Site icon Vistara News

ICC World Cup 2023 : ರೆಕಾರ್ಡ್ ಅಲರ್ಟ್​​; ವಿಶ್ವ ಕಪ್​ನಲ್ಲಿ ಹೊಸ ದಾಖಲೆ ಬರೆದ ಇಂಗ್ಲೆಂಡ್ ತಂಡ

England Team

ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ (ICC World Cup 2023) ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್​​ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಏಕದಿನ ಇತಿಹಾಸದಲ್ಲಿ ಎಲ್ಲಾ 11 ಬ್ಯಾಟರ್​ಗಳು ಎರಡಂಕಿ ರನ್​ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 4658 ಏಕದಿನ ಪಂದ್ಯಗಳಲ್ಲಿ ಎಲ್ಲಾ 11 ಆಟಗಾರರು ಎರಡಂಕಿ ಸ್ಕೋರ್ ಮಾಡಿದ ಮೊದಲ ಉದಾಹರಣೆ ಇದಾಗಿದೆ.

ವಿಶೇಷವೆಂದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆಯನ್ನು ಇಂಗ್ಲೆಂಡ್ ಹೊಂದಿದೆ. ಕಳೆದ ವರ್ಷ ಜೂನ್​ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಆಂಗ್ಲರ ಪಡೆ 498-4 ರನ್ ಗಳಿಸಿತ್ತು.

ಜೋಸ್ ಬಟ್ಲರ್ ನೇತೃತ್ವದ ತಂಡವು ಹೊಸ ದಾಖಲೆಯನ್ನು ನಿರ್ಮಿಸಿದರೂ, ಒಟ್ಟಾರೆಯಾಗಿ ಅವರ ಬ್ಯಾಟಿಂಗ್ ಮೊತ್ತವು ಕಳಪೆಯಾಗಿತ್ತು, ಏಕೆಂದರೆ ಅವರು 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 282 ರನ್​ಗಳಿಗೆ ಸೀಮಿತವಾಯಿತು ಜೋ ರೂಟ್ 77 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆದ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿತ್ತು. ಆದರೆ ನಿಯಮಿತ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಲೇ 300 ಕ್ಕಿಂತ ಕಡಿಮೆ ಮೊತ್ತಕ್ಕೆ ಆಟ ಮುಗಿಸಿತು.

ಇದನ್ನೂ ಓದಿ : Asia Games : ಪುಟಾಣಿ ಮಕ್ಕಳೊಂದಿಗೆ ​ ಕ್ರಿಕೆಟ್ ಆಡಿದ ಭಾರತ ಕ್ರಿಕೆಟ್ ತಂಡ

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: 50 ಓವರ್​ಗಳಲ್ಲಿ 6 ವಿಕೆಟ್​ಗಳಲ್ಲಿ 282 (ಜೋ ರೂಟ್ 77, ಜೋಸ್ ಬಟ್ಲರ್ 43, ಜಾನಿ ಬೈಸ್ಟೋರ್​ 22ಕ್ಕೆ 2) ಮ್ಯಾಟ್ ಹೆನ್ರಿ 3-48)

ಇಂಗ್ಲೆಂಡ್ ತಂಡ: ಜಾನಿ ಬೈರ್​ಸ್ಟೋವ್​, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ಸಿ & ವಿಕೆ), ಲಿಯಾಮ್ ಲಿವಿಂಗ್ಸ್ಟೋನ್, ಮೊಯೀನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.

ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲಾಥಮ್ (ಸಿ & ವಿಕೆ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.

ಸ್ಟೋಕ್ಸ್ ಅಲಭ್ಯ

ಇಂಗ್ಲೆಂಡ್​ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸಣ್ಣ ಗಾಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಎಂದು ನಾಯಕ ಜೋಸ್ ಬಟ್ಲರ್ ಮಾಹಿತಿ ನೀಡಿದ್ದಾರೆ. ಮೊದಲ ಪಂದ್ಯಕ್ಕೆ ಮುಂಚಿತವಾಗಿ ಇಂಗ್ಲೆಂಡ್​ಗೆ ಇದು ದೊಡ್ಡ ಹಿನ್ನಡೆಯಾಗಿದೆ.

ನಾವು ಮೊದಲು ಬೌಲಿಂಗ್ ಮಾಡಲು ನೋಡುತ್ತಿದ್ದೆವು. ನಾವು ನ್ಯೂಜಿಲೆಂಡ್ ವಿರುದ್ಧ ಉತ್ತಮ ಸರಣಿಯನ್ನು ಹೊಂದಿದ್ದೇವೆ ಪ್ರತಿಯೊಬ್ಬರೂ ನಿಜವಾಗಿಯೂ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬೆನ್ ಈ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಅವರಿಗೆ ಗಾಯವಾಗಿದೆ,” ಎಂದು ಜೋಸ್ ಬಟ್ಲರ್ ಟಾಸ್ ಬಳಿಕ ಹೇಳಿದ್ದಾರೆ.

Exit mobile version