Site icon Vistara News

ENGW vs INDW; ಅಂತಿಮ ಪಂದ್ಯದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ ಭಾರತ ಮಹಿಳಾ ಕ್ರಿಕೆಟ್​ ತಂಡ

Saika Ishaque ran through the England middle order

ಮುಂಬಯಿ: ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಹೀತರ್‌ ನೈಟ್‌ ಪಡೆಯ ಕನಸು ಭಗ್ನವಾಗಿದ್ದು, ಅಂತಿಮ ಪಂದ್ಯದಲ್ಲಿ ಭಾರತ(ENGW vs INDW) ಮಹಿಳಾ ತಂಡ 5 ವಿಕೆಟ್​ಗಳ ಜಯ ಸಾಧಿಸಿದೆ. 126 ರನ್​ಗಳ ಗುರಿ ಬೆನ್ನಟ್ಟಿದ ಹರ್ಮನ್​ಪ್ರೀತ್​ ಕೌರ್​ ಪಡೆ 5 ವಿಕೆಟ್​ ನಷ್ಟಕ್ಕೆ 127 ರನ್​ ಬಾರಿಸಿ ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿತು.

ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಡ್ಯಾಶಿಂಗ್​ ಆಟಗಾರ್ತಿ ಶಫಾಲಿ ವರ್ಮ ಅವರು 6 ರನ್​ಗೆ ವಿಕೆಟ್​ ಕೈಚೆಲ್ಲಿದರು. ಆದರೆ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಜತೆಗೆ ಕಳೆದ 2 ಪಂದ್ಯಗಳಲ್ಲಿ ಅನುಭವಿಸಿದ್ದ ಕಳಪೆ ಬ್ಯಾಟಿಂಗ್​ ಫಾರ್ಮ್​ನ್ನು ಈ ಪಂದ್ಯದಲ್ಲಿ ಸರಿಪಡಿಸಿಕೊಂಡರು.

ಸ್ಮೃತಿ ಅವರಿಗೆ ಮತ್ತೊಂದು ತುದಿಯಲ್ಲಿ ನಂಬುಗೆಯ ಬ್ಯಾಟರ್​ ಜೆಮಿಮಾ ರೋಡ್ರಿಗಸ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ 2ನೇ ವಿಕಟ್​ಗೆ 57 ರನ್​ಗಳನ್ನು ಒಟ್ಟುಗೋಡಿಸಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿತು. ಜೆಮಿಮಾ ಅವರು 33 ಎಸೆತಗಳನ್ನು ಎದುರಿಸಿ 4 ಬೌಂಡರಿ ನೆರವಿನಿಂದ 29 ರನ್​ ಬಾರಿಸಿದರು. ಮಂಧಾನ 48 ಸೆತಗಳಿಂದ 48 ರನ್​ ಬಾರಿಸಿ ಔಟಾಗುವ ಮೂಲಕ ಕೇವಲ 2 ರನ್​ ಅಂತರದಲ್ಲಿ ಅರ್ಧಶತಕದಿಂದ ವಂಚಿತರಾದರು.

ಇದನ್ನು ಓದಿ IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

ಹಠಾತ್​ ಕುಸಿತ

ಉತ್ತಮ ಸ್ಥಿತಿಯಲ್ಲಿದ್ದ ಭಾರತ ತಂಡ ಸ್ಮೃತಿ ಮತ್ತು ಜೆಮಿಮಾ ವಿಕೆಟ್​ ಪತನದ ಬಳಿಕ ಹಠಾತ್​ ಕುಸಿತ ಕಂಡಿತು. ಬಳಿಕ ಬಂದ ದೀಪ್ತಿ ಶರ್ಮ(12) ಮತ್ತು ರಿಚಾ ಘೋಷ್​(2) ವಿಕೆಟ್​ ಕೈಚೆಲ್ಲಿದರು. ಈ ವೇಳೆ ಭಾರತ ಗಲುವಿಗೆ ಬಾಲ್​ ಟು ಬಾಲ್​ ರನ್​ ಕೂಡ ಬೇಕಿತ್ತು. ಒಂದು ಕ್ಷಣ ಆತಂತ ಸೃಷ್ಟಿಯಾಯಿತು. ಆದರೆ ನಾಯಕ ಹರ್ಮನ್​ಪ್ರೀತ್​ ಕೌರ್​(6) ಮತ್ತು ಅಮನ್ಜೋತ್ ಕೌರ್(10) ಅಜೇಯ ಬ್ಯಾಟಿಂಗ್​ ನಡೆಸಿ ತಂಡವನ್ನು ಗಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ ಪರ ನಾಯಕ ಹೀತರ್‌ ನೈಟ್‌ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಅವರು 42 ಎಸೆತಗಳಿಂದ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 52 ರನ್​ ಬಾರಿಸಿದರು. ವಿಕೆಟ್​ ಕೀಪರ್​ ಆ್ಯಮಿ ಜೋನ್ಸ್​(25) ರನ್​ ಗಳಿಸಿದರು. ಉಭಯ ಆಟಗಾರ್ತಿಯರನ್ನು ಹೊರತುಪಡಿಸಿ ಉಳಿದ ಎಲ್ಲ ಆಟಗಾರ್ತಿಯರು ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾದರು.

ಮಿಂಚಿದ ಕನ್ನಡತಿ

ಕಳೆದ ಎರಡು ಪಂದ್ಯಗಳಲ್ಲಿ ದುಬಾರಿ ಬೌಲಿಂಗ್​ ನಡೆಸಿದ್ದ ಕರ್ನಾಟಕದ 21 ವರ್ಷದ ಆಲ್​ರೌಂಡರ್​ ಆಟಗಾರ್ತಿ ಶ್ರೇಯಾಂಕಾ ಪಾಟೀಲ್​ ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಗಮನಸಳೆದರು. 4 ಓವರ್​ ಎಸೆದು ಕೇವಲ 19 ರನ್​ ವೆಚ್ಚದಲ್ಲಿ ಪ್ರಮುಖ 3 ವಿಕೆಟ್​ ಕಿತ್ತರು. ಅವರ ಈ ಸಾಧನಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

Exit mobile version