Site icon Vistara News

IND vs SA : ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಕುರಿತ ಪೂರ್ಣ ವಿವರ ಇಲ್ಲಿದೆ

Team India

ಬೆಂಗಳೂರು: ತವರು ನೆಲದಲ್ಲಿ ಆಸ್ಟ್ರೇಲಿಯಾವನ್ನು ಟಿ20 ಐ ಸರಣಿಯಲ್ಲಿ ಮಣಿಸಿದ ನಂತರ ಭಾರತವು ದಕ್ಷಿಣ ಆಫ್ರಿಕಾ (IND vs SA) ಪ್ರವಾಸ ಮಾಡಲಿದೆ. ಮೂರು ಟಿ 20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಡಿಸೆಂಬರ್ 10 ರಿಂದ ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಪ್ರವಾಸ ಪ್ರಾರಂಭವಾಗಲಿದ್ದು, ಏಕದಿನ ಸರಣಿ ಡಿಸೆಂಬರ್ 17 ರಂದು ಪ್ರಾರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಚಕ್ರದ (2023-25) ಭಾಗವಾಗಿರುವ ಎರಡು ಟೆಸ್ಟ್ ಪಂದ್ಯಗಳು ಡಿಸೆಂಬರ್ 26 ರಿಂದ ಆರಂಭವಾಗಲಿದೆ.

ಬಿಸಿಸಿಐ (BCCI) ಇತ್ತೀಚೆಗೆ ಪ್ರವಾಸದ ಎಲ್ಲಾ ಮೂರು ಸ್ವರೂಪಗಳಿಗೆ ತಂಡಗಳನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಿಗೆ ವಿಶ್ವಕಪ್ ಅಭಿಯಾನದ ನಂತರ ವೈಟ್ ಬಾಲ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಇವರೆಲ್ಲ ನಾಯಕರು

ಸೂರ್ಯಕುಮಾರ್ ಯಾದವ್ ಟಿ20 ತಂಡವನ್ನು ಮುನ್ನಡೆಸಲಿದ್ದು, ರವೀಂದ್ರ ಜಡೇಜಾ ಉಪನಾಯಕನಾಗಿರುತ್ತಾರೆ. ಕೆಎಲ್ ರಾಹುಲ್ ಏಕದಿನ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಟೆಸ್ಟ್ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಮರಳಲಿದ್ದರೆ. ಭಾರತವು ನಿರ್ಣಾಯಕ ಡಬ್ಲ್ಯುಟಿಸಿ ಅಂಕಗಳನ್ನು ಗಳಿಸಲು ಎದುರು ನೋಡುತ್ತಿದೆ.

2010-11 ರಲ್ಲಿ ಮೊದಲ ಬಾರಿಗೆ ಡ್ರಾ ಸಾಧಿಸಿದ್ದನ್ನು ಹೊರತುಪಡಿಸಿ, 1992ರಿಂದ ಈ ದೇಶದಲ್ಲಿ ಭಾರತ ಇನ್ನೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಇದಲ್ಲದೆ, ಮೆನ್ ಇನ್ ಬ್ಲೂ 50 ಓವರ್​ಗಳ ಸ್ವರೂಪದಲ್ಲಿ ನಿರಾಶಾದಾಯಕ ದಾಖಲೆಯನ್ನು ಹೊಂದಿದೆ. ಕಾಮನಬಿಲ್ಲು ರಾಷ್ಟ್ರದಲ್ಲಿ ಆಡಿದ ಎಂಟು ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ಏಕದಿನ ಸರಣಿಯನ್ನು ಗೆದ್ದಿದೆ.

ಇದನ್ನೂ ಓದಿ : IPL 2024 : ಐಪಿಎಲ್​ ಹರಾಜಿನ ದಿನಾಂಕ, ಸ್ಥಳದ ಬಗ್ಗೆ ಖಚಿತ ಮಾಹಿತಿ ನೀಡಿದ ಬಿಸಿಸಿಐ

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಮಾದರಿಯಲ್ಲಿ ಭಾರತ ಪ್ರಾಬಲ್ಯ ಹೊಂದಿದೆ. ಆಡಿದ ನಾಲ್ಕು ಸರಣಿಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದೆ. ಆದ್ದರಿಂದ, ಮುಂಬರುವ ಪ್ರವಾಸದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಗಳನ್ನು ಗೆಲ್ಲುವ ಮೂಲಕ ತಮ್ಮ ದಾಖಲೆಗಳನ್ನು ಸುಧಾರಿಸಲು ಭಾರತ ಉತ್ಸುಕವಾಗಿದೆ.

ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ

ಏಕದಿನ ಸರಣಿ ವೇಳಾಪಟ್ಟಿ 2023 ಪಂದ್ಯ

ಟೆಸ್ಟ್ ವೇಳಾಪಟ್ಟಿ 2023

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ

ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹರ್.

ಏಕದಿನ ತಂಡ: ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಷ್ದೀಪ್ ಸಿಂಗ್, ದೀಪಕ್ ಚಹರ್.

ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ*, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.

ನೇರ ಪ್ರಸಾರ ಪ್ರಸಾರ ವಿವರಗಳು

ಭಾರತದ ಸಂಪೂರ್ಣ ದಕ್ಷಿಣ ಆಫ್ರಿಕಾ ಪ್ರವಾಸದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನಲ್ಲಿ ಲಭ್ಯವಿದ್ದರೆ, ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್​ಸೈಟ್​ನಲ್ಲಿ ಲಭ್ಯವಿರುತ್ತದೆ.

ನೇರ ಪ್ರಸಾರ- ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಲೈವ್ ಸ್ಟ್ರೀಮಿಂಗ್- ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ ಅಪ್ಲಿಕೇಶನ್ ಮತ್ತು ವೆಬ್ಸೈಟ್

Exit mobile version