ ಭರ್ಜರಿ ಬೌಲಿಂಗ್​

313ನೇ ಟೆಸ್ಟ್ ಪ್ಲೇಯರ್​ ಆಗಿ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದ ಆಕಾಶ್ ದೀಪ್ ಬೆಂಕಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಚೊಚ್ಚಲ ಪಂದ್ಯದಲ್ಲೇ ಆಂಗ್ಲರ ಅಗ್ರ ಕ್ರಮಾಂಕದ ಮೂವರು ಬ್ಯಾಟರ್​​ಗಳನ್ನು ಔಟ್ ಮಾಡಿದರು. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಇಬ್ಬರನ್ನು, ಜಡೇಜಾ ಮತ್ತು ಅಶ್ವಿನ್ ತಲಾ ಒಬ್ಬರನ್ನು ಔಟ್ ಮಾಡಿದ್ದಾರೆ. ಎರಡನೇ ದಿನದಾಟದಲ್ಲಿ ಯಾವ ರೀತಿಯ ಪ್ರದರ್ಶನ ಹೊರ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version