ದುಬೈ : ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ಭಾನುವಾರ ನಡೆಯಲಿದ್ದು, ಇತ್ತಂಡಗಳ ಆಟಗಾರರು ದುಬೈನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಚ್ಚರಿಯೆಂದರೆ ಪಾಕಿಸ್ತಾನದ ವೇಗದ ಬೌಲರ್ ಶಹೀನ್ ಅಫ್ರಿದಿ ಈ ಟೂರ್ನಿಗೆ ಅಲಭ್ಯರಾಗಿದ್ದರೂ ಪಾಕಿಸ್ತಾನ ತಂಡದ ಜತೆ ದುಬೈಗೆ ಬಂದಿದ್ದಾರೆ. ಅಂತೆಯೇ ಗುರುವಾರ ಅಭ್ಯಾಸಕ್ಕಾಗಿ ಹೊರಟಿದ್ದ ಭಾರತ ತಂಡದ ಆಟಗಾರರಿಗೆ ಶಹೀನ್ ಅಫ್ರಿದಿ ಎದುರು ಸಿಕ್ಕಿದ್ದಾರೆ. ಈ ವೇಳೆ ಅವರೇನು ಮಾಡಿದರು? ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅದರ ವಿಡಿಯೊವನ್ನು ತನ್ನ ಯೂಟ್ಯೂಬ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದೆ.
ಕಾಲು ನೋವಿನ ಸಮಸ್ಯೆಗೆ ಒಳಗಾಗಿರುವ ಶಹೀನ್ ಪ್ರಾಕ್ಟೀಸ್ ಮೈದಾನದ ಬದಿಯಲ್ಲಿ ಕುಳಿತಿದ್ದರು. ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಕುಳಿತಿದ್ದ ಅವರನ್ನು ಭಾರತ ತಂಡದ ಸ್ಪಿನ್ನರ್ ಯಜ್ವೇಂದ್ರ ಚಹಲ್ ಕರೆದಿದ್ದಾರೆ. ತಕ್ಷಣ ಎದ್ದ ಶಹೀನ್ ಅವರ ಬಳಿಗೆ ಹೋಗಿದ್ದು, ಇಬ್ಬರೂ ಪರಸ್ಪರ ಕುಶಲೋಪರ ವಿಚಾರಿಸಿದ್ದಾರೆ. ತಮಾಷೆ ಮಾಡಿ ನಕ್ಕಿದ್ದಾರೆ. ನಂತರ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಎದುರಾದರು. ಅವರು ಕರೆದು ಹಸ್ತಲಾಘವ ಮಾಡಿದರಲ್ಲದೆ, ಕಾಲಿನ ಸಮಸ್ಯೆ ಬಗ್ಗೆ ವಿಚಾರಿಸಿ ಗುಡ್ ಲಕ್ ಹೇಳಿದರು.’
ನಂತರ ಎದುರಾದವರು ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್, ಅವರಿಬ್ಬರೂ ತಮಾಷೆ ಮಾಡಲು ಆರಂಭಿಸಿದರು. ಈ ವೇಳೆ ಶಹೀನ್ ನಾನೂ ಬ್ಯಾಟ್ಸ್‌ಮನ್ ಆಗಿ ಒಂದು ಕೈಯಲ್ಲಿ ಸಿಕ್ಸರ್ ಹೊಡೆಯಬೇಕು ಎಂಬ ಚಿಂತನೆ ಮಾಡುತ್ತಿದ್ದೇನೆ ಎಂದು ಹೇಳಿದರು. ಮುಂದಕ್ಕೆ ಸಾಗಿದ ಶಹೀನ್‌ಗೆ ಕನ್ನಡಿಗ ಕೆ. ಎಲ್ ರಾಹುಲ್ ಎದುರಾದರು. ಅವರೂ ಕಾಲಿನ ಗಾಯದ ಬಗ್ಗೆ ವಿಚಾರಿದ್ದಾರೆ.
ವಿಡಿಯದಲ್ಲಿ ಭಾರತದ ಕೋಚಿಂಗ್ ಸಿಬ್ಬಂದಿ ಜತೆ ಪಾಕಿಸ್ತಾನದ ತರಬೇತುದಾದರು ಮಾತನಾಡುವ ದೃಶ್ಯಗಳೂ ಇವೆ. ಅಂತೆಯೇ ಶ್ರೀಲಂಕಾ ಕ್ರಿಕೆಟಿಗರ ಜತೆಗಿನ ಸಂಭಾಷಣೆಯನ್ನೂ ಸೇರಿಸಲಾಗಿದೆ.
ಇದನ್ನೂ ಓದಿ | Asia Cup 2022 | ಶಹೀನ್ ಶಾ ಅಫ್ರಿದಿ ಜಾಗಕ್ಕೆ ವಿವಾದಿತ ಬೌಲರ್‌ಗೆ ಸ್ಥಾನ ಕೊಟ್ಟ ಪಾಕಿಸ್ತಾನ ತಂಡ