Site icon Vistara News

Ind vs Pak : ಪಾಕ್ ವಿರುದ್ಧ ಜಯ; ವಂದೇ ಮಾತರಂ ಹಾಡಿದ 1 ಲಕ್ಷ ಅಭಿಮಾನಿಗಳು

india Cricket team

ಅಹಮದಾಬಾದ್​​: ಪಾಕಿಸ್ತಾನದ ತಂಡದ ವಿರುದ್ಧ ವಿಶ್ವ ಕಪ್​ನಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಅದ್ಭುತ 8-0ರ ಮುನ್ನಡೆಯನ್ನು ಕಾಪಾಡಿಕೊಂಡಿದೆ. 1992ರ ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ ಭಾರತಕ್ಕೆ ಮೊದಲ ಗೆಲುವು ಸಿಕ್ಕಿತ್ತು. ಇದೀಗ 2023ರ ವಿಶ್ವ ಕಪ್​ನಲ್ಲಿ (ICC world cup 2023) 7 ವಿಕೆಟ್​ಗಳಿಂದ ಗೆದ್ದು ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಖುಷಿಯಲ್ಲಿ ಆಟದ ಮುಕ್ತಾಯದ ನಂತರ, 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಒಗ್ಗಟ್ಟಾಗಿ “ವಂದೇ ಮಾತರಂ” ಹಾಡಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕ್ರಿಕೆಟ್ ತಂಡ ಅದ್ಭುತ ದಾಖಲೆ ಹೊಂದಿದೆ. ಮೆನ್ ಇನ್ ಬ್ಲೂ ತಮ್ಮ ನೆರೆಯ ದೇಶದ ವಿರುದ್ಧ ವಿರುದ್ಧ ಎಂದಿಗೂ ಸೋತಿಲ್ಲ. ಪ್ರಮುಖ ಹಂತದಲ್ಲಿ 100%ರಷ್ಟು ಗೆಲುವಿನ ಅನುಪಾತವನ್ನು ಹೊಂದಿದೆ. ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಯಾವಾಗಲೂ ಶಕ್ತಿಯಂತೆ ಮೆರೆಯುತ್ತಿದೆ. ಉಭಯ ತಂಡಗಳು 1992ರಲ್ಲಿ ಮೊದಲ ಬಾರಿಗೆ ಭೇಟಿಯಾದವು ಮತ್ತು 2023 ರವರೆಗೆ, ಭಾರತವು ಪ್ರಮಿ ಬಾರಿಯ ಮುಖಾಮುಖಿಯಲ್ಲೂ ಮೇಲುಗೈ ಸಾಧಿಸಿದೆ.

ವಿಶ್ವಕಪ್ ಗಳಲ್ಲಿ ಒಂದು ತಂಡದ ವಿರುದ್ಧದ ಗರಿಷ್ಠ ಪ್ರಾಬಲ್ಯ

ಪಂದ್ಯದಲ್ಲಿ ಏನಾಯಿತು?

ಬೌಲರ್​ಗಳ ಸಂಘಟಿತ ಹೋರಾಟ ನಾಯಕ ರೋಹಿತ್​ ಶರ್ಮಾ (86) ಅವರ ಅಬ್ಬರದ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Ind vs Pak) ವಿರುದ್ಧದ ವಿಶ್ವ ಕಪ್​ (ICC World Cup 2023) ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತವರೂರು ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿತು. ಪಂದ್ಯ ನಡೆದ ಸ್ಟೇಡಿಯಮ್​ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕಾರಣ ಚರ್ಚೆ ಯೂ ಜೋರಾಗಿತ್ತು. ಆದರೆ ಭಾರತ ಬಳಗ ಪಾಕ್​ ತಂಡವನ್ನು ಕ್ಯಾರೇ ಎನ್ನದೇ ಗೆಲುವು ಸಾಧಿಸಿತು.

ಇದರೊಂದಿಗೆ ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡ ಅತ್ಯುತ್ತಮ ಆರಂಭ ಪಡೆದಿದ್ದು ಹ್ಯಾಟ್ರಿಕ್​ ಜಯ ಭಾರತದ ಪಾಲಾಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಭಾರತ ತಂಡ ನಂತರದ ಪಂದ್ಯದಲ್ಲಿ ಅಪಘಾನಿಸ್ತಾನ ತಂಡದ ವಿರುದ್ಧ ಸವಾರಿ ಮಾಡಿತ್ತು. ಇದೀಗ ಪಾಕ್ ವಿರುದ್ಧವೂ ನಿರಾಯಾಸ ಗೆಲುವು ತನ್ನದಾಗಿಸಿಕೊಂಡಿದೆ. ಈ ವಿಜಯದೊಂದಿಗೆ ಪಾಕ್​ ವಿರುದ್ಧ ವಿಶ್ವ ಕಪ್​ ಇತಿಹಾಸದಲ್ಲಿನ ತನ್ನ ಮುನ್ನಡೆಯನ್ನು 8-0 ಅಂತರಕ್ಕೆ ಮುಂದುವರಿಸಿಕೊಂಡಿತು ಟೀಮ್ ಇಂಡಿಯಾ.

ಈ ಸುದ್ದಿಗಳನ್ನೂ ಓದಿ :
ವಿಸ್ತಾರ ಸಂಪಾದಕೀಯ: ಟೀಮ್ ಇಂಡಿಯಾದ ಸ್ಫೂರ್ತಿ ಹೆಚ್ಚಿಸಿದ ರೋಹಿತ್‌ ಶರ್ಮಾ ದಾಖಲೆ
Rohit Sharma : ಒಂದು ಪಂದ್ಯದಲ್ಲಿ ನಾಲ್ಕು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ
Rohit Sharma : ಸಿಕ್ಸರ್​ಗಳನ್ನು ಬಾರಿಸಿ ನೂತನ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​​

ಜಸ್​ಪ್ರಿತ್​ ಬುಮ್ರಾ, ಮೊಹಮ್ಮದ್ ಸಿರಾಜ್​, ಹಾರ್ದಿಕ್ ಪಾಂಡ್ಯ, ಕುಲ್ದೀಪ್​ ಯಾದವ್​, ರವೀಂದ್ರ ಜಡೇಜಾ ತಲಾ 2 ವಿಕೆಟ್​ ಪಡೆಯುವ ಮೂಲಕ ಭಾರತ ತಂಡಕ್ಕೆ ಮುನ್ನಡೆಗೆ ಕಾರಣರಾದರು. ಪಾಕ್​ ವಿರುದ್ಧದ ಗೆಲುವಿನಲ್ಲಿ ಬೌಲರ್​ಗಳ ಪಾಲು ದೊಡ್ಡದಿದೆ. ಪ್ರಮುಖ ಬ್ಯಾಟರ್​ಗಳನ್ನು ಔಟ್​ ಮಾಡುವ ಮೂಲಕ ಸಣ್ಣ ಮೊತ್ತದ ಸವಾಲು ಎದುರಾಗುವಂತೆ ನೋಡಿಕೊಂಡರು. ಇನಿಂಗ್ಸ್​​ ಉದ್ದಕ್ಕೂ ಭಾರತದ ಬೌಲರ್​ಗಳು ಹಾಗೂ ಫೀಲ್ಡರ್​ಗಳು ಮೆರೆದಾಡಿದರು. ಪಾಕ್​ ಬ್ಯಾಟರ್​ಗಳು ಅಕ್ಷರಶಃ ಪರದಾಡಿದರು.

ಇದು ಭಾರತ ತಂಡಕ್ಕೆ ಪಾಕಿಸ್ತಾನ ವಿರುದ್ಧ ಏಕ ದಿನ ಮಾದರಿಯಲ್ಲಿ ಸಿಗುತ್ತಿರುವ ಸತತ ಎರಡನೇ ವಿಜಯ. ಸೆಪ್ಟೆಂಬರ್​ 4ರಂದು ನಡೆದಿದ್ದ ಏಷ್ಯಾ ಕಪ್​ ಸೂಪರ್ ಸಿಕ್ಸ್ ಹಣಾಹಣಿಯಲ್ಲಿ ಪಾಕ್ ವಿರುದ್ಧ​ 228 ರನ್​ಗಳ ಬೃಹತ್ ಅಂತರದ ಗೆಲುವು ದಾಖಲಿಸಿತ್ತು ಭಾರತ.

Exit mobile version