ಡಾರ್ಟ್: ಯುವ ಆಟಗಾರ ಫ್ರಾನ್ಸಿಸ್ಕೊ ಕಾನ್ಸಿಕಾವೊ ಅವರು ಹೆಚ್ಚುವರಿ ಸಮಯದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಯುರೋ ಕಪ್(Euro 2024) ಫುಟ್ಬಾಲ್ ಟೂರ್ನಿಯಲ್ಲಿ ಪೋರ್ಚುಗಲ್(Portugal) ತಂಡ ಚೆಕ್ ಗಣರಾಜ್ಯದ(Czechs ) ವಿರುದ್ಧ 2-1 ಗೋಲ್ ಅಂತರದ ರೋಚಕ ಗೆಲುವು ಸಾಧಿಸಿ ಕೂಡದಲ್ಲಿ ಗೆಲುವಿನ ಶುಭಾರಂಭ ಕಂಡಿದೆ.
ಇಂದು(ಬುಧವಾರ) ನಡೆದ ಈ ರೋಚಕ(Euro cup) ಪಂದ್ಯದಲ್ಲಿ 90 ನಿಮಿಷದ ಆಟದಲ್ಲಿ ಉಭಯ ತಂಡಗಳು 1-1 ಗೋಲು ಬಾರಿಸಿತು. ಪ್ರೇಕ್ಷಕರು ಈ ಪಂದ್ಯ ಡ್ರಾ ಗೊಳ್ಳುವ ಮೂಲಕ ಅಂತ್ಯ ಕಾಣಲಿದೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಹೆಚ್ಚುವರಿ ಆಟದ ಸಮಯದಲ್ಲಿ 21 ವರ್ಷದ ಯುವ ಆಟಗಾರ ಫ್ರಾನ್ಸಿಸ್ಕೊ ಕಾನ್ಸಿಕಾವೊ ಯಾರು ಊಹಿಸದ ರೀತಿಯಲ್ಲಿ ಚೆಂಡನ್ನು ಎದುರಾಳಿ ಗೋಲು ಪೆಟ್ಟಿಗೆಗೆ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಫ್ರಾನ್ಸಿಸ್ಕೊ ಕಾನ್ಸಿಕಾವೊ ಅವರು ಪೋರ್ಚುಗಲ್ ತಂಡದ ಮಾಜಿ ಆಟಗಾರ ಸೆರ್ಗಿಯೋ ಕಾನ್ಸಿಕಾವೊ ಅವರ ಮಗ. ಇವರ ತಂದೆ ಕಾನ್ಸಿಕಾವೊ 2000ರಲ್ಲಿ ನೆಡೆದಿದ್ದ ಯುರೋ ಕಪ್ನಲ್ಲಿ ಜರ್ಮನಿ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ್ದರು. ಇದೀಗ ತಂದೆಯಂತೆ ಮಗ ಫ್ರಾನ್ಸಿಸ್ಕೊ ಕೂಡ ಪೋರ್ಚುಗಲ್ ತಂಡದ ಪರ ಮಿಂಚಲು ಆರಂಭಿಸಿದ್ದಾರೆ. ಆದರೆ, ಅನುಭವಿ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪೆನಾಲ್ಟಿ ಕಿಕ್ ಸಿಕ್ಕರೂ ಕೂಡ ಇದರಲ್ಲಿ ಗೋಲು ಬಾರಿಸಲು ವಿಫಲರಾದರು.
ಇದನ್ನೂ ಓದಿ Austria vs France: ಗಂಭೀರ ಗಾಯಗೊಂಡ ಎಂಬಾಪೆ; ಮುಂದಿನ ಪಂದ್ಯಕ್ಕೆ ಅನುಮಾನ
ಟರ್ಕಿಗೆ ಭರ್ಜರಿ ಗೆಲುವು
ಮಂಗಳವಾರ ತಡರಾತ್ರಿ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಟರ್ಕಿ ತಂಡ ಜಾರ್ಜಿಯಾ ವಿರುದ್ಧ 3-1 ಅಂತರದ ಭಜ್ಋಇ ಗೆಲುವು ಸಾಧಿಸಿದೆ. ಪಂದ್ಯದ 25ನೇ ನಿಮಿಷದಲ್ಲಿ ಮೆರ್ಟಮುಲ್ಡರ್ ಗೋಲು ಬಾರಿಸಿ ಟರ್ಕಿಗೆ ಮುನ್ನಡೆ ತಂದುಕೊಟ್ಟರು. ಇದಾದ 7 ನಿಮಿಷದ ಅಂತರದಲ್ಲಿ ಜಾರ್ಮಿಯ ತಂಡದ ಜಾರ್ಜಸ್ ಮಿಕೌಟಾಡ್ಜೆ ಗೋಲು ಬಾರಿಸಿ ಪ.ದ್ಯವನ್ನು ಸಮಬಲಕ್ಕೆ ತಂದರು.
ಮೊದಲಾರ್ಥ 1-1 ಗೋಲಿನಿಂದ ಮುಕ್ತಾಯಕಂಡಿತು. ದ್ವಿತಿಯಾರ್ಧದಲ್ಲಿ ಮುನ್ನುಗ್ಗಿ ಆಡಿದ ಟರ್ಕಿ ಪರ ಅರ್ದಾ ಗುಲರ್(65ನೇ ನಿಮಿಷ) ಮತ್ತು ಕೆರೆಮ್ ಅಕ್ತುರ್ಕೊಗ್ಲು(90+7) ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದೇ ವೇಳೆ ಅರ್ದಾ ಗುಲರ್ ಅವರು ಯುರೋ ಕಪ್ ಗೋಲು ಬಾರಿಸಿದ ಅತಿ ಕಿರಿಯ ಆಟಗಾರ ಎನ್ನುವ ಹಿರಿಮೆಗೆ ಪಾತ್ರ ರಾದರು. ಅವರಿಗೆ 19 ವರ್ಷ ವಯಸ್ಸು.