Site icon Vistara News

IPL 2023 : ಆಯ್ಕೆ ಸಮಿತಿ ಮೇಲೆ ಗಂಭೀರ ಆರೋಪ ಹೊರಿಸಿದ ಮಾಜಿ ಕ್ರಿಕೆಟಿಗ!

Ambati Rayudu

#image_title

ಹೈದಾರಾಬಾದ್​: ಭಾರತದ ಮಾಜಿ ಬ್ಯಾಟರ್​​ ಅಂಬಾಟಿ ರಾಯುಡು ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023)(ಐಪಿಎಲ್) ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಐಪಿಎಲ್ 2023ರ ಫೈನಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​​ಕೆ) ತಂಡ ಗೆಲ್ಲುವಲ್ಲಿ ಈ ಆಟಗಾರ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್​ ಟೈಟನ್ಸ್​ ವಿರುದ್ಧ 8 ಎಸೆತಗಳಲ್ಲಿ 19 ರನ್ ಗಳಿಸಿದ್ದ ರಾಯುಡು, ಟ್ರೋಫಿ ಗೆದ್ದಾಗ ಆನಂದಬಾಷ್ಪ ಸುರಿಸಿದ್ದರು. ಇದೀಗ ಅವರು ತಮ್ಮ ಕ್ರಿಕೆಟ್​ ವೃತ್ತಿಯ ಬಗ್ಗೆ ಮಾತನಾಡಿದ್ದು ಭಾರತ ತಂಡದ ಮಾಜಿ ಆಯ್ಕೆಗಾರರ ಜತೆ ಕೆಲವೊಂದು ಭಿನ್ನಭಿಪ್ರಾಯಗಳಿದ್ದವು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಸಿಎಸ್​ಕೆ ಮಾಜಿ ಬ್ಯಾಟ್ಸ್​​ಮನ್ ಅದಕ್ಕಿಂತ ಹಿಂದಿನ ಆವೃತ್ತಿಯಲ್ಲಿ ನಿವೃತ್ತಿ ಪಡೆದುಕೊಂಡು ಬಳಿಕ ಯು-ಟರ್ನ್ ತೆಗೆದುಕೊಂಡಿದ್ದರು. ಹೀಗಾಗಿ ಈ ಬಾರಿ ಅವರು ನಿರ್ಧಾರ ವಾಪಸ್​ ಪಡೆಯುವುದಿಲ್ಲ ಎಂದು ಹೇಳಿದ್ದರು. ಅವರು ಹಿಂದೆ ನಿವೃತ್ತಿ ಘೋಷಿಸಿದಾಗ ಸಿಎಸ್ಕೆ ಆಡಳಿತ ಮಂಡಳಿಯ ಮಧ್ಯಪ್ರವೇಶದ ಬಳಿಕ ಫ್ರಾಂಚೈಸಿ ಆಟನ ಮುಂದುವರಿಸುವುದಾಗಿ ಹೇಳಿದ್ದರು. ರಲ್ಲಿ ನಿವೃತ್ತಿ ಘೋಷಿಸಿದ್ದರು. ಅವರನ್ನು 2019ರ ವಿಶ್ವ ಕಪ್​ ತಂಡಕ್ಕೆ ಆಯ್ಕೆ ಮಾಡದಿರುವುದೇ ಅವರ ಕೋಪಕ್ಕೆ ಕಾರಣವಾಗಿತ್ತು.

ಟಿವಿ9 ತೆಲುಗು ಜೊತೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ, ಆ ಸಮಯದಲ್ಲಿ ಆಯ್ಕೆ ಸಮಿತಿಯ ಸದಸ್ಯರೊಂದಿಗೆ ತಮಗೆ ಮನಸ್ತಾಪಗಳಿದ್ದವು ಎಂದು ಬಹಿರಂಗಪಡಿಸಿದ್ದಾರೆ. “ನನ್ನ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ನಾನು ಆಯ್ಕೆ ಸಮಿತಿಯ ಸದಸ್ಯರೊಂದಿಗೆ ಕೆಲವು ಸಮಸ್ಯೆಗಳು ಇದ್ದವು. ಇದು 2019ರ ವಿಶ್ವ ಕಪ್​ ಗೆ ಆಯ್ಕೆಯಾಗದೇ ಇರುವುದು ಅದೇ ಕಾರಣಕ್ಕೆ” ಎಂದು ರಾಯುಡು ಹೇಳಿದ್ದಾರೆ.

ಇದನ್ನೂ ಓದಿ: Viral News: 2019ರ ವಿಶ್ವಕಪ್‌ ಘಟನೆ ನೆನೆದ ಅಂಬಾಟಿ ರಾಯುಡು

2018 ರಲ್ಲಿ ಬಿಸಿಸಿಐ ಅಧಿಕಾರಿಗಳು 2019ರ ವಿಶ್ವ ಕಪ್​​ಗೆ ಸಿದ್ಧರಾಗುವಂತೆ ಹೇಳಿದ್ದರು ಎಂಬುದಾಗಿಯೂ ಇತ್ತೀಚೆಗೆ ನಿವೃತ್ತರಾದ ಅಂಬಾಟಿ ರಾಯುಡು ಹೇಳಿದ್ದರು. ರಾಯುಡು 2013 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್​ನಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಹಿರಿಯ ಬ್ಯಾಟರ್​​ 2019ರಲ್ಲಿ ಜೆಎಸ್​ಸಿಎ ಇಂಟರ್​ನ್ಯಾಷನಲ್​ ಸ್ಟೇಡಿಯಂ ಕಾಂಪ್ಲೆಕ್ಸ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೇ ಅಂತಾರರಾಷ್ಟ್ರೀಯ ಪಂದ್ಯವನ್ನು ಆಡಿದ್​ದರು.. ಟೀಮ್ ಇಂಡಿಯಾ ಪರ 55 ಏಕದಿನ ಹಾಗೂ 6 ಟಿ20 ಪಂದ್ಯಗಳನ್ನು ಅವರು ಆಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ ರೋಹಿತ್​ ಶರ್ಮಾ ನೇತೃತ್ವ ಮುಂಬಯಿ ಇಂಡಿಯನ್ಸ್ ತಂಡದ ಭಾಗವಾಗಿದ್ದರು ಅಂಬಾಟಿ ರಾಯುಡು. ರಾಯುಡು ತಮ್ಮ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಆರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಾನು ಸಿಎಸ್​ಕೆ ತಂಡಕ್ಕೆ ಸೇರಿದಅಗ ಮನೆಗೆ ಮರಳಿದಂತೆ ಭಾಸವಾಯಿತು. ನನ್ನ ವೃತ್ತಿಜೀವನದ ಅತ್ಯಂತ ಆನಂದದಾಯಕ ಹಂತವು ಸಿಎಸ್​ಕೆ ಜತೆಗಿತ್ತು ಎಂದು ಅವರು ಹೇಳಿದ್ದಾರೆ.

Exit mobile version