Site icon Vistara News

MS Dhoni : ಧೋನಿಯೂ ಕೋಪ ಮಾಡ್ಕೋತಾರೆ; ಮಾಜಿ ಆಟಗಾರ ಹೀಗೆ ಹೇಳಿದ್ದು ಯಾಕೆ?

MS Dhoni1

ಚೆನ್ನೈ: ಸಿಎಸ್​ಕೆ ಮಾಜಿ ಸ್ಟಾರ್ ಮ್ಯಾಥ್ಯೂ ಹೇಡನ್ ಅವರು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ಕಿರಿಕಿರಿ ಉಂಟುಮಾಡುವ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವು ಎಲ್ಲಾ ಅಭಿಮಾನಿಗಳಿಗೆ ತಿಳಿದಿರುವ ವಿಷಯವಾಗಿದೆ. ಸ್ಫೋಟಕ ಆರಂಭಿಕ ಆಟಗಾರ ಹೇಡನ್​ 2008ರಿಂದ 2010 ರವರೆಗೆ ಚೆನ್ನೈ ಸೂಪರ್ ಕಿಂಗ್ಸ್​​ ತಂಡ ಭಾಗವಾಗಿದ್ದರು. ಮೆನ್ ಇನ್ ಯೆಲ್ಲೊ ಪರ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದರು. ಇಎಸ್​ಪಿಎನ್​ ಕ್ರಿಕ್ಇನ್ಫೋ ಜತೆ ಮಾತುಕತೆಯಲ್ಲಿ ಹೇಡನ್ ಅವರು ಎಂಎಸ್ ಧೋನಿ ಮತ್ತು ಐಪಿಎಲ್​ಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ನಿಧಾನಗತಿಯ ಫೀಲ್ಡಿಂಗ್ ಎಂಎಸ್ ಧೋನಿಗೆ ಮೈದಾನದಲ್ಲಿ ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ ಎಂದು ಹೇಡನ್ ಬಹಿರಂಗಪಡಿಸಿದರು. ಕಳಪೆ ಫೀಲ್ಡಿಂಗ್​ ಮಾಡಿದ್ದಕ್ಕಾಗಿ ಎಂಎಸ್​ ಧೋನಿ ತಮ್ಮ ಫೀಲ್ಡರ್​ಗಳ ಮೇಲೆ ತಾಳ್ಮೆ ಕಳೆದುಕೊಂಡ ಹಲವಾರು ನಿದರ್ಶನಗಳಿವೆ. ಫೀಲ್ಡರ್ ಗಳೊಂದಿಗೆ ಕ್ಯಾಪ್ಟನ್ ಕೂಲ್ ಅವರ ಕೋಪದ ಸಂಭಾಷಣೆಗಳು, ಸ್ಟಂಪ್ ಮೈಕ್ ಮೂಲಕ ಜನರಿಗ ತಲುಪಿದೆ.

ಎಂ.ಎಸ್.ಧೋನಿ ತುಂಬಾ ದಣಿವಿಲ್ಲದೇ ಆಡುತ್ತಾರೆ. ಆದರೆ ಅವರ ತಂಡದಲ್ಲಿದ್ದುನಿಧಾನಗತಿಯ ಫೀಲ್ಡಿಂಗ್ ಮಾಡಿದರೆ ಅವರು ಸಹಿಸಿಕೊಳ್ಳುವುದಿಲ್ಲ ಎಂದು ಹೇಡನ್ ಹೇಳಿದ್ದಾರೆ. ನಿಧಾನಗತಿಯ ಫೀಲ್ಡಿಂಗ್ ಪ್ರಯತ್ನವನ್ನು ಮಾಡಿದರೆ ಅವರ ಬೈಗಳಕ್ಕೆ ಒಳಗಾಗುವುದು ಗ್ಯಾರಂಟಿ ಎಂದು ಹೇಡನ್ ಹೇಳಿಕೊಂಡಿದ್ದಾರೆ.

ಐಪಿಎಲ್​ನಲ್ಲಿ ‘ಮೋಂಗ್ಸೆ ಬ್ಯಾಟ್’ ಬಳಸದಂತೆ ಧೋನಿ ಹೇಡನ್​ಗೆ ಖಡಕ್​ ಸಲಹೆ ಕೊಟ್ಟಿದ್ದರು. ಅವರ ಸಲಹೆಯ ಹೊರತಾಗಿಯೂ ಮಾಜಿ ಆಸೀಸ್ ಬ್ಯಾಟರ್​ ಉತ್ತಮ ಸ್ಕೋರ್​ಗಳನ್ನು ದಾಖಲಿಸಿದ್ದರು. ನಂತರ ಪಂದ್ಯಾವಳಿಯಲ್ಲಿ ತಮ್ಮ ಶಕ್ತಿಯುತ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಲು ವಿಶೇಷ ಬ್ಯಾಟ್​ ಬಳಸಿದ್ದೆ ಎಂದು ಹೇಡನ್ ಹೇಳಿದ್ದಾರೆ.

ಮೈಕ್ ಹಸ್ಸಿ ಮತ್ತು ಧೋನಿ ನಡುವಿನ 100 ಮೀಟರ್ ಓಟವನ್ನು ಯಾರು ಗೆಲ್ಲುತ್ತಾರೆ ಎಂದು ಕೇಳಿದಾಗ, ಸಿಎಸ್ಕೆ ಮಾಜಿ ಆರಂಭಿಕ ಆಟಗಾರ ಧೋನಿಯನ್ನು ಹಸ್ಸಿ ಹಿಂದಿಕ್ಕಬಹುದು ಎಂದು ಹೇಳಿದರು. ಇದೇ ವೇಳೆ ಅವರು ಹರ್ಭಜನ್ ಸಿಂಗ್ ಅವರನ್ನು ಅತ್ಯಂತ ‘ಮನರಂಜನಾ ಸ್ಲೆಡ್ಜರ್’ ಎಂದು ಹೇಳಿದ್ದಾರೆ.

ಅತಿ ಹೆಚ್ಚು ಗೂಗಲ್ಡ್ ಸೆಲೆಬ್ರಿಟಿ; ನಟಿ ಕಿಯಾರಾ, ಕ್ರಿಕೆಟಿಗ ಶುಭ್ಮನ್ ಟಾಪ್

ಮುಂಬೈ: ಇನ್ನೇನು 20 ದಿನದಲ್ಲಿ ಮುಕ್ತಾಯವಾಗಲಿರುವ ಈ ವರ್ಷದಲ್ಲಿ ಅತಿ ಹೆಚ್ಚು ಗೂಗಲ್‌ನಲ್ಲಿ ಹುಡುಕಾಟಕ್ಕೆ (most googled celeb) ಒಳಗಾದವರ ಪಟ್ಟಿಯನ್ನು ಗೂಗಲ್ ಇಂಡಿಯಾ (Google India) ಬಿಡುಗಡೆ ಮಾಡಿದೆ(Year in Search). ಭಾರತದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿ ನಟಿ ಕಿಯಾರಾ ಅಡ್ವಾಣಿಯಾಗಿದ್ದಾರೆ(Kiara advani)! ಕಿಯಾರಾ ಅವರ ಪತಿ ಸಿದ್ಧಾರ್ಥ ಮಲ್ಹೋತ್ರಾ (Sidharth Malhotra) ಅವರು ಇದೇ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಅಂದರೆ ಗಂಡ-ಹೆಂಡತಿ ಇಬ್ಬರು ಗೂಗಲ್ ಸರ್ಚ್ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ-ಸಿದ್ಧಾರ್ಥ ಅವರು ಈ ವರ್ಷದ ಆರಂಭ, ಫೆಬ್ರವರಿಯಲ್ಲಿ ಮದುವೆಯಾಗಿದ್ದಾರೆ. ಇನ್ನು ಕ್ರಿಕೆಟ್‌ನ ಪ್ರಿನ್ಸ್ ಎಂದು ಕರೆಯಿಸಿಕೊಳ್ಳುತ್ತಿರುವ ಶುಭಮನ್ ಗಿಲ್ (Shubman Gill) ಅವರು ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ, ಕರ್ನಾಟಕ ಮೂಲಕ ನ್ಯೂಜಲೆಂಡ್ ಕ್ರಿಕೆಟರ್ ರಚಿನ್ ರವೀಂದ್ರ (Rachin Ravindra) ಇದ್ದಾರೆ.

ಇದನ್ನೂ ಓದಿ : Virat Kohli : ಗೂಗಲ್​ ಸರ್ಚ್​ನಲ್ಲಿಯೂ ಅಸಾಮಾನ್ಯ ದಾಖಲೆ ಮಾಡಿದ ಕಿಂಗ್ ಕೊಹ್ಲಿ

ಹಾಗೆ ನೋಡಿದರೆ, ಈ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟಿಗರೇ ಇದ್ದಾರೆ. ಭಾರತದಲ್ಲಿ ಐಸಿಸಿ ವರ್ಲ್ಡ್ ಕಪ್ ನಡೆದ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟಿಗರು ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಈ ಕ್ರಿಕೆಟಿಗರ ಪಟ್ಟಿಯಲ್ಲಿ ಈಗಾಗಲೇ ಹೇಳಿದಂತೆ ಶುಭಮನ್ ಗಿಲ್ ಅಗ್ರಸ್ಥಾನದಲ್ಲಿದ್ದಾರೆ.

ಒಟ್ಟಾರ ಈ ಪಟ್ಟಿಯಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ 2ರಲ್ಲಿ ಭಾಗವಹಿಸಿದ ನಂತರ ಖ್ಯಾತಿಗೆ ಏರಿದರು. ಅವರು ಐದನೇ ಸ್ಥಾನದದ್ದಾರೆ. ವೈಲ್ಡ್ ಕಾರ್ಡ್ ಪ್ರವೇಶದ ಹೊರತಾಗಿಯೂ, ಎಲ್ವಿಶ್ ವಿಜೇತರಾಗಿ ಹೊರಹೊಮ್ಮಿದರು. ರೇವ್ ಪಾರ್ಟಿಗಳಲ್ಲಿ ಹಾವಿನ ವಿಷದ ಬಳಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಬಗ್ಗೆ ಅವರು ಇತ್ತೀಚೆಗೆ ವಿವಾದವನ್ನು ಎದುರಿಸಿದ್ದರು.

Exit mobile version