ಪಲ್ಲೆಕೆಲೆ: ಜಗತ್ತೇ ಕಾಯುತ್ತಿರುವ ಏಷ್ಯಾಕಪ್ನ(Asia Cup 2023) ಭಾರತ ಹಾಗೂ ಪಾಕಿಸ್ತಾನ(ind vs pak) ನಡುವಿನ ಹೈವೋಲ್ಟೆಜ್ ಪಂದ್ಯ ಕೆಲವೇ ಕ್ಷಣದಲ್ಲಿ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೆ ಮಳೆಯ ಕಾಟ ಇರುವಂತೆ ತೋರುತ್ತಿದೆ. ಕ್ಯಾಂಡಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಈಗಾಗಲೇ ಮೈದಾನಕ್ಕೆ ಕವರ್ಗಳನ್ನು ಕೂಡ ಹಾಕಿ ಸಂಪೂರ್ಣವಾಗಿ ಮುಚ್ಚಲಾಗಿದೆ. ಒಂದೊಮ್ಮೆ ಮೊದಲ ಇನಿಂಗ್ಸ್ ನಡೆದರೂ ಪೂರ್ಣ ಪಂದ್ಯ ನಡೆಯುವುದು ಬಹುತೇಕ ಕಷ್ಟ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶ್ರೀಲಂಕಾದಲ್ಲಿ ಬಾಲಗೊಳ್ಳ ಹೆಸರಿನ ಚಂಡಮಾರುತ ಅಪ್ಪಳಿಸಲಿದ್ದು ಸಂಜೆಯ ವೇಳೆ ಗುಡುಗು(weather forecast) ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ಇದೆ. ಒಂದೊಮ್ಮೆ ಪಂದ್ಯ ರದ್ದಾದರೆ ಭಾರತ ತಂಡದ ಸೂಪರ್ 4 ಲೆಕ್ಕಾಚಾರ ಹೇಗಿರಲಿದೆ ಎಂಬ ಮಾಹಿತಿ ಇಂತಿದೆ.
ಪಾಕ್ ಸೂಪರ್-4ಗೆ ಪ್ರವೇಶ
ಪಂದ್ಯ ಮಳೆಯಿಂದ ರದ್ದಾದರೆ ಎರಡೂ ತಂಡಗಳಿಗೆ ಅಂಕಗಳನ್ನು ಹಂಚಲಾಗುವುದು. ಆಗ ಪಾಕಿಸ್ತಾನ ಸೂಪರ್-4 ಹಂತ ತಲುಪಲಿದೆ. ಏಕೆಂದರೆ ಪಾಕಿಸ್ತಾನ ಈಗಾಗಲೇ ಮೊದಲ ಪಂದ್ಯದಲ್ಲಿ ನೇಪಾಳವನ್ನು 238 ರನ್ನುಗಳಿಂದ ಮಣಿಸಿತ್ತು. ಹೀಗಾಗಿ ಎ ವಿಭಾಗದಿಂದ ಪಾಕ್ ನೇರವಾಗಿ ಸೂಪರ್-4ಗೆ ಲಗ್ಗೆಯಿಟಲಿದೆ. ಭಾರತ ಸೋಮವಾರದ ಪಂದ್ಯದಲ್ಲಿ ನೇಪಾಳ ವಿರುದ್ಧ ಆಡಬೇಕಿದೆ.
ನೇಪಾಳ ವಿರುದ್ಧದ ಪಂದ್ಯವೂ ರದ್ದಾದರೆ ಭಾರತದ ಗತಿ ಏನು?
ಒಂದೊಮ್ಮೆ ಭಾರತ-ನೇಪಾಳ ಪಂದ್ಯವೂ ಮಳೆಯಿಂದ ರದ್ದಾದರೆ, ಎರಡೂ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಆಗ ಭಾರತ 2 ಅಂಕ ಸಂಪಾಧಿಸಿದಂತಾಗಿ ಎ ಗುಂಪಿನ ದ್ವಿತೀಯ ತಂಡವಾಗಿ ಸೂಪರ್-4 ಟಿಕೆಟ್ ಪಡೆಯಲಿದೆ. ಪಾಕ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಕಂಡ ಕಾರಣ ನೇಪಾಳ ಟೂರ್ನಿಯಿಂದ ಹೊರಬಿಳಲಿದೆ.
ಪಾಕ್ ವಿರುದ್ಧ ಸೋತರೆ ಕಷ್ಟ
ಒಂದೊಮ್ಮೆ ಪಾಕಿಸ್ತಾನ ವಿರುದ್ಧ ಪಂದ್ಯ ನಡೆದು ಇಲ್ಲಿ ಭಾರತ ದೊಡ್ಡ ಅಂತರದಿಂದ ಸೋತರೆ ನೇಪಾಳ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದರೆ ಭಾರತದ ಸೂಪರ್-4 ರೇಸ್ನಿಂದ ಹೊರಬೀಳುವ ಸಾಧ್ಯತೆಯೂ ಇದೆ. ಆಗ ರನ್ರೇಟ್ ಪಾತ್ರ ಪ್ರಮುಖವಾಗುತ್ತದೆ. ಯಾವ ತಂಡ ರನ್ರೇಟ್ನಲ್ಲಿ ಮುಂದಿದೆ ಆ ತಂಡ ಸೂಪರ್-4 ಟಿಕೆಟ್ ಪಡೆಯಲಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್(ವಿಕೆಟ್ ಕೀಪರ್).
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್.