Site icon Vistara News

INDvsWI : ಸರ್ಫರಾಜ್‌ ಖಾನ್‌ ಆಯ್ಕೆ ಮಾಡುವುದಿಲ್ಲ ಎಂದು ಘೋಷಿಸಲಿ; ಬಿಸಿಸಿಐಗೆ ಮಾಜಿ ಆಟಗಾರನ ಸವಾಲು

Sarfaraz Khan

#image_title

ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾದ ಟೆಸ್ಟ್ ಮತ್ತು ಏಕದಿನ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ತಂಡಗಳಲ್ಲಿ ಬಿಸಿಸಿಐ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ತಿಂಗಳ ಆರಂಭದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿ ತಂಡಕ್ಕೆ ಮರಳಿದ್ದ ಹಿರಿಯ ಬ್ಯಾಟರ್‌ ಅಜಿಂಕ್ಯ ರಹಾನೆ ಅವರಿಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಇದೇ ವೇಳೇ ಚೇತೇಶ್ವರ ಪೂಜಾರ ಅವರನ್ನು ಕೈಬಿಡಲಾಗಿದೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡಿದೆ. ಆದರೆ ತಂಡ ಆಯ್ಕೆಯ ಗಮನಾರ್ಹ ಸಂಗತಿಯೆಂದರೆ ಸರ್ಫರಾಜ್ ಖಾನ್‌ಗೆ ಅವಕಾಶ ನೀಡದಿರುವುದು.

ಕಳೆದ ಕೆಲವು ವರ್ಷಗಳಿಂದ ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನದ ನೀಡುತ್ತಿರುವ ಸರ್ಫರಾಜ್ ಖಾನ್‌ಗೆ ಇನ್ನೂ ಟೀಮ್‌ ಇಂಡಿಯಾದ ಕರೆ ಬಂದಿಲ್ಲ ಎಂಬುದೇ ಅಚ್ಚರಿ. ಅವರಿಗೆ ವಿಂಡೀಸ್‌ ಪ್ರವಾಸದಲ್ಲೂ ಅವಕಾಶ ಕೊಡದಿರುವ ಬಗ್ಗೆ ಜೂರು ಚರ್ಚೆಗಳು ನಡೆಯುತ್ತಿದೆ. ಅಂತೆಯೇ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಕೂಡ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಸರ್ಫರಾಜ್ ಅವರ ನಿರಂತರ ತಿರಸ್ಕಾರದ ಹಿಂದಿನ ಕಾರಣಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಿ ಎಂದು ಕೇಳಿದೆ. ಅವರನ್ನು ಯಾಕೆ ರಾಷ್ಟ್ರೀಯ ತಂಡದಲ್ಲಿ ಆಡಿಸುತ್ತಿಲ್ಲ ಎಂಬ ವಿಷಯವನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: INDvsWI : ಪೂಜಾರ ಒಬ್ಬರನ್ನೇ ಯಾಕೆ ಬಲಿಪಶು ಮಾಡುತ್ತೀರಿ, ಆಯ್ಕೆಗಾರರಿಗೆ ಗವಾಸ್ಕರ್‌ ಪ್ರಶ್ನೆ

ಸರ್ಫರಾಜ್ ಏನು ಮಾಡಬೇಕಾಗಿದೆ ಇನ್ನೂ. ಕಳೆದ 3 ವರ್ಷಗಳಲ್ಲಿ ಅವರು ರಣಜಿಯಲ್ಲಿ ಗಳಿಸಿದ ರನ್‌ಗಳನ್ನು ನೋಡಿದರೆ ಉಳಿದವರಿಗಿಂತ ಹೆಚ್ಚು ಅರ್ಹರು. ಅವರು ಎಲ್ಲ ಕಡೆ ಸ್ಕೋರ್ ಮಾಡಿದ್ದಾರೆ. ಇಷ್ಟಾಗಿಯೂ ಅವರು ಆಯ್ಕೆಯಾಗದಿದ್ದರೆ ಯಾವ ಸಂದೇಶವನ್ನು ರವಾನಿಸುತ್ತದೆ ಎಂದು ಚೋಪ್ರಾ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಶ್ನಿಸಿದ್ದಾರೆ.

ಇದು ಸಕಾಲಿಕ ಪ ಪ್ರಶ್ನೆ. ಸರ್ಫರಾಜ್‌ ಅವರನ್ನು ಆಯ್ಕೆ ಮಾಡಲು ನಿಮಗೆ ಮತ್ತು ನಮಗೆ ಗೊತ್ತಿಲ್ಲದ ಬೇರೆ ಯಾವುದಾದರೂ ಕಾರಣವಿದ್ದರೆ ಅದನ್ನು ಸಾರ್ವಜನಿಕಗೊಳಿಸುವುದು ಉತ್ತಮ. ಸರ್ಫರಾಜ್ ಅವರ ನಿರ್ದಿಷ್ಟ ವಿಷಯ ನಿಮಗೆ ಇಷ್ಟವಾಗಲಿಲ್ಲ ಎಂದು ಹೇಳಬಹುದು. ಅದೇ ಕಾರಣಕ್ಕೆ ಅವರನ್ನು ಪರಿಗಣಿಸುತ್ತಿಲ್ಲ ಎಂದು ಹೇಳಬೇಕು. ಈ ಕುರಿತು ಸರ್ಫರಾಜ್‌ ಅವರಿಗೆ ಯಾರಾದರೂ ಮಾಹಿತಿ ನೀಡಿದ್ದಾರೆಯೇ ಎಂಬುದನ್ನೂ ತಿಳಿದುಕೊಳ್ಳಬೇಕಾಗಿದೆ ಚೋಪ್ರಾ ಹೇಳಿದ್ದಾರೆ.

ನೀವು ಪ್ರಥಮ ದರ್ಜೆ ರನ್‌ಗಳಿಗೆ ಬೆಲೆ ನೀಡದಿದ್ದರೆ ದೇಶಿಯ ಕ್ರಿಕೆಟ್‌ಗೆ ಮೌಲ್ಯ ಇರುವುದಿಲ್ಲ. ಇದು ಮುಂದುವರಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ” ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಹೇಳಿದರು. ಸರ್ಫರಾಜ್ ಅವರೊಂದಿಗೆ ರಣಜಿ ಟ್ರೋಫಿಯಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡುತ್ತಿದ್ದ ಮತ್ತೊಬ್ಬ ದೇಶೀಯ ತಾರೆ ಅಭಿಮನ್ಯು ಈಶ್ವರನ್ ಅವರಿಗೂ ಟೆಸ್ಟ್‌ ತಂಡದಲ್ಲಿ ಅವಕಾಶ ನೀಡಿಲ್ಲ.

Exit mobile version