ದೋಹಾ : ಮಾಜಿ ಚಾಂಪಿಯನ್ ಫ್ರಾನ್ಸ್ ತಂಡ ಫಿಫಾ ವಿಶ್ವ ಕಪ್ ತನ್ನ ಎರಡನೇ ಪಂದ್ಯದಲ್ಲೂ ಜಯ ಗಳಿಸಿದೆ. ಶನಿವಾರ ನಡೆದ ದಿನದ ಮೂರನೇ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ ೨-೧ ಗೋಲ್‌ಗಳ ರೋಚಕ ವಿಜಯ ತನ್ನದಾಗಿಸಿಕೊಂಡಿತು.
ಸ್ಟೇಡಿಯಮ್ ೯೭೪ನಲ್ಲಿ ನಡೆದ ಹಣಾಹಣಿಯಲ್ಲಿ ಇತ್ತಂಡಗಳು ಜಯಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಪಂದ್ಯದ ಕೊನೇ ತನಕವೂ ಗೆಲುವಿಗಾಗಿ ಹೋರಾಟ ನಡೆಸಿದವು. ಅದೆರ, ಕೈಲ್ ಎಂಬಾಪೆ (೬೧ ಮತ್ತು ೮೬ನೇ ನಿಮಿಷ) ಅವರ ಅವಳಿ ಗೋಲ್‌ಗಳ ನೆರವು ಪಡೆದ ಫ್ರಾನ್ಸ್ ತಂಡ ಜಯ ತನ್ನದಾಗಿಸಿಕೊಂಡಿತು. ಡೆನ್ಮಾರ್ಕ್ ಪರ ಆಂಡ್ರೆಸ್ ಕ್ರಿಸ್ಟ್‌ಸೆನ್ ೬೮ನೇ ನಿಮಿಷದಲ್ಲಿ ಗೋಲ್ ಬಾರಿಸಿದರೂ ಜಯ ಸಾಧಿಸಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡ ಡಿ ಗುಂಪಿನಲ್ಲಿ ಒಟ್ಟಾರೆ ೬ ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿತು. ಆಸ್ಟ್ರೇಲಿಯಾ ತಂಡ ೩ ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಡೆನ್ಮಾರ್ಕ್‌ಗೆ ಮೂರನೇ ಸ್ಥಾನ ಮಾತ್ರ ದೊರೆಯಿತು.
ದಿನದ ಮೊದಲೆರಡು ಪಂದ್ಯಗಳಲ್ಲಿ ಪೋಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡ ಕ್ರಮವಾಗಿ ಸೌದಿ ಅರೇಬಿಯಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿತ್ತು.
ಇದನ್ನೂ ಓದಿ ವ| FIFA World Cup | ಪೋಲೆಂಡ್‌ಗೆ ಮಣಿದ ಸೌದಿ ಅರೇಬಿಯಾ, ಆಸ್ಟ್ರೇಲಿಯಾಗೆ ಟ್ಯುನೀಷಿಯಾ ವಿರುದ್ಧ ಜಯ