Site icon Vistara News

England vs West Indies: ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್

England vs West Indies

England vs West Indies: Bazballing England sets world record during day one of 2nd Test

ನಾಟಿಂಗ್‌ಹ್ಯಾಮ್: ಪ್ರವಾಸಿ ವೆಸ್ಟ್​ ಇಂಡೀಸ್(England vs West Indies)​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇನಿಂಗ್ಸ್​ ಗೆಲುವು ಸಾಧಿಸಿದ್ದ ಇಂಗ್ಲೆಂಡ್​ ತಂಡ ಇದೀಗ ದ್ವಿತೀಯ ಟೆಸ್ಟ್​ನಲ್ಲಿಯೂ ಹಿಡಿತ ಸಾಧಿಸಿದೆ. ಮೊದಲ ದಿನವೇ 416 ರನ್‌ ಗಳಿಸಿದೆ. ಜತೆಗೆ ಇದೇ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವ​ ದಾಖಲೆಯೊಂದನ್ನು ನಿರ್ಮಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಇಂಗ್ಲೆಂಡ್​ ಮೊದಲ ಓವರ್‌ನಲ್ಲೇ ಜ್ಯಾಕ್ ಕ್ರಾಲಿ(0) ವಿಕೆಟ್ ಕಳೆದುಕೊಂಡರೂ ಕೂಡ ಕೇವಲ 4.2 ಓವರ್ ಗಳಲ್ಲೇ 50 ರನ್ ಪೂರ್ಣಗೊಳಿಸಿದ ಇಂಗ್ಲೆಂಡ್, ಟೆಸ್ಟ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ತನ್ನದೇ ದಾಖಲೆಯನ್ನು 30 ವರ್ಷಗಳ ಬಳಿಕ ಉತ್ತಮಗೊಳಿಸಿದೆ. 1994ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 4.3 ಓವರ್‌ಗಳಲ್ಲಿ 50 ರನ್ ಪೂರ್ಣಗೊಳಿಸಿತ್ತು. ವೇಗದ ಅರ್ಧಶತಕ ದಾಖಲೆಯ ಪಟ್ಟಿಯಲ್ಲಿ ಅಗ್ರ-3 ಸ್ಥಾನದಲ್ಲಿ ಇಂಗ್ಲೆಂಡ್ ತಂಡವೇ ಕಾಣಿಸಿಕೊಂಡಿದೆ. ಇಂಗ್ಲೆಂಡ್ ತಂಡವು 1994ರಲ್ಲಿ ದಕ್ಷಿಣ ಆಫ್ರಿಕಾ ಎದುರು 4.3 ಓವರ್‌ನಲ್ಲಿ ಅರ್ಧಶತಕ ಪೂರೈಸಿತ್ತು. ಇದಾದ ಬಳಿಕ ಇಂಗ್ಲೆಂಡ್ ತಂಡವು 2002ರಲ್ಲಿ ಶ್ರೀಲಂಕಾ ಎದುರು 5 ಓವರ್‌ನಲ್ಲಿ ಅರ್ಧಶತಕ ಪೂರೈಸಿತ್ತು. ಭಾರತ 2008ರಲ್ಲಿ ಇಂಗ್ಲೆಂಡ್ ಎದುರು 5.3 ಓವರ್‌ಗಳಲ್ಲಿ ಅರ್ಧಶತಕ ಬಾರಿಸಿ 5ನೇ ಸ್ಥಾನ ಪಡೆದಿದೆ.

ಆರಂಭಿಕರಾದ ಬೆನ್ ಡಕೆಟ್ ಹಾಗೂ ಓಲಿ ಪೋಪ್‌ ಆಕ್ರಮಣಕಾರಿ ಆಟದ ನೆರವಿನಿಂದ ಇಂಗ್ಲೆಂಡ್​ ಬೃಹತ್​ ಮೊತ್ತ ದಾಖಲಿಸಿತು. ಪೋಪ್ 167 ಎಸೆತಗಳಲ್ಲಿ 15 ಬೌಂಡರಿ, 1 ಸಿಕರ್‌ನೊಂದಿಗೆ 121 ರನ್ ಸಿಡಿಸಿದರು. ಬೆನ್ ಡಕೆಟ್ 59 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 71 ರನ್ ಬಾರಿಸಿದರು. ನಾಯಕ ಬೆನ್ ಸ್ಟೋಕ್ಸ್ 69 ರನ್ ಗಳಿಸಿ ನಿರ್ಗಮಿಸಿದರು. ಅಲ್ಟಾರಿ ಜೋಸೆಫ್ 3 ವಿಕೆಟ್ ಕಿತ್ತರು. ವಿಂಡೀಸ್​ ಮೊದಲ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಬೇಕಿದೆ.

ಇದನ್ನೂ ಓದಿ James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

ಟೆಸ್ಟ್​ನಲ್ಲಿ ವೇಗದ ಅರ್ಧಶತಕ


ಇಂಗ್ಲೆಂಡ್​- 4.2 ಓವರ್, ಎದುರಾಳಿ; ವೆಸ್ಟ್​ ಇಂಡೀಸ್​​

ಇಂಗ್ಲೆಂಡ್- 4.3 ಓವರ್​, ಎದುರಾಳಿ; ದಕ್ಷಿಣ ಆಫ್ರಿಕಾ

ಇಂಗ್ಲೆಂಡ್​, 5.0​​​ ಓವರ್​, ಎದುರಾಳಿ; ಶ್ರೀಲಂಕಾ

ಶ್ರೀಲಂಕಾ-5.2 ಓವರ್​, ಎದುರಾಳಿ; ಪಾಕಿಸ್ತಾನ

ಭಾರತ-5.3 ಓವರ್​, ಎದುರಾಳಿ; ಇಂಗ್ಲೆಂಡ್​

ಮೊದಲ ಟೆಸ್ಟ್​ ಆಡುವ ಮೂಲಕ ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್(James Anderson)​ ಅವರು ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದರು. ಈ ಪಂದ್ಯವನ್ನು ಇಂಗ್ಲೆಂಡ್​ ಇನಿಂಗ್ಸ್​ ಹಾಗೂ 114 ರನ್​ಗಳಿಂದ ಗೆದ್ದು ಬೀಗಿತು. ಆ್ಯಂಡರ್ಸನ್​ಗೂ ಗೆಲುವಿನ ವಿದಾಯ ಲಭಿಸಿತ್ತು. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 41 ವರ್ಷದ ಆ್ಯಂಡರ್ಸನ್, ವಿದಾಯಕ್ಕೆ ಸಚಿನ್​ ತೆಂಡೂಲ್ಕರ್(Sachin Tendulkar) ಭಾವನಾತ್ಮಕ​ ಟ್ವೀಟ್​ ಮೂಲಕ ಶುಭ ಹಾರೈಸಿದ್ದರು.

ಆ್ಯಂಡರ್ಸನ್​ ಇಂಗ್ಲೆಂಡ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. ವಿದಾಯ ಪಂದ್ಯದಲ್ಲೇ ಆ್ಯಂಡರ್ಸನ್​ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದು ಕೂಡ ವಿಶೇಷ. ದ್ವಿತೀಯ ಇನಿಂಗ್ಸ್​ನಲ್ಲಿ 10 ಓವರ್​ ಪೂರ್ತಿಗೊಳಿಸುವ ಮೂಲಕ ಜೇಮ್ಸ್​ ಆ್ಯಂಡರ್ಸನ್ 40 ಸಾವಿರ ಚೆಂಡೆಸೆದ ದಾಖಲೆ ನಿರ್ಮಿಸಿದರು. ಈ ದಾಖಲೆ ಮಾಡಿದ ವಿಶ್ವದ ಮೊದಲ ವೇಗಿ ಎನಿಸಿಕೊಂಡರು.

Exit mobile version