England vs West Indies: ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್ - Vistara News

ಕ್ರೀಡೆ

England vs West Indies: ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್

England vs West Indies: ಆರಂಭಿಕರಾದ ಬೆನ್ ಡಕೆಟ್ ಹಾಗೂ ಓಲಿ ಪೋಪ್‌ ಆಕ್ರಮಣಕಾರಿ ಆಟದ ನೆರವಿನಿಂದ ಇಂಗ್ಲೆಂಡ್​ ಬೃಹತ್​ ಮೊತ್ತ ದಾಖಲಿಸಿತು. ಪೋಪ್ 167 ಎಸೆತಗಳಲ್ಲಿ 15 ಬೌಂಡರಿ, 1 ಸಿಕರ್‌ನೊಂದಿಗೆ 121 ರನ್ ಸಿಡಿಸಿದರು.

VISTARANEWS.COM


on

England vs West Indies
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾಟಿಂಗ್‌ಹ್ಯಾಮ್: ಪ್ರವಾಸಿ ವೆಸ್ಟ್​ ಇಂಡೀಸ್(England vs West Indies)​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇನಿಂಗ್ಸ್​ ಗೆಲುವು ಸಾಧಿಸಿದ್ದ ಇಂಗ್ಲೆಂಡ್​ ತಂಡ ಇದೀಗ ದ್ವಿತೀಯ ಟೆಸ್ಟ್​ನಲ್ಲಿಯೂ ಹಿಡಿತ ಸಾಧಿಸಿದೆ. ಮೊದಲ ದಿನವೇ 416 ರನ್‌ ಗಳಿಸಿದೆ. ಜತೆಗೆ ಇದೇ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವ​ ದಾಖಲೆಯೊಂದನ್ನು ನಿರ್ಮಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಇಂಗ್ಲೆಂಡ್​ ಮೊದಲ ಓವರ್‌ನಲ್ಲೇ ಜ್ಯಾಕ್ ಕ್ರಾಲಿ(0) ವಿಕೆಟ್ ಕಳೆದುಕೊಂಡರೂ ಕೂಡ ಕೇವಲ 4.2 ಓವರ್ ಗಳಲ್ಲೇ 50 ರನ್ ಪೂರ್ಣಗೊಳಿಸಿದ ಇಂಗ್ಲೆಂಡ್, ಟೆಸ್ಟ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ತನ್ನದೇ ದಾಖಲೆಯನ್ನು 30 ವರ್ಷಗಳ ಬಳಿಕ ಉತ್ತಮಗೊಳಿಸಿದೆ. 1994ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 4.3 ಓವರ್‌ಗಳಲ್ಲಿ 50 ರನ್ ಪೂರ್ಣಗೊಳಿಸಿತ್ತು. ವೇಗದ ಅರ್ಧಶತಕ ದಾಖಲೆಯ ಪಟ್ಟಿಯಲ್ಲಿ ಅಗ್ರ-3 ಸ್ಥಾನದಲ್ಲಿ ಇಂಗ್ಲೆಂಡ್ ತಂಡವೇ ಕಾಣಿಸಿಕೊಂಡಿದೆ. ಇಂಗ್ಲೆಂಡ್ ತಂಡವು 1994ರಲ್ಲಿ ದಕ್ಷಿಣ ಆಫ್ರಿಕಾ ಎದುರು 4.3 ಓವರ್‌ನಲ್ಲಿ ಅರ್ಧಶತಕ ಪೂರೈಸಿತ್ತು. ಇದಾದ ಬಳಿಕ ಇಂಗ್ಲೆಂಡ್ ತಂಡವು 2002ರಲ್ಲಿ ಶ್ರೀಲಂಕಾ ಎದುರು 5 ಓವರ್‌ನಲ್ಲಿ ಅರ್ಧಶತಕ ಪೂರೈಸಿತ್ತು. ಭಾರತ 2008ರಲ್ಲಿ ಇಂಗ್ಲೆಂಡ್ ಎದುರು 5.3 ಓವರ್‌ಗಳಲ್ಲಿ ಅರ್ಧಶತಕ ಬಾರಿಸಿ 5ನೇ ಸ್ಥಾನ ಪಡೆದಿದೆ.

ಆರಂಭಿಕರಾದ ಬೆನ್ ಡಕೆಟ್ ಹಾಗೂ ಓಲಿ ಪೋಪ್‌ ಆಕ್ರಮಣಕಾರಿ ಆಟದ ನೆರವಿನಿಂದ ಇಂಗ್ಲೆಂಡ್​ ಬೃಹತ್​ ಮೊತ್ತ ದಾಖಲಿಸಿತು. ಪೋಪ್ 167 ಎಸೆತಗಳಲ್ಲಿ 15 ಬೌಂಡರಿ, 1 ಸಿಕರ್‌ನೊಂದಿಗೆ 121 ರನ್ ಸಿಡಿಸಿದರು. ಬೆನ್ ಡಕೆಟ್ 59 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 71 ರನ್ ಬಾರಿಸಿದರು. ನಾಯಕ ಬೆನ್ ಸ್ಟೋಕ್ಸ್ 69 ರನ್ ಗಳಿಸಿ ನಿರ್ಗಮಿಸಿದರು. ಅಲ್ಟಾರಿ ಜೋಸೆಫ್ 3 ವಿಕೆಟ್ ಕಿತ್ತರು. ವಿಂಡೀಸ್​ ಮೊದಲ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಬೇಕಿದೆ.

ಇದನ್ನೂ ಓದಿ James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

ಟೆಸ್ಟ್​ನಲ್ಲಿ ವೇಗದ ಅರ್ಧಶತಕ


ಇಂಗ್ಲೆಂಡ್​- 4.2 ಓವರ್, ಎದುರಾಳಿ; ವೆಸ್ಟ್​ ಇಂಡೀಸ್​​

ಇಂಗ್ಲೆಂಡ್- 4.3 ಓವರ್​, ಎದುರಾಳಿ; ದಕ್ಷಿಣ ಆಫ್ರಿಕಾ

ಇಂಗ್ಲೆಂಡ್​, 5.0​​​ ಓವರ್​, ಎದುರಾಳಿ; ಶ್ರೀಲಂಕಾ

ಶ್ರೀಲಂಕಾ-5.2 ಓವರ್​, ಎದುರಾಳಿ; ಪಾಕಿಸ್ತಾನ

ಭಾರತ-5.3 ಓವರ್​, ಎದುರಾಳಿ; ಇಂಗ್ಲೆಂಡ್​

ಮೊದಲ ಟೆಸ್ಟ್​ ಆಡುವ ಮೂಲಕ ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್(James Anderson)​ ಅವರು ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದರು. ಈ ಪಂದ್ಯವನ್ನು ಇಂಗ್ಲೆಂಡ್​ ಇನಿಂಗ್ಸ್​ ಹಾಗೂ 114 ರನ್​ಗಳಿಂದ ಗೆದ್ದು ಬೀಗಿತು. ಆ್ಯಂಡರ್ಸನ್​ಗೂ ಗೆಲುವಿನ ವಿದಾಯ ಲಭಿಸಿತ್ತು. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 41 ವರ್ಷದ ಆ್ಯಂಡರ್ಸನ್, ವಿದಾಯಕ್ಕೆ ಸಚಿನ್​ ತೆಂಡೂಲ್ಕರ್(Sachin Tendulkar) ಭಾವನಾತ್ಮಕ​ ಟ್ವೀಟ್​ ಮೂಲಕ ಶುಭ ಹಾರೈಸಿದ್ದರು.

ಆ್ಯಂಡರ್ಸನ್​ ಇಂಗ್ಲೆಂಡ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. ವಿದಾಯ ಪಂದ್ಯದಲ್ಲೇ ಆ್ಯಂಡರ್ಸನ್​ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದು ಕೂಡ ವಿಶೇಷ. ದ್ವಿತೀಯ ಇನಿಂಗ್ಸ್​ನಲ್ಲಿ 10 ಓವರ್​ ಪೂರ್ತಿಗೊಳಿಸುವ ಮೂಲಕ ಜೇಮ್ಸ್​ ಆ್ಯಂಡರ್ಸನ್ 40 ಸಾವಿರ ಚೆಂಡೆಸೆದ ದಾಖಲೆ ನಿರ್ಮಿಸಿದರು. ಈ ದಾಖಲೆ ಮಾಡಿದ ವಿಶ್ವದ ಮೊದಲ ವೇಗಿ ಎನಿಸಿಕೊಂಡರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virat Kohli: ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ಕೋಚ್​ ಗಂಭೀರ್​ ವಿಚಾರದಲ್ಲಿ ಕೊಹ್ಲಿ ಕೊಟ್ಟ ಆಶ್ವಾಸನೆ ಏನು?

Virat Kohli: ಕ್ರಿಕ್​ಇನ್ಫೋ ವರದಿಯ ಪ್ರಕಾರ, ವಿರಾಟ್​ ಕೊಹ್ಲಿ ಅವರು ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಈ ಮೊದಲು ಗಂಭೀರ್ ಜತೆಗೆ ನಡೆಸಿದ ಕಿತ್ತಾಟಗಳನ್ನು ಮರೆತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿರುವುದಾಗಿ ತಿಳಿದುಬಂದಿದೆ.

VISTARANEWS.COM


on

Virat Kohli
Koo

ಮುಂಬಯಿ: ರಾಹುಲ್​ ದ್ರಾವಿಡ್(rahul dravid)​ ಅವರ ನಿರ್ಗಮನದಿಂದ ತೆರವಾದ ಭಾರತ ಕ್ರಿಕೆಟ್ ತಂಡ ಮುಖ್ಯ ಕೋಚ್​ ಹುದ್ದೆಗೆ(Team India Coach) ಗೌತಮ್​ ಗಂಭೀರ್​(Gautam Gambhir) ಆಯ್ಕೆಯಾಗಿದ್ದು ತಮ್ಮ ಕೆಲಸ ಕಾರ್ಯವನ್ನು ಆರಂಭಿಸಿದ್ದಾರೆ. ಗಂಭೀರ್​ ಕೋಚ್​ ಆಗುತ್ತಿದ್ದಂತೆಯೇ ಕೆಲ ನೆಟ್ಟಿಗರು ಗಂಭೀರ್​ ಮತ್ತು ಕೊಹ್ಲಿ ನಡುವಣ ಆನ್ ಫೀಲ್ಡ್ ಜಗಳ ಮತ್ತೆ ಶುರುವಾಗಿ ಇದು ತಂಡಕ್ಕೆ ಭಾದಿಸಲಿದೆ ಎಂದು ಹೇಳಲಾಗಿತ್ತು. ಅಲ್ಲದೆ ಗಂಭೀರ್​ ಅವರನ್ನು ಕೋಚ್​ ಆಗಿ ಆಯ್ಕೆ ಮಾಡುವ ಮುನ್ನ ವಿರಾಟ್​ ಕೊಹ್ಲಿ(virat kohli) ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಕೊಹ್ಲಿಯೇ ಬಿಸಿಸಿಐ(BCCI) ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

ಕ್ರಿಕ್​ಇನ್ಫೋ ವರದಿಯ ಪ್ರಕಾರ, ವಿರಾಟ್​ ಕೊಹ್ಲಿ ಅವರು ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಈ ಮೊದಲು ಗಂಭೀರ್ ಜತೆಗೆ ನಡೆಸಿದ ಕಿತ್ತಾಟಗಳನ್ನು ಮರೆತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿರುವುದಾಗಿ ತಿಳಿದುಬಂದಿದೆ.

ವಿರಾಟ್​ ಕೊಹ್ಲಿ ಮತ್ತು ಗಂಭೀರ್​ ಐಪಿಎಲ್​ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್​ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಪ್ರದರ್ಶಿಸಿದ್ದರು. ಹೀಗಿರುವಾಗ ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು.

ಪ್ರತಿ ಐಪಿಎಲ್​ನಲ್ಲಿ ಕಚ್ಚಾಟ ನಡೆಸುತ್ತಿದ್ದ ಕೊಹ್ಲಿ ಮತ್ತು ಗಂಭೀರ್​ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಂತ ಆತ್ಮೀಯವಾಗಿ ಕಂಡುಬಂದಿದ್ದರು. ಇಬ್ಬರು ಕೂಡ ತಮ್ಮ ಅಹಂ ಮತ್ತು ಮುನಿಸನ್ನು ಮರೆತಿರುವಂತೆ ಕಂಡುಬಂದಿದ್ದರು. ಆದರೂ ಕೂಡ ಕೊಹ್ಲಿ ಕೆಲ ಪಂದ್ಯಗಳಲ್ಲಿ ಆಡದೇ ಇದ್ದಾಗ ಇವರಿಬ್ಬರ ಮಧ್ಯೆ ಮತ್ತೆ ಜಗಳ ಆರಂಭಗೊಳ್ಳುವ ಸಾಧ್ಯತೆ ಇದೆ ಎನ್ನುವುದು ಅಭಿಮಾನಿಗಳ ಆತಂಕವಾಗಿತ್ತು. ಇದೀಗ ಕೊಹ್ಲಿಯೇ ಸ್ವತಃ ಬಿಸಿಸಿಐಗೆ ಎಲ್ಲ ದ್ವೇಷವನ್ನು ಬದಿಗಿಟ್ಟು ತಂಡದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋಚ್ ಜತೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವುದಾಗಿ ಹೇಳಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ Virat Kohli: ಮೊದಲ ಬಾರಿಗೆ ಮಗ ಅಕಾಯ್ ಜತೆ ಕಾಣಿಸಿಕೊಂಡ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

ಟಿ20 ವಿಶ್ವಕಪ್​ ಬಳಿಕ ಲಂಡನ್​ಗೆ ತೆರಳಿ ಕುಟುಂಬದ ಜತೆ ಕಾಲ ಕಳೆಯುತ್ತಿದ್ದ ವಿರಾಟ್​ ಕೊಹ್ಲಿ ಲಂಕಾ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಕೊಹ್ಲಿ ಜತೆ ರೋಹಿತ್​ ಕೂಡ ವಿಶ್ರಾಂತಿ ಪಡೆಯಲು ನಿರ್ದರಿಸಿದ್ದಾರೆ ಎನ್ನಲಾಗಿತ್ತು. ಆದರೆ, ಗಂಭೀರ್​ ಎಲ್ಲ ಹಿರಿಯ ಆಟಗಾರರರು ಕೂಡ ಈ ಸರಣಿಯಲ್ಲಿ ಆಡುವಂತೆ ಸೂಚನೆ ನೀಡಿದ್ದರು. ಗುರುವಾರ ತಂಡ ಪ್ರಕಟಗೊಳ್ಳುವ ವೇಳೆ ಅಚ್ಚರಿ ಎಂಬಂತೆ ಎಲ್ಲ ಹಿರಿಯ ಆಟಗಾರರು ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

Olympic Games: ಒಲಿಂಪಿಕ್ಸ್​ನಲ್ಲಿ ಮಹಿಳೆಯರು ಮೊದಲ ಬಾರಿಗೆ ಸ್ಪರ್ಧಿಸಿದ್ದು ಯಾವಾಗ?

Olympic Games:2012ರ ಲಂಡನ್‌ ಒಲಿಂಪಿಕ್ಸ್​ನಲ್ಲಿ ಪುರುಷರಂತೆ ಎಲ್ಲ ಸ್ಪರ್ಧೆಗಳಲ್ಲೂ ಮಹಿಳೆಯರು ಪಾಲ್ಗೊಂಡ ಸಮಾನತೆಯ ಮೊದಲ ಒಲಿಂಪಿಕ್ಸ್‌ ಎನಿಸಿತ್ತು. ಅಲ್ಲದೆ ಎಲ್ಲ ದೇಶಗಳಿಂದ ಮಹಿಳಾ ಸ್ಪರ್ಧಿಗಳೂ ಭಾಗವಹಿಸಿದ್ದರು.

VISTARANEWS.COM


on

Koo

ಬೆಂಗಳೂರು: ಬರೋಬ್ಬರಿ 100 ವರ್ಷಗಳ ಬಳಿಕ ಒಲಿಂಪಿಕ್ಸ್​ ಕ್ರೀಡಾಕೂಡವನ್ನು(Olympic Games) ನಡೆಸುತ್ತಿರುವ ಪ್ಯಾರಿಸ್​ ನಗರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸರ್ವ ರೀತಿಯಲ್ಲಿಯೂ ಫ್ರಾನ್ಸ್(paris olympics 2024)​ ಸಿಂಗರಿಸಿ ನಿಂತಿದೆ. ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್‌ ಕೀಡಾಕೂಟ ಇದಾಗಿದೆ. ಸಾವಿರಾರು(Olympic Games History) ವರ್ಷಗಳ ಇತಿಹಾಸ ಹೊಂದಿರುವ ಪ್ರತಿಷ್ಠಿತ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಮೊತ್ತ ಮೊದಲ ಬಾರಿಗೆ ಮಹಿಳಾ ಕ್ರೀಡಾಳುಗಳು ಸ್ಪರ್ಧಿಸಿದ್ದು ಕೂಡ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿಯೇ.

ಹೌದು, 1896ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಮೊದಲ ಒಲಿಂಪಿಕ್ಸ್‌ನಲ್ಲಿ ಮಹಿಳಾ ಸ್ಪರ್ಧಿಗಳಿರಲಿಲ್ಲ. ಎಲ್ಲ 241 ಸ್ಪರ್ಧಿಗಳು ಪುರುಷರೇ ಆಗಿದ್ದರು. 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(1900 Olympics) ಮೊದಲ ಬಾರಿ 22 ಮಹಿಳೆಯರು ಪಾಲ್ಗೊಂಡಿದ್ದರು. ಆ ಬಳಿಕದ ಒಲಿಂಪಿಕ್ಸ್​ನಲ್ಲಿ ಮಹಿಳಾ ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿತು.

2012ರ ಲಂಡನ್‌ ಒಲಿಂಪಿಕ್ಸ್​ನಲ್ಲಿ ಪುರುಷರಂತೆ ಎಲ್ಲ ಸ್ಪರ್ಧೆಗಳಲ್ಲೂ ಮಹಿಳೆಯರು ಪಾಲ್ಗೊಂಡ ಸಮಾನತೆಯ ಮೊದಲ ಒಲಿಂಪಿಕ್ಸ್‌ ಎನಿಸಿತ್ತು. ಅಲ್ಲದೆ ಎಲ್ಲ ದೇಶಗಳಿಂದ ಮಹಿಳಾ ಸ್ಪರ್ಧಿಗಳೂ ಭಾಗವಹಿಸಿದ್ದರು. ಈ ಬಾರಿಯ ಉದ್ಘಾಟನಾ ಸಮಾರಂಭದ ಕ್ರೀಡಾಪಟುಗಳ ಪಥಸಂಚಲನದಲ್ಲಿ ಎಲ್ಲ ತಂಡಗಳಿಗೆ ತಲಾ ಇಬ್ಬರು ಧ್ವಜಧಾರಿಗಳನ್ನು ಹೊಂದಲು ಅವಕಾಶ ನೀಡುವ ಮೂಲಕ ಲಿಂಗ ಸಮಾನತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್​ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಒಲಿಂಪಿಕ್ಸ್‌ 5 ರಿಂಗ್​ಗಳ ಮಹತ್ವವೇನು?

5 ಖಂಡಗಳನ್ನು ಪ್ರತಿನಿಧಿಸುವ 5 ರಿಂಗ್‌ಗಳುಳ್ಳ ಒಲಿಂಪಿಕ್ಸ್‌ ಧ್ವಜವನ್ನು 1913ರಲ್ಲಿ ಆಧುನಿಕ ಒಲಿಂಪಿಕ್ಸ್‌ ಪಿತಾಮಹ ಫ್ರಾನ್ಸ್‌ನ ಪಿಯರ್‌ ಡಿ ಕೌಬರ್ಟಿನ್‌ ವಿನ್ಯಾಸಗೊಳಿಸಿದರು. ಈ ಬಾರಿಯ ಒಲಿಂಪಿಕ್ಸ್​ ಕೂಡ ಫ್ರಾನ್ಸ್​ನಲ್ಲಿಯೇ ನಡೆಯುತ್ತಿರುವುದು ವಿಶೇಷ. ಈ ಒಲಿಂಪಿಕ್ಸ್‌ ಧ್ವಜ 1920ರ ಬೆಲ್ಜಿಯಂನ ಅಂಟ್ವೆರ್ಪ್​ನಲ್ಲಿ ಮೊದಲ ಬಾರಿ ಅಧಿಕೃತವಾಗಿ ಹಾರಾಡಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರಧ್ವಜವೂ ಈ ರಿಂಗ್‌ಗಳ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ಈ ರಿಂಗ್​ನ ವಿಶೇಷತೆ.

ವೈವಿಧ್ಯಮಯ ಭಾಷೆ, ಸಂಸ್ಕೃತಿ, ಹವಾಮಾನ, ಆರ್ಥಿಕತೆ, ಆಹಾರ ಪದ್ಧತಿ ಮತ್ತು ಮೈಬಣ್ಣದ ಜನರೆಲ್ಲ ಒಂದಾಗಿ ಸೇರುವ ವಿಶ್ವದ ಅತಿದೊಡ್ಡ ವೇದಿಕೆ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ಹಲವು ವೈವಿಧ್ಯಗಳ ನಡುವೆಯೂ ಒಲಿಂಪಿಕ್ಸ್ ಏಕತೆಯನ್ನು ಸಾರುವುದು ಈ ಕ್ರೀಡಾಕೂಟದ ವಿಶೇಷತೆ.

Continue Reading

ಕ್ರೀಡೆ

Sri Lanka Tour: ಸಂಜು, ಅಭಿಷೇಕ್​ಗೆ ಅವಕಾಶ ನೀಡದಕ್ಕೆ ಬಿಸಿಸಿಐ ವಿರುದ್ಧ ಕಿಡಿಕಾರಿದ ಸಂಸದ ​ತರೂರ್

Sri Lanka Tour: ಕೋಚ್​ ಗೌತಮ್ ಗಂಭೀರ್‌ ಖಡಕ್​ ಎಚ್ಚರಿಕೆ ನೀಡಿದ ಕಾರಣ ವಿಶ್ರಾಂತಿಯಲ್ಲಿದ್ದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ ತಮ್ಮ ವಿಶ್ರಾಂತಿ ಮೊಟಕುಗೊಳಿಸಿ ತಂಡಕ್ಕೆ ಮರಳಿದ್ದಾರೆ.

VISTARANEWS.COM


on

Sri Lanka Tour
Koo

ನವದೆಹಲಿ: ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ(Sri Lanka Tour) ಗುರುವಾರ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ, ಏಕದಿನ ತಂಡದಿಂದ ಸಂಜು ಸ್ಯಾಮ್ಸನ್​(Sanju Samson) ಮತ್ತು ಅಭಿಷೇಕ್​ ಶರ್ಮ(Abhishek Sharma) ಅವರನ್ನು ಸರಣಿಗೆ ಆಯ್ಕೆ ಮಾಡದ್ದಕ್ಕೆ ಸಂಸದ ಶಶಿ ತರೂರ್(Member of Parliament Shashi Tharoor) ಆಯ್ಕೆ ಸಮಿತಿ ಮತ್ತು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸ್ಯಾಮ್ಸನ್ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಅಭಿಷೇಕ್ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತಮ್ಮ ನಿರ್ಭೀತ ಬ್ಯಾಟಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸಿದ್ದರು. ಆದರೂ ಕೂಡ ಈ ಪ್ರತಿಭಾನ್ವಿತ ಆಟಗಾರರನ್ನು ಕೈಬಿಟ್ಟಿರುವುದು ನಿಜ್ಜಕ್ಕೂ ಬೇಸರದ ಸಂಗತಿ ಎಂದು ತರೂರ್(Shashi Tharoor)​ ಹೇಳಿದ್ದಾರೆ.

“ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಕುತೂಹಲಕಾರಿಯಾಗಿದೆ. ತಮ್ಮ ಕೊನೆಯ ಏಕದಿನದಲ್ಲಿ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್​ ಅವರನ್ನು ಏಕದಿನಕ್ಕೆ ಆಯ್ಕೆ ಮಾಡಲಾಗಿಲ್ಲ. ಜಿಂಬಾಬ್ವೆ ಟಿ20 ಸರಣಿಯಲ್ಲಿ ವೇಗದ ಶತಕ ಬಾರಿಸಿದ್ದ ಅಭಿಷೇಕ್​ ಶರ್ಮ ಕೂಡ ಆಯ್ಕೆಯಾಗಿಲ್ಲ. ಅಪರೂಪಕ್ಕೊಮ್ಮೆ ಆಯ್ಕೆಯಾದರು, ತಂಡಕ್ಕೆ ಶುಭವಾಗಲಿ,” ಎಂದು ತರೂರ್ ತಂಡದ ಆಟಗಾರರ ಪಟ್ಟಿಯನ್ನು ಹಂಚಿಕೊಂಡು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಟಿ20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್​ ಸಿರಾಜ್.

ಇದನ್ನೂ ಓದಿ Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

ಏಕದಿನ ತಂಡ


ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೂ ಮೊದಲು ಭಾರತ ತಂಡ ಕೆಲವೇ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದೆ. ಹೆಚ್ಚಾಗಿ ಟಿ20 ಸರಣಿ ಮಾತ್ರ ಆಡಲಿದೆ. ಕಡಿಮೆ ಏಕದಿನ ಪಂದ್ಯ ಇರುವ ಕಾರಣ ಅನುಭವಿ ಆಟಗಾರರು ಈ ಪ್ರವಾಸದಲ್ಲಿ ಪಾಲ್ಗೊಳ್ಳಬೇಕು ಎಂದು ನೂತನ ಕೋಚ್​ ಗೌತಮ್ ಗಂಭೀರ್‌ ಖಡಕ್​ ಎಚ್ಚರಿಕೆ ನೀಡಿದ ಕಾರಣ ವಿಶ್ರಾಂತಿಯಲ್ಲಿದ್ದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ ತಮ್ಮ ವಿಶ್ರಾಂತಿ ಮೊಟಕುಗೊಳಿಸಿ ತಂಡಕ್ಕೆ ಮರಳಿದ್ದಾರೆ.

ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ 26ರಿಂದ ಟಿ20 ಪಂದ್ಯ ಆರಂಭವಾಗಬೇಕಿತ್ತು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಬೇಕಿತ್ತು. ಏಕದಿನ ಆಗಸ್ಟ್​ 1ರದ ಬದಲಾಗಿ ಆಗಸ್ಟ್​ 2ರಿಂದ ಆರಂಭಗೊಳ್ಳಲಿದೆ. ಉಳಿದ ಪಂದ್ಯಗಳ ದಿನಾಂಕ ಬದಲಾಗಲಿಲ್ಲ. ಈ ಹಿಂದಿನಂತೆ ಆಗಸ್ಟ್​ 4 ಮತ್ತು 7ರಂದೇ ನಡೆಯಲಿದೆ.

Continue Reading

ಕ್ರೀಡೆ

Hardik Pandya: ವಿಚ್ಛೇದಿತ ಪತ್ನಿ ನತಾಶಾಗೆ ಶೇ.70ರಷ್ಟು ಜೀವನಾಂಶ ನೀಡಲಿದ್ದಾರಾ ಹಾರ್ದಿಕ್​ ಪಾಂಡ್ಯ?

Hardik Pandya: ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು.

VISTARANEWS.COM


on

Hardik Pandya
Koo

ಮುಂಬಯಿ: ಟೀಮ್​ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ ನತಾಶಾ ಸ್ಟಾಂಕೋವಿಕ್(Natasa Stankovic)​ ಅವರಿಗೆ ವಿಚ್ಛೇದನ ನೀಡುವ ಮೂಲಕ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಪತ್ನಿಗೆ ವಿಚ್ಛೇದನ ನೀಡಿರುವ ವಿಚಾರವನ್ನು ಪಾಂಡ್ಯ ಗುರುವಾರ ಅಧಿಕೃತ ಪ್ರಕಟನೆಯೊಂದಿಗೆ ತಿಳಿಸಿದ್ದರು. ಇದೀಗ ಪಾಂಡ್ಯ ತನ್ನ ಆಸ್ತಿಯಲ್ಲಿ ಪತ್ನಿಗೆ ಜೀವನಾಂಶವಾಗಿ ಶೇ. 70 ಪ್ರತಿಶತವನ್ನು ಬಿಟ್ಟುಕೊಡಬೇಕು ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

ತಾಯಿಯ ಹೆಸರಿನಲ್ಲಿ ಆಸ್ತಿ ಮಾಡಿದ ಪಾಂಡ್ಯ


ಹಾರ್ದಿಕ್​ ಪಾಂಡ್ಯ ತಮ್ಮ ಎಲ್ಲ ಆಸ್ತಿಯನ್ನು ತಾಯಿಯ ಹೆಸರಿನಲ್ಲಿ ಮಾಡಿಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ರಿವೀಲ್​ ಮಾಡಿದ್ದರು. ಹಿಂದೊಮ್ಮೆ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದ ಪಾಂಡ್ಯ “ನಾನು ಜಾಹಿರಾತು, ಕ್ರಿಕೆಟ್​ ಸೇರಿ ಇನ್ನಿತರ ಮೂಲಗಳಿಂದ ಎಷ್ಟೇ ಹಣ ಸಂಪಾದಿಸಿದರೂ ಕೂಡ ಇದನೆಲ್ಲ ನನ್ನ ಹೆಸರಿನಲ್ಲಿ ಇಟ್ಟಿಲ್ಲ. ನನ್ನ ಬಳಿ ದುಬಾರಿ ಕಾರು, ಬಂಗಲೆ ಇದ್ದರೂ ಕೂಡ ಇದೆಲ್ಲ ನನ್ನ ತಾಯಿಯ ಹೆಸರಿನಲ್ಲಿದೆ. ಹೀಗಾಗಿ ನಾನು ಯಾವುದೇ ಸಮಸ್ಯೆ ಬಂದರೂ ಕೂಡ ಯಾರೀಗೂ ನನ್ನ ಆಸ್ತಿಯಲ್ಲಿ ಶೇ. 50ರಷ್ಟು ಜೀವನಾಂಶ ಕೊಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ Hardik Pandya: ಫಿಟ್ನೆಸ್‌ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸಿಕ್ಸ್​ ಪ್ಯಾಕ್​ ಮೂಲಕ ತಿರುಗೇಟು ಕೊಟ್ಟ ಹಾರ್ದಿಕ್​ ಪಾಂಡ್ಯ

ಸದ್ಯ ಪಾಂಡ್ಯ ಅವರು ಪತ್ನಿಗೆ ಜೀವನಾಂಶ ನೀಡುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳಾಗಿದೆ. ನತಾಶ ಇದುವರೆಗೆ ಹಾರ್ದಿಕ್‌ ಅವರಿಂದ ಜೀವನಾಂಶವಾಗಿ ಯಾವುದೇ ರೀತಿಯ ಪಾಲು ಕೇಳಿಲ್ಲ. ಹೀಗಾಗಿ ಪಾಂಡ್ಯ ಮತ್ತು ನತಾಶ ಜೀವನಾಂಶದ ಬಗ್ಗೆ ಹರಿದಾಡುತ್ತಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ.

“ನಾಲ್ಕು ವರ್ಷಗಳ ಕಾಲ ಒಂದಾಗಿ ಜೀವನ ನಡೆಸಿದ್ದ ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಇದು ನಮ್ಮಿಬ್ಬರ ಹಿತಾಸಕ್ತಿಗಾಗಿ ಎಂದು ನಾವು ನಂಬುತ್ತೇವೆ. ಇದು ಕಠಿಣ ನಿರ್ಧಾರವಾಗಿದೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಹೊಂದಿದ್ದೇವೆ. ಮಗ ನಮ್ಮಿಬ್ಬರ ಜೀವನದ ಕೇಂದ್ರದಲ್ಲಿ ಮುಂದುವರಿಯುತ್ತಾನೆ” ಎಂದು ಬರೆದುಕೊಂಡು ಪಾಂಡ್ಯ ವಿಚ್ಛೇದನವನ್ನು ಖಚಿತಪಡಿಸಿದ್ದರು.

ಮಗ ಯಾರ ಬಳಿ ಇರುತ್ತಾನೆ?


ದಂಪತಿ ಬೇರೆಯಾದ ಬಳಿಕ ಮಗ ಯಾರ ಬಳಿಯಿರುತ್ತಾನೆ ಎಂಬ ಪ್ರಶ್ನೆಗಳಿಗೂ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಕೆಯಲ್ಲಿ ಉತ್ತರಿಸಿದ್ದಾರೆ. “ನಾನು ಮತ್ತು ನತಾಶಾ ಇಬ್ಬರೂ ಪುತ್ರ ಅಗಸ್ತ್ಯನನ್ನು ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ.

ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು.

Continue Reading
Advertisement
Virat Kohli
ಕ್ರೀಡೆ10 mins ago

Virat Kohli: ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ಕೋಚ್​ ಗಂಭೀರ್​ ವಿಚಾರದಲ್ಲಿ ಕೊಹ್ಲಿ ಕೊಟ್ಟ ಆಶ್ವಾಸನೆ ಏನು?

karnataka Rain
ಮಳೆ17 mins ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

ಪ್ರಮುಖ ಸುದ್ದಿ31 mins ago

Karnataka Job Reservation: ಕನ್ನಡಿಗರಿಗೆ ಮೀಸಲಾತಿ ನೀಡಲು ಕರವೇ ಆಗ್ರಹ; ʼಫೋನ್ ಪೇʼ ಬಾಯ್ಕಾಟ್ ಅಭಿಯಾನ ಶುರು!

Kanwar Yatra
ದೇಶ37 mins ago

Kanwar Yatra: ಕನ್ವರ್‌ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ: ಯೋಗಿ ಆದಿತ್ಯನಾಥ್

Uttara kannada landslide 3
ಉತ್ತರ ಕನ್ನಡ50 mins ago

Uttara Kannada Landslide: 6 ಜನರ ಶವ ಪತ್ತೆ, ಇನ್ನೂ ನಾಲ್ವರಿಗಾಗಿ ಶೋಧ; ಭಾರಿ ಮಳೆ ನಡುವೆ ಮಣ್ಣು ತೆರವು

England vs West Indies
ಕ್ರೀಡೆ58 mins ago

England vs West Indies: ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್

Karnataka Rain
ಮಳೆ1 hour ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Vaibhavi Jagdish Bold Photo shoot
ಸ್ಯಾಂಡಲ್ ವುಡ್1 hour ago

Vaibhavi Jagdish: ಬೋಲ್ಡ್‌ ಫೋಟೊ ಹಂಚಿಕೊಂಡು ಕಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ ಜೈ ಜಗದೀಶ್ ಪುತ್ರಿ!

Kannada Actress Many opportunities for this actress before the release Back Benchers'!
ಸ್ಯಾಂಡಲ್ ವುಡ್1 hour ago

Kannada Actress: `ಬ್ಯಾಕ್‍ ಬೆಂಚರ್ಸ್’ ಬಿಡುಗಡೆಗೂ ಮುನ್ನವೇ ಹಲವು ಅವಕಾಶಗಳು ಈ ನಟಿಗೆ!

Donald Trump
ವಿದೇಶ1 hour ago

Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ17 mins ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 hour ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ21 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ22 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ4 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌