ಕ್ರಿಕೆಟ್
INDvsWI : ಪೂಜಾರ ಒಬ್ಬರನ್ನೇ ಯಾಕೆ ಬಲಿಪಶು ಮಾಡುತ್ತೀರಿ, ಆಯ್ಕೆಗಾರರಿಗೆ ಗವಾಸ್ಕರ್ ಪ್ರಶ್ನೆ
ಭಾರತ ತಂಡದ ಬ್ಯಾಟರ್‌ಗಳೆಲ್ಲರೂ ವಿಫಲವಾಗಿರುವಾಗ ಪೂಜಾರ ಒಬ್ಬರನ್ನೇ ವೆಸ್ಟ್ ಇಂಡೀಸ್ ಸರಣಿಗೆ (INDvsWI ) ಕೈ ಬಿಟ್ಟಿರುವುದು ಸರಿಯಲ್ಲ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಮುಂಬಯಿ: ಜುಲೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ (INDvsWI) ಬಹು ಸ್ವರೂಪದ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ತಂಡದ ಆಯ್ಕೆ ಸಮಿತಿಯು ಅಧಿಕೃತವಾಗಿ ತಂಡಗಳನ್ನು ಪ್ರಕಟಿಸಿದೆ. ಟೆಸ್ಟ್ ಮತ್ತು ಏಕದಿನ ಸರಣಿಗೆ ತಂಡಗಳನ್ನು ಪ್ರಕಟಿಸಲಾಗಿದ್ದು ಮುಂದಿನ ದಿನಗಳಲ್ಲಿ ಟಿ20 ತಂಡವನ್ನು ಪ್ರಕಟಿಸುವುದಾಗಿ ಹೇಳಿದೆ. ಈ ತಂಡದ ಪ್ರಮುಖ ಹೈಲೈಟ್ ಎಂದರೆ ಟೆಸ್ಟ್ ಸರಣಿಗೆ ಚೇತೇಶ್ವರ್ ಪೂಜಾರ ಅವರನ್ನು ಹೊರಗಿಟ್ಟಿರುವುದು. ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಆಗಿರುವ ಅವರನ್ನು ವಿಂಡೀಸ್ ಸರಣಿಗೆ ಕೈ ಬಿಟ್ಟಿರುವ ವಿಚಾರ ಚರ್ಚೆಗೆ ಕಾರಣವಾಗಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಈ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಎಲ್ಲರೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವಾಗ ಪೂಜಾರ ಅವರನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : INDvsWI 2023 : ರಿಷಭ್, ರಾಹುಲ್ ಅನುಪಸ್ಥಿತಿಯಲ್ಲಿ ಕೇರಳದ ವಿಕೆಟ್‌ಕೀಪರ್‌ಗೆ ಸಿಕ್ಕಿತು ಚಾನ್ಸ್!
ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) 2021-23 ರ ಫೈನಲ್‌ನಲ್ಲಿ ಭಾರತ ತಂಡ ಹೀನಾಯ ಸೋಲು ಅನುಭವಿಸಿತ್ತು. ಅದಕ್ಕೆ ಭಾರತ ತಂಡದ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಕಾರಣ. ಭಾರತೀಯ ತಂಡದ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವನ್ನು ಗವಾಸ್ಕರ್ ಇಲ್ಲಿ ಉಲ್ಲೇಖಿಸಿದ್ದಾರೆ. ಫೈನಲ್‌ನಲ್ಲಿ ಸಂದರ್ಭಕ್ಕೆ ತಕ್ಕಂತೆ ಎಲ್ಲ ಆಟಗಾರರು ಆಡದೇ ಇರುವಾಗ ವೈಫಲ್ಯಗಳಿಗೆ ಪೂಜಾರ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.
ಆಯ್ಕೆ ಸಮಿತಿ ಸ್ಪಷ್ಟವಾಗಿ, ಒಬ್ಬ ಆಟಗಾರನನ್ನು ಮಾತ್ರ ಪ್ರತ್ಯೇಕಿಸಿ ನೋಡುತ್ತಿದೆ. ಇತರರು ಸಹ ಬ್ಯಾಟಿಂಗ್‌ನಲ್ಲಿ ವಿಫಲರಾಗಿರುವುದು ಇಲ್ಲಿ ಸ್ಪಷ್ಟ. ಅಜಿಂಕ್ಯ ರಹಾನೆ ಹೊರತುಪಡಿಸಿ ಯಾರೂ ಪ್ರತಿರೋಧ ಒಡ್ಡಿಲ್ಲ. ಅವರು ಎರಡೂ ಇನ್ನಿಂಗ್ಸ್ ಅವರು 89 ಮತ್ತು 46 ರನ್ ಗಳಿಸಿದರು, ಹಾಗಾದರೆ ಅವರನ್ನು (ಚೇತೇಶ್ವರ ಪೂಜಾರ) ಏಕೆ ಕೈಬಿಡಲಾಗಿದೆ? ನಮ್ಮ ಬ್ಯಾಟಿಂಗ್ ವೈಫಲ್ಯಗಳಿಗೆ ಅವರನ್ನು ಏಕೆ ಬಲಿಪಶು ಮಾಡಲಾಗುತ್ತಿದೆ. ಅವರು ಭಾರತೀಯ ಕ್ರಿಕೆಟ್ ತಂಡದ ನಿಜವಾದ ಆಟಗಾರ ಏಕೆಂದರೆ ಅವರು ಎಲ್ಲಿಯೂ ಲಕ್ಷಾಂತರ ಅನುಯಾಯಿಗಳನ್ನು ಹೊಂದಿಲ್ಲ. ಹೀಗಾಗಿ ಟೀಕೆಗಳು ವ್ಯಕ್ತವಾಗುವುದಿಲ್ಲ ಎಂದು ಅವರನ್ನು ಕೈ ಬಿಡಲಾಗಿದೆ ಎಂಬುದಾಗಿ ಗವಾಸ್ಕರ್ ಟೀಕೆ ಮಾಡಿದ್ದಾರೆ
ಪೂಜಾರ ಅವರನ್ನು ಬಲಿಪಶು ಮಾಡಲಾಗಿದೆ. ಅವರನ್ನು ತಂಡದಿಂ ಕೈಬಿಡಲು ಮತ್ತು ವಿಫಲವಾದ ಇತರರನ್ನು ಉಳಿಸಿಕೊಳ್ಳಲು ಇರುವ ಮಾನದಂಡಗಳು ಯಾವುದು? ಅವರು ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಸಾಕಷ್ಟು ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದಾರೆ. ಅದು ಏನು ಎಂದು ಅವರಿಗೆ ತಿಳಿದಿದೆ. 40 ಅಥವಾ 39 ವರ್ಷದವರೆಗೆ ಟೆಸ್ಟ್ ಕ್ರಿಕೆಟ್ ಆಡಬಹುದು. ಅವರೆಲ್ಲರೂ ತುಂಬಾ ಫಿಟ್ ಆಗಿರುವುದರಿಂದ ಯಾವುದೇ ತಪ್ಪಿಲ್ಲ. ಎಲ್ಲಿಯವರೆಗೆ ನೀವು ರನ್ ಗಳಿಸುತ್ತೀರೋ ಮತ್ತು ವಿಕೆಟ್ ಪಡೆಯುತ್ತೀರೋ ಅಲ್ಲಿಯವರೆಗೆ ಆಡಬಹುದು ಎಂದು ಗವಾಸ್ಕರ್ ಹೇಳಿದ್ದಾರೆ.
ಡಬ್ಲ್ಯುಟಿಸಿ ಫೈನಲ್‌ನಲ್ಲಿ ಪೂಜಾರ ಅವರು 14 ಮತ್ತು 27 ರನ್ ಗಳಿಸಲು ಮಾತ್ರ ಗಳಿಸಿದ್ದರು. ಅವರ ಮೇಲೆ ತಂಡ ಇಟ್ಟಿದ್ದ ನಿರೀಕ್ಷೆ ಸುಳ್ಳಾಗಿತ್ತು. ಹೀಗಾಗಿ ವಿಂಡಿಸ್ ಸರಣಿಗೆ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್ ಅವರನ್ನು ಮುಂಬರುವ ಪ್ರವಾಸಕ್ಕಾಗಿ ಆಯ್ಕೆ ಮಾಡಲಾಗಿದೆ.
ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.
ಕ್ರಿಕೆಟ್
Narendra Modi : ಶಿವನ ಥೀಮ್ ಹೊಂದಿರುವ ಕ್ರಿಕೆಟ್ ಸ್ಟೇಡಿಯಮ್ಗೆ ಅಡಿಗಲ್ಲು ಹಾಕಿದ ಪ್ರಧಾನಿ ಮೋದಿ, ಎಲ್ಲಿ ನಿರ್ಮಾಣ?
450 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕ್ರಿಕೆಟ್ ಸ್ಟೇಡಿಯಮ್ ನಿರ್ಮಾಣವಾಗಲಿದೆ. ಅಡಿಗಲ್ಲು ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಜತೆಗೆ
ವಾರಣಾಸಿ: ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಶಿವನ ಮಾದರಿಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. 121 ಕೋಟಿ ರೂಪಾಯಿ ಮೌಲ್ಯದ ಭೂಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣಕ್ಕೆ ಸುಮಾರು 330 ಕೋಟಿ ರೂಪಾಯಿ ಅಂದಾಜು ವೆಚ್ಚ ಹಾಕಲಾಗಿದೆ. ಹಿಂದೂಗಳಿಗೆ ಪರಮಪವಿತ್ರ ಕ್ಷೇತ್ರವಾಗಿರುವ ಕಾಶಿಯ ಸಮೀಪ ನಿರ್ಮಾಣವಾಗಲಿರುವ ಈ ಸ್ಟೇಡಿಯಮ್ ಅನ್ನು ಶಿವನಿಗೆ ಸಮರ್ಪಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
PM Shri @narendramodi lays the foundation stone of International Cricket Stadium in Varanasi, UP https://t.co/DVwHlUqQMT
— BJP (@BJP4India) September 23, 2023
ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಬಟನ್ ಒತ್ತುವ ಮೂಲಕ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು. ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಕಸ್ಟಮ್ ಟೀಮ್ ಇಂಡಿಯಾ ಜೆರ್ಸಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಧ್ಯಕ್ಷ ರೋಜರ್ ಬಿನ್ನಿ ವಿಶೇಷ ಸಹಿ ಮಾಡಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು.
PM Shri @narendramodi lays the foundation stone of International Cricket Stadium in Varanasi, UP https://t.co/DVwHlUqQMT
— BJP (@BJP4India) September 23, 2023
ಇದು ಸುಮಾರು 30,000 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಭವಿಷ್ಯದಲ್ಲಿ ಅದರನ್ನು 45 ಸಾವಿರಕ್ಕೆ ಏರಿಕೆ ಮಾಡುವ ಗುರಿಯಿದೆ. ಅರ್ಧಚಂದ್ರಾಕಾರದ ಚಾವಣಿಯ ಕವರ್ಗಳು, ತ್ರಿಶೂಲದ ಆಕಾರದ ಫ್ಲಡ್ಲೈಟ್ಗಳು ಮತ್ತು ಬಿಲ್ವಪತ್ರೆ ಎಲೆ ಮತ್ತು ಢಮರುಗವನ್ನು ಹೋಲುವ ರಚನೆಗಳಂತಹ ವಿಶಿಷ್ಟ ವಿನ್ಯಾಸದ ಅಂಶಗಳನ್ನು ಈ ಸ್ಟೇಡಿಯಮ್ ಹೊಂದಿರಲಿದೆ.
ಕ್ರೀಡಾಂಗಣದ ವಿನ್ಯಾಸವು ಕಾಶಿಯ ಸಾರವನ್ನು ಸೆರೆಹಿಡಿಯುವ ಗುರಿಯನ್ನು ಹೊಂದಿದೆ, ಪ್ರೇಕ್ಷಕರ ಗ್ಯಾಲರಿ ವಾರಣಾಸಿಯ ಘಾಟ್ಗಳ ಮೆಟ್ಟಿಲುಗಳನ್ನು ಹೋಲುತ್ತದೆ. ಕ್ರೀಡಾಂಗಣವನ್ನು ಡಿಸೆಂಬರ್ 2025 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ : Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
ಶಂಕುಸ್ಥಾಪನೆ ಮಾಡುವುದರ ಜೊತೆಗೆ, ಪ್ರಧಾನಿ ಮೋದಿ ವಾರಣಾಸಿಯಲ್ಲಿ ನಡೆದ ಮಹಿಳಾ ಬೆಂಬಲಿಗರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕಾರ್ಯದರ್ಶಿ ಜಯ್ ಶಾ ಭಾಗವಹಿಸಿದ್ದರು. ಕಾನ್ಪುರ ಮತ್ತು ಲಕ್ನೋ ನಂತರ ಇದು ಉತ್ತರ ಪ್ರದೇಶದ ಮೂರನೇ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಾಗಲಿದೆ.
ವಿಮಾನದ ಮೂಲಕ ವಾರಣಾಸಿಗೆ ಆಗಮಿಸಿದ ಪ್ರಧಾನಿ ಮೋದಿ ಮಧ್ಯಾಹ್ನ 1:30 ರ ಸುಮಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ಎಂದು ವರದಿಗಳು ತಿಳಿಸಿವೆ. ಇದಕ್ಕೂ ಮುನ್ನ ಉಪಸ್ಥಿತರಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಘಟನೆಯನ್ನು “ಕಾಶಿ ಇತಿಹಾಸದಲ್ಲಿ ಸುವರ್ಣ ಅಧ್ಯಾಯ” ಎಂದು ಬಣ್ಣಿಸಿದ್ದಾರೆ.
ಸಿಎಂ ಟ್ವೀಟ್ ಪ್ರಕಾರ, ಕಾಶಿ ಸಂಸದರಾಗಿರುವ ಪ್ರಧಾನಿ ಮೋದಿ ಸಾಂಸ್ಕೃತಿಕ ಮಹೋತ್ಸವ 2023 ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭ ದಲ್ಲಿ 1,115 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ 16 ಅಟಲ್ ವಸತಿ ಶಾಲೆಗಳನ್ನು ಉದ್ಘಾಟಿಸಲಿದ್ದಾರೆ.
ಕ್ರಿಕೆಟ್
Viral Video: ಪಂದ್ಯ ಮುಗಿದರೂ ತಡರಾತ್ರಿವರೆಗೂ ಬ್ಯಾಟಿಂಗ್ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ ಆಟಗಾರ
ಮೊಹಾಲಿಯಲ್ಲಿ ಪಂದ್ಯ ಮುಕ್ತಾಯಗೊಂಡ ಬಳಿಕವೂ ಹಿರಿಯ ಮತ್ತು ಅನುಭವಿ ಸ್ಪಿನ್ನ್ ಬೌಲರ್ ಆರ್. ಅಶ್ವಿನ್(Ravichandran Ashwin) ತಡರಾತ್ರಿವರೆಗೂ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿರುವ ವಿಡಿಯೊ ವೈರಲ್(Viral Video) ಆಗಿದೆ.
ಮೊಹಾಲಿ: ಆಸ್ಟ್ರೇಲಿಯಾ(IND vs AUS) ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ 5 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ದ್ವಿತೀಯ ಪಂದ್ಯ ಭಾನುವಾರ ಇಂದೋರ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಮೊಹಾಲಿಯಲ್ಲಿ ಪಂದ್ಯ ಮುಕ್ತಾಯಗೊಂಡ ಬಳಿಕವೂ ಹಿರಿಯ ಮತ್ತು ಅನುಭವಿ ಸ್ಪಿನ್ನ್ ಬೌಲರ್ ಆರ್. ಅಶ್ವಿನ್(Ravichandran Ashwin) ತಡರಾತ್ರಿವರೆಗೂ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿರುವ ವಿಡಿಯೊ ವೈರಲ್(Viral Video) ಆಗಿದೆ.
ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಅಶ್ವಿನ್ ಅವರನ್ನು ಆಸೀಸ್ ಸರಣಿಗೆ ಆಯ್ಕೆ ಮಾಡಿ ಮೊದಲ ಪಂದ್ಯದಲ್ಲೇ ಆಡುವ ಅವಕಾಶ ಕಲ್ಪಿಸಲಾಯಿತು. 10 ಓವರ್ ಎಸೆದ ಅಶ್ವಿನ್ 47 ರನ್ ನೀಡಿ ಒಂದು ವಿಕೆಟ್ ಕಿತ್ತರು. ಆದರೆ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿರಲಿಲ್ಲ. ಆದರೂ ಅವರು ಮುಂದಿನ ಪಂದ್ಯಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ಪಂದ್ಯ ಮುಗಿದ ಬಳಿಕ ನೆಟ್ಸ್ನಲ್ಲಿ ಏಕಾಂಗಿಯಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಈ ವಿಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದೆ.
ಅಕ್ಷರ್ ಬದಲು ವಿಶ್ವಕಪ್ ಆಡುವರೇ ಅಶ್ವಿನ್?
ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಿದ ವೇಳೆ ಅಶ್ವಿನ್ಗೆ ಅವಕಾಶ ನೀಡದ ಕುರಿತು ಅನೇಕ ಮಾಜಿ ಕ್ರಿಕೆಟಿಗರು ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಟೂರ್ನಿ ಭಾರತದಲ್ಲೇ ನಡೆಯುವ ಕಾರಣ ಅಶ್ವಿನ್ ಮತ್ತು ಜಡೇಜಾ ಕಾಂಬಿನೇಶನ್ ಉತ್ತಮವಾಗಿರುತ್ತಿತ್ತು. ಅಲ್ಲದೆ ಅಶ್ವಿನ್ ಭಾರತದ ಪಿಚ್ನಲ್ಲಿ ಅಪಾರ ಪಂದ್ಯಗಳನ್ನು ಆಡಿದ ಅನುಭವವನ್ನು ಹೊಂದಿದ್ದರು. ಬ್ಯಾಟಿಂಗ್ ಕೂಡ ಮಾಡಬಲ್ಲರು. ಹೀಗಾಗಿ ಅವರಿಗೆ ಅವಕಾಶ ನೀಡಬೇಕಿತ್ತು ಎನ್ನುವುದು ಹಲವರ ವಾದವಾಗಿತ್ತು.
ಟ್ವಿಟರ್ ವಿಡಿಯೊ
— Nihari Korma (@NihariVsKorma) September 23, 2023
ಏಷ್ಯಾಕಪ್ನಲ್ಲಿ ಅಕ್ಷರ್ ಪಟೇಲ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಆಟಗಾರನಾಗಿದ್ದಾರೆ. ಒಂದೊಮ್ಮೆ ಅವರು ಗಾಯದಿಂದ ಹೊರಬಿದ್ದರೆ ಅವರ ಸ್ಥಾನಕ್ಕೆ ಅಶ್ವಿನ್ ಆಯ್ಕೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅವರಿಗೆ ಆಸೀಸ್ ಸರಣಿಯಲ್ಲಿ ದಿಢೀರ್ ಅವಕಾಶ ನೀಡಿದಂತೆ ತೋರುತ್ತಿದೆ. ಇನ್ನೊಂದೆಡೆ ವಾಷಿಂಗ್ಟನ್ ಸುಂದರ್ ಕೂಡ ಈ ರೇಸ್ನಲ್ಲಿದ್ದಾರೆ. ಹೀಗಾಗಿ ಅಶ್ವಿನ್ ಆಸೀಸ್ ವಿರುದ್ಧ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆಯ್ಕೆ ಸಮಿತಿಯ ಗಮನಸೆಳೆಯುವ ನಿಟ್ಟಿನಲ್ಲಿ ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿ ಮುಂದಿ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ನಿರೀಕ್ಷಿತ ಪ್ರದರ್ಶನ ತೋರುವ ಪಣ ತೊಟ್ಟಂತಿದೆ.
ಇದನ್ನೂ ಓದಿ ind vs aus : 21ನೇ ಶತಮಾನದಲ್ಲಿ ಭಾರತ ಕ್ರಿಕೆಟ್ ತಂಡದ ವಿಶೇಷ ದಾಖಲೆ, ಮೊಹಾಲಿ ಕ್ರೀಡಾಂಗಣವೇ ಸಾಕ್ಷಿ
ಪಂದ್ಯ ಗೆದ್ದ ಭಾರತ
ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 276 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ. 48.4 ಓವರ್ಗಳಲ್ಲಿ. 5 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು. ಭಾರತ ತಂಡದ ಪರ ಬೌಲಿಂಗ್ನಲ್ಲಿ 51 ರನ್ಗಳಿಗೆ 5 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್ಮನ್ ಗಿಲ್ (74) ಹಾಗೂ ಋತುರಾಜ್ ಗಾಯಕ್ವಾಡ್ (71), ಸೂರ್ಯಕುಮಾರ್ ಯಾದವ್ (50), ಮತ್ತು ಕೆ. ಎಲ್ ರಾಹುಲ್ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು.
ಕ್ರಿಕೆಟ್
ICC World Cup: ಪಾಕಿಸ್ತಾನ ತಂಡಕ್ಕೆ ವೀಸಾ ಸಮಸ್ಯೆ; ಭಾರತ ಪ್ರಯಾಣ ವಿಳಂಬ
ಭಾರತಕ್ಕೆ ಪ್ರಯಾಣಿಸಲು ವೀಸಾಗಳನ್ನು(visa) ಪಡೆಯಲು ವಿಳಂಬವಾದ ಕಾರಣ ಪಾಕ್ ತಂಡದ ದುಬೈ ಭೇಟಿ ರದ್ದುಗೊಂಡಿದೆ ಎಂದು ವರದಿಯಾಗಿದೆ.
ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್(ICC World Cup) ಆರಂಭಕ್ಕೂ ಮುನ್ನವೇ ಪಾಕಿಸ್ತಾನ(Pakistan’s World Cup 2023) ತಂಡಕ್ಕೆ ಹಿನ್ನಡೆಯಾಗಿದೆ. ಭಾರತಕ್ಕೆ ಪ್ರಯಾಣಿಸಲು ವೀಸಾಗಳನ್ನು(visa) ಪಡೆಯಲು ವಿಳಂಬವಾದ ಕಾರಣ ಪಾಕ್ ತಂಡದ ದುಬೈ ಭೇಟಿ ರದ್ದುಗೊಂಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ತಂಡ ವಿಶ್ವಕಪ್ ಪಂದ್ಯಗಳನ್ನು ಆಡುವ ಮುನ್ನ ದುಬೈನಲ್ಲಿ ಪೂರ್ವ ತಯಾರಿ ನಡೆಸುವ ಯೋಜನೆಯಲ್ಲಿತ್ತು. ಆದರೆ ವೀಸಾ ಸಮಸ್ಯೆಯಿಂದ ಈ ಯೋಜನೆಗೆ ಅಡ್ಡಿಯುಂಟಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಭಾರತ ಪ್ರಯಾಣ ವಿಳಂಬವಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಹೈದರಾಬಾದ್ನಲ್ಲಿ ಸೆಪ್ಟೆಂಬರ್ 29 ರಂದು ಕಿವೀಸ್ ವಿರುದ್ಧ ಆಡಲಿದೆ. ಕ್ರಿಕ್ಇನ್ಫೋ ವರದಿಯ ಪ್ರಕಾರ, ಪಾಕಿಸ್ತಾನ ತಂಡವು ಈ ಪಂದ್ಯಕ್ಕೂ ಮುನ್ನ ಅಭ್ಯಾಸಕ್ಕಾಗಿ ಮುಂದಿನ ವಾರದ ಆರಂಭದಲ್ಲಿ ದುಬೈಗೆ ಪ್ರಯಾಣಿಸಬೇಕಿತ್ತು. ಆದರೆ ವೀಸಾ ಪಡೆಯುವ ಪ್ರಕ್ರಿಯೆಯಲ್ಲಿ ವಿಫಲವಾದ ಕಾರಣ ಪಾಕ್ ತಂಡದ ದುಬೈ ಪ್ರವಾಸ ಮೊಟಕುಗೊಂಡಿದೆ.
ಸದ್ಯದ ಮಾಹಿತಿ ಪ್ರಕಾರ ಪಾಕಿಸ್ತಾನ ತಂಡ ಬುಧವಾರ ಮುಂಜಾನೆ ಲಾಹೋರ್ನಿಂದ ದೆಹಲಿಗೆ ಆಗಮಿಸಿ ಆ ಬಳಿಕ ಹೈದಾರಾಬಾದ್ಗೆ ಪ್ರಯಾಣಿಸಲಿದೆ ಎಂದು ವರದಿಯಾಗಿದೆ. ಏಷ್ಯಾಕಪ್ ನಡೆಯುತ್ತಿದ್ದ ವೇಳೆಯೇ ಪಾಕ್ ಕ್ರಿಕೆಟ್ ಮಂಡಳಿ ವೀಸಾ ಪಡೆಯಲು ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಕೆಲ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲವಾದ ಕಾರಣ ವಿಳಂಬವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ ICC World Cup 2023: ಭಾರತ ಬಿಟ್ಟು ವಿಶ್ವಕಪ್ ಗೆಲ್ಲುವ ತಂಡ ಹೆಸರಿಸಿದ ಗಂಭೀರ್
ಪಾಕ್ ತಂಡಕ್ಕೆ ಮಾತ್ರ ಸಮಸ್ಯೆ
ರಾಜತಾಂತ್ರಿಕವಾಗಿಯೂ ಭಾರತ ಮತ್ತು ಪಾಕ್ ಸಂಬಂಧ ಮೊದಲಿನಿಂದಲೇ ಸರಿಯಿಲ್ಲ. ಹೀಗಾಗಿ ಉಭಯ ದೇಶಗಳ ಪ್ರಯಾಣಕ್ಕೆ ವೀಸಾ ಪಡೆಯಲು ಕೂಡ ಹಲವು ನಿರ್ಭಂದ ಮತ್ತು ಅನೇಕ ಪ್ರಕ್ರಿಯೆಗಳು ಕೂಡ ಇವೆ. ಈಗಾಗಲೇ ಭಾರತದಲ್ಲಿ ವಿಶ್ವಕಪ್ ಆಡಲಿರುವ 10 ತಂಡಗಳ ಪೈಕಿ 9 ದೇಶಗಳಿಗೆ ವೀಸಾ ಲಭಿಸಿದೆ. ಆದರೆ ಪಾಕ್ ತಂಡಕ್ಕೆ ಮಾತ್ರ ವೀಸಾ ಸಿಗಬೇಕಿದೆ.
ಪ್ರೇಕ್ಷಕರಿಲ್ಲದೆ ಪಂದ್ಯ
ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಣ ಅಭ್ಯಾಸ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಇದಕ್ಕೆ ಕಾರಣ ಇಲ್ಲಿ ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಪ್ರವಾಸಿ ತಂಡಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಹೈದರಾಬಾದ್ ಪೊಲೀಸರು ಹಿಂದೇಟು ಹಾಕಿರುವುದು. ಈಗಾಗಲೇ ಈ ವಿಚಾರವನ್ನು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ಗೆ ಇಲ್ಲಿನ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಈ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈಗಾಗಲೇ ಪಾಕ್ ಈ ಮಹತ್ವದ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಬರ್ ಅಜಂ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಯುವ ವೇಗಿ ನಸೀಮ್ ಶಾ ಅವರು ಏಷ್ಯಾಕಪ್ನಲ್ಲಿ ಗಾಯಗೊಂಡ ಕಾರಣ ಈ ಟೂರ್ನಿಯಿಂದ ಹೊರಬಿದ್ದಾರೆ.
ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಶದಾಬ್ ಖಾನ್ (ಉಪ ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮ ಮಿರ್, ಮೊಹಮ್ಮದ್ ವಸೀಂ. ಮೀಸಲು ಆಟಗಾರು: ಅಬ್ರಾರ್ ಅಹ್ಮದ್, ಜಮಾನ್ ಖಾನ್ ಹಾಗೂ ಮೊಹಮ್ಮದ್ ಹ್ಯಾರಿಸ್.
ಕ್ರಿಕೆಟ್
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
Varanasi Stadium: ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ನಿರ್ಮಿಸಿರುವ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನು ಶಿವನಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗುತ್ತಿದ್ದು, ಸ್ಟೇಡಿಯಂನ ವೈಶಿಷ್ಟ್ಯ ಇಲ್ಲಿದೆ.
ವಾರಾಣಸಿ: ವಿಶ್ವನಾಥನ ಸನ್ನಿಧಿಯಾಗಿರುವ ವಾರಾಣಸಿಯಲ್ಲಿ ಭವ್ಯ ಹಾಗೂ ಅತ್ಯಾಧುನಿಕ ಸೌಲಭ್ಯಗಳುಳ್ಳ ಕ್ರಿಕೆಟ್ ಸ್ಟೇಡಿಯಂ (Varanasi Stadium) ನಿರ್ಮಿಸಲಾಗುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ದೇವರ ನಗರಿ ಎಂದೇ ಖ್ಯಾತಿಯಾಗಿರುವ ವಾರಾಣಸಿಯ ಕ್ರೀಡಾಂಗಣವೂ ಶಿವನಿಂದ ಸ್ಫೂರ್ತಿಗೊಂಡು ನಿರ್ಮಿಸಲಾಗುತ್ತಿದೆ. ಕ್ರೀಡಾಂಗಣದ ಪ್ರತಿಯೊಂದು ವಿಭಾಗದಲ್ಲೂ ಶಿವನ ಛಾಯೆ ಇದೆ. ಹಾಗಾಗಿ, ವಾರಾಣಸಿ ಕ್ರೀಡಾಂಗಣವು ವಿಶೇಷವಾಗಿದೆ. ಇದರ ಎಲ್ಲ ವೈಶಿಷ್ಟ್ಯಗಳು, ಶಿವನ ಛಾಯೆ ಸೇರಿ ಹಲವು ಮಾಹಿತಿ ಇಲ್ಲಿದೆ.
ತ್ರಿಶೂಲ, ಡಮರು, ಶಿವತಾಂಡವ
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣದ ವಿನ್ಯಾಸವು ಶಿವನಿಂದ ಸ್ಫೂರ್ತಿಗೊಂಡಿದೆ. ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಿಸಲಿರುವ ಮಾಧ್ಯಮ ಕೇಂದ್ರ (Media Centre) ಶಿವನ ಕೈಯಲ್ಲಿರುವ ಡಮರುಗದಂತೆ ಇರಲಿದೆ.
ಅಷ್ಟೇ ಅಲ್ಲ, ಸ್ಟೇಡಿಯಂ ಚಾವಣಿಯು ಚಂದ್ರನ ಆಕಾರದಲ್ಲಿ, ಪ್ರವೇಶ ದ್ವಾರವು ಬಿಲ್ವಪತ್ರೆ ಹಾಗೂ ಹೊನಲು ಬೆಳಕಿನ ಪಂದ್ಯದ ವೇಳೆ ಝಳಪಿಸುವ ಫ್ಲಡ್‌ಲೈಟ್ ತ್ರಿಶೂಲದ ಆಕಾರದಲ್ಲಿ ಇರಲಿವೆ. ಹಾಗಾಗಿ, ಇಡೀ ಸ್ಟೇಡಿಯಂ ಶಿವನಿಂದ ಸ್ಫೂರ್ತಿಗೊಂಡಂತೆ ನಿರ್ಮಾಣವಾಗಲಿದೆ.
ಸ್ಟೇಡಿಯಂನಲ್ಲಿ ಏನೆಲ್ಲ ಇರಲಿದೆ?
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣವಾಗಿದೆ. ಇದರಲ್ಲಿ 30 ಸಾವಿರ ಪ್ರೇಕ್ಷಕರು ಕುಳಿತು ಪಂದ್ಯವನ್ನು ವೀಕ್ಷಿಸಬಹುದಾಗಿದೆ. ರಾಜಾತಲಾಬ್ ಪ್ರದೇಶದ ರಿಂಗ್ ರೋಡ್ ಬಳಿ ಇದನ್ನು ನಿರ್ಮಿಸಲಾಗಿದ್ದು, ಏಳು ಪಿಚ್‌ಗಳು ಇರಲಿವೆ.
ಪಂದ್ಯದ ವೇಳೆ ಮಳೆ ಬಂದರೆ ಕ್ಷಿಪ್ರವಾಗಿ ನೀರು ಹೀರಿಕೊಳ್ಳುವ, ಅತ್ಯಾಧುನಿಕ ಸೌಕರ್ಯಗಳುಳ್ಳ ಡ್ರೆಸ್ಸಿಂಗ್ ರೂಮ್‌ಗಳು, ಮೂರು ಪ್ರಾಕ್ಟೀಸ್ ಪಿಚ್‌ಗಳು ಸೇರಿ ಹಲವು ಸೌಲಭ್ಯಗಳಿವೆ. 2025ರ ಡಿಸೆಂಬರ್‌ನಲ್ಲಿ ಕ್ರೀಡಾಂಗಣಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ICC World Cup: ಶೀಘ್ರದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್ ಸ್ಪರ್ಶ
ಕಾಶಿ ವಿಶ್ವನಾಥನ ಊರಿನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂಗೆ ಸುಮಾರು 451 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು 121 ಕೋಟಿ ರೂ. ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 330 ಕೋಟಿ ರೂ. ವಿನಿಯೋಗಿಸಲಿದೆ.
-
ಪ್ರಮುಖ ಸುದ್ದಿ21 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಗ್ಯಾಜೆಟ್ಸ್24 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ23 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕರ್ನಾಟಕ17 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ20 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ಕ್ರೈಂ22 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ20 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ