Site icon Vistara News

ICC World Cup 2023 : ದುರ್ಬಲ ಡಚ್ಚರ ವಿರುದ್ಧ ಗೆಲ್ಲುವರೇ ಆಂಗ್ಲರು?

neatherlands cricket team

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 8) ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್​ನ (ICC World Cup 2023) 40ನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಕ್ರಮವಾಗಿ ಕೊನೆಯ ಮತ್ತು ಅದಕ್ಕಿಂತ ಮೇಲಿನ ಸ್ಥಾನದಲ್ಲಿವೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ 33 ರನ್​​ಗಳ ಸೋಲನುಭವಿಸಿದೆ. ಹಾಲಿ ಚಾಂಪಿಯನ್ಸ್ ಈ ಋತುವಿನಲ್ಲಿ ಇಲ್ಲಿಯವರೆಗೆ ಅತ್ಯಂತ ಕಳಪೆ ಫಾರ್ಮ್ ನಲ್ಲಿದ್ದು, ಕೇವಲ ಒಂದು ಪಂದ್ಯವನ್ನು ಗೆದ್ದಿದ್ದಾರೆ. ಜೋಸ್ ಬಟ್ಲರ್ ಮತ್ತು ಬಳಗ ನೆದರ್ಲ್ಯಾಂಡ್ಸ್ ವಿರುದ್ಧ ಜಯ ಗಳಿಸುವ ಗುರಿ ಹೊಂದಿದ್ದು, ಅಭಿಯಾನವನ್ನು ಸಕಾರಾತ್ಮಕವಾಗಿ ಕೊನೆಗೊಳಿಸಲಿದೆ.

ನೆದರ್ಲ್ಯಾಂಡ್ಸ್ ತನ್ನ ಇತ್ತೀಚಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲನ್ನು ಅನುಭವಿಸಿದೆ. ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ತಂಡವು ಪ್ರಸ್ತುತ ಪಂದ್ಯಾವಳಿಯಲ್ಲಿ ಕೆಲವು ಗಮನಾರ್ಹ ಪ್ರದರ್ಶನಗಳನ್ನು ನೀಡಿದೆ. ಏಕೆಂದರೆ ಅವರು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಗೆಲುವನ್ನು ದಾಖಲಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ ಡಚ್ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಎದುರಿಸಲಿದೆ.

ತಂಡದಲ್ಲಿ ಬದಲಾವಣೆ ಇರಬಹುದೇ?

ಇಂಗ್ಲೆಂಡ್ ತನ್ನ ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿದ ವಿಭಿನ್ನ ತಂಡದೊಂದಿಗೆ ಕಣಕ್ಕೆ ಇಳಿಯಬಹುದು. ಲಿಯಾಮ್ ಲಿವಿಂಗ್​ಸ್ಟನ್​ ಬದಲಿಗೆ ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಬ್ಯಾಟರ್​ಗಳು ನಿರ್ಣಾಯಕ ಇನಿಂಗ್ಸ್​ಗಳನ್ನು ನೀಡಿದರೆ ತಂಡ ಗೆಲ್ಲಬಹುದು. ಜತೆಗೆ ಬೌಲರ್​ಗಳ ಪ್ರದರ್ಶನವೂ ಪ್ರಮುಖವಾಗಿರುತ್ತದೆ.

ಈ ಸುದ್ದಿಯನ್ನೂ ಓದಿ: Irfan Pathan : ಪಾಕ್​ ಸೋಲಿಸಿದ ಆಫ್ಘನ್​ ಆಟಗಾರರಿಗೆ ಔತಣ ಕೂಟ ಏರ್ಪಡಿಸಿದ ಇರ್ಫಾನ್ ಪಠಾಣ್​​!

ಸ್ಕಾಟ್ ಎಡ್ವರ್ಡ್ಸ್ ಮತ್ತು ಬಳಗ ತಮ್ಮ ಹಿಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಿದ ಅದೇ ಕ್ರಮಾಂಕದೊಂದಿಗೆ ಬರುವ ಸಾಧ್ಯತೆಯಿದೆ. ಸಮಂಜಸವಾದ ಮೊತ್ತವನ್ನು ದಾಖಲಿಸಲು ಅಥವಾ ಗುರಿಯನ್ನು ಬೆನ್ನಟ್ಟಲು ತಂಡದ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಪಿಚ್​ನಲ್ಲಿ ದೀರ್ಘಕಾಲ ಉಳಿಯಬೇಕು. ಅಸ್ಥಿರ ಇಂಗ್ಲೆಂಡ್ ತಂಡವನ್ನು ಎದುರಿಸುವಾಗ ಅವರು ಅದ್ಭುತ ಪ್ರದರ್ಶನ ನೀಡಲು ಪ್ರಯತ್ನಿಸುವ ಸಾಧ್ಯತೆಗಳಿವೆ.

ಪಿಚ್​ ಮತ್ತು ಕಂಡೀಷನ್​

ಎಂಸಿಎ ಕ್ರೀಡಾಂಗಣದಲ್ಲಿನ ಪಿಚ್ ಸಾಮಾನ್ಯವಾಗಿ ಬ್ಯಾಟರ್​ಗಳಿಎಗ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಬೌಂಡರಿಗಳು ಚಿಕ್ಕದಾಗಿದ್ದು. ಬ್ಯಾಟರ್​ಗಳಿಗೆ ಗಮನಾರ್ಹ ರನ್​ ಬಾರಿಸಲು ಸಹಾಯ ಮಾಡುತ್ತದೆ. ಇನ್ನಿಂಗ್ಸ್ ಸಾಗುತ್ತಿದ್ದಂತೆ ವೇಗದ ಬೌಲರ್ ಗಳಿಗೆ ಸ್ವಲ್ಪ ಸಹಾಯವನ್ನು ನೀಡುತ್ತದೆ. ಸ್ಪಿನ್ನರ್​ಗಳಿಗೆ ಕೂಡ ಪಿಚ್ ಸ್ವಲ್ಪ ನೆರವಾಗುವ ಸಾಧ್ಯತೆಗಳಿವೆ.

ತಂಡಗಳು

ಆಸ್ಟ್ತೇಲಿಯಾ: ಜಾನಿ ಬೈರ್​ಸ್ಟೋವ್​​, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ, ವಿಕೆಟ್ ಕೀಪರ್), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್.

ನೆದರ್ಲ್ಯಾಂಡ್ಸ್: ಪ್ರೊಬಾಬೆಲ್ ಇಲೆವೆನ್: ವೆಸ್ಲಿ ಬಾರೆಸಿ, ಮ್ಯಾಕ್ಸ್ ಒ’ಡೌಡ್, ಕಾಲಿನ್ ಆಕರ್ಮ್ಯಾನ್, ಸಿಬ್ರಾಂಡ್ ಎಂಗೆಲ್ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ, ವಿಕೆಟ್ ಕೀಪರ್), ಬಾಸ್ ಡಿ ಲೀಡ್, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೊಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್

ಮುಖಾಮುಖಿ ವಿವರ

ನೇರ ಪ್ರಸಾರ ವಿವರಗಳು

Exit mobile version