Site icon Vistara News

Fact-check: ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿಲ್ಲ; ಲುಲೂ ಗ್ರೂಪ್ ಸ್ಪಷ್ಟನೆ

Pakistan Flag Placed Above Indian Tricolour In Kerala's Lulu Mall

ಕೊಚ್ಚಿ: ಇಲ್ಲಿನ ಲುಲೂ ಮಹಲ್​ನಲ್ಲಿ ಭಾರತದ ಧ್ವಜವನ್ನು ಕಡೆಗಣಿಸಿ ಪಾಕಿಸ್ತಾನ ಧ್ವಜವನ್ನು ದೊಡ್ಡ ಗಾತ್ರದಲ್ಲಿ ಹಾಕಲಾಗಿದೆ ಎಂಬ ಸುದ್ದಿ ಎಲ್ಲಡೆ ವೈರಲ್​ ಆಗಿತ್ತು. ಅಲ್ಲದೆ ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಇದೀಗ ಲುಲೂ ಮಹಲ್ ಅಧಿಕೃತ ಪ್ರಕಟಣೆ ಹೊರಡಿಸಿ ಇದು ಸುಳ್ಳು ಸುದ್ದಿ(Fact-check) ಎಂದು ಹೇಳಿದೆ.

ಕೇರಳದ ಕೊಚ್ಚಿಯಲ್ಲಿರುವ ಲುಲೂ ಶಾಪಿಂಗ್ ಮಾಲ್​ನಲ್ಲಿ(lulu mall kochi) ವಿಶ್ವಕಪ್ ಟೂರ್ನಿ ಪ್ರಯುಕ್ತ, ಈ ಟೂರ್ನಿಯಲ್ಲಿ ಆಡುತ್ತಿರುವ 10 ದೇಶಗಳ ರಾಷ್ಟ್ರ ಧ್ಜಜವನ್ನು ಹಾಕಲಾಗಿದೆ. ಆದರೆ ನಮ್ಮ ದೇಶದ ತಿರಂಗಾವನ್ನು ಕಡೆಗಣಿಸಿ ಬದ್ಧ ವೈರಿಗಳಾದ, ಉಗ್ರರ ತಾಣವಾದ ಪಾಕಿಸ್ತಾನ ದೇಶದ ಧ್ಜಜಕ್ಕೆ ಹೆಚ್ಚಿನ ಮಹತ್ವದ ನೀಡಲಾಗಿದೆ ಎಂಬ ವಿಚಾರದಲ್ಲಿ ಭಾರಿ ವಿವಾದ ಉಂಟಾಗಿತ್ತು. ಇದಕ್ಕೆ ಸಂಬಂಧಿಸಿದ ಕೆಲ ಫೋಟೊಗಳು ಕೂಡ ವೈರಲ್​ ಆಗಿತ್ತು.

ಲುಲೂ ನೀಡಿದ ಸ್ಪಷ್ಟನೆ ಏನು?

ಲಲೂ ಗ್ರೂಪ್ ತನ್ನ ಹೇಳಿಕೆಯಲ್ಲಿ “ಸಾಮಾಜಿಕ ಮಾಧ್ಯಮಗಳಲ್ಲಿ ಭಾರತದ ಧ್ವಜ ಚಿಕ್ಕದಾಗಿದೆ ಮತ್ತು ಪಾಕಿಸ್ತಾನದ ಧ್ವಜ ದೊಡ್ಡದಾಗಿದೆ ಎಂದು ಕೆಲವು ತಪ್ಪು ಮಾಹಿತಿಗಳು ಹರಡುತ್ತಿವೆ. ಪಾಕಿಸ್ತಾನದ ಧ್ವಜಕ್ಕೆ ಗೌರವ ಸೂಚಿಸಲಾಗಿದೆ ಎನ್ನುವುದು ಸಂಪೂರ್ಣ ಸುಳ್ಳು. ಕೆಲವರು ಇದನ್ನು ಉದ್ದೇಶ ಪೂರ್ವಕವಾಗಿಯೇ ಸಮಾಜದ ಶಾಂತಿ ಕದಡುವಂತೆ ಮಾಡಲು ಈ ರೀತಿ ಮಾಡಿದ್ದಾರೆ. ಪಾಕ್​ ಧ್ವಜವನ್ನು ಝೂಮ್​ ಮಾಡಿ ದೊಡ್ಡ ಗಾತ್ರದಲ್ಲಿಒ ಕಾಣುವಂತೆ ಮಾಡಿದ್ದಾರೆ. ಇಲ್ಲಿ ಹಾಕಲಾಗಿರುವ ಎಲ್ಲ 10 ದೇಶದ ಧ್ವಜ ಒಂದೇ ಗಾತ್ರದಿಂದ ಕೋಡಿದೆ. ತಪ್ಪು ಮಾಹಿತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಕ್ಕು ನಮಗಿದೆ” ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಇನ್ನು ಈ ಸುದ್ದಿಯನ್ನು ಪ್ರಚಾರ ಮಾಡಬೇಡಿ” ಎಂದು ಹೇಳಿದ್ದಾರೆ.

“ಮಾಲ್​ನ ಮೇಲಿನ ಮಹಡಿಯಿಂದ ಅಥವಾ ಬದಿಯಿಂದ ಧ್ವಜಗಳ ಚಿತ್ರಗಳನ್ನು ತೆಗೆದಾಗ, ಆ ಬದಿಯಲ್ಲಿರುವ ಧ್ವಜಗಳು ದೊಡ್ಡದಾಗಿ ಕಾಣುತ್ತವೆ. ಆದರೆ ಕೆಳಗಿನಿಂದ ಚಿತ್ರಗಳನ್ನು ತೆಗೆದಾಗ, ಎಲ್ಲ ಧ್ವಜಗಳು ಒಂದೇ ಗಾತ್ರದಲ್ಲಿ ಕಾಣುತ್ತದೆ” ಎಂದು ಲುಲೂ ಗ್ರೂಪ್​ ತಿಳಿಸಿದೆ.

ಇದನ್ನೂ ಓದಿ ತಿರಂಗಾಕ್ಕಿಂತ ಪಾಕ್​ ಧ್ವಜವೇ ದೊಡ್ಡದು; ಕೇರಳ ಮಾಲ್​ನಲ್ಲಿ ಶತ್ರುಗಳಿಗೆ ಬೆಂಬಲ

ನೆಟ್ಟಿಗರ ಆಕ್ರೋಶ

“ಪಾಕಿಸ್ತಾನ ಧ್ವಜವನ್ನು ತಿರಂಗಾಕ್ಕಿಂತ ದೊಡ್ಡ ಗಾತ್ರದಲ್ಲಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಇದನ್ನು ನಮ್ಮ ರಾಷ್ಟ್ರ ಧ್ವಜಕ್ಕಿಂತ ಮೇಲೆ ನೇತು ಹಾಕಲಾಗಿದೆ. ಈ ಮೂಲಕ ರಾಷ್ಟ್ರ ಧ್ಜಜಕ್ಕೆ ಅಗೌರವ ಸೂಚಿಸಿ ಉಗ್ರರ ದೇಶ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಲಾಗಿದೆ” ಎಂದು ನೆಟ್ಟಿಗರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ಎಲ್ಲಡೆ ಶೇರ್​ ಆಗಿ ಚರ್ಚೆಗೆ ಕಾರಣವಾಗಿತ್ತು.

ಪಾಕಿಸ್ತಾನ ಧ್ವಜದ ಫೋಟೊ ವೈರಲ್​ ಆಗುತ್ತಿದ್ದಂತೆ ದೇಶಾಭಿಮಾನಿಗಳು ಈ ಕುರಿತು ಆಕ್ರೋಶ ಹೊರಹಾಕಿದ್ದಾರೆ, ಇದೊಂದು ಕೇರಳ ಸ್ಟೋರಿಯ 2ನೇ ಭಾಗ. ದೇಶದ ಧ್ವಜ ನಿಯಮ ಉಲ್ಲಂಘಿಸಿದ ಈ ಮಾಲ್ ಭಾರತದಲ್ಲಿ ಬ್ಯಾನ್​ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದರು. ಶತ್ರು ದೇಶದ ಧ್ವಜವನ್ನು ದೊಡ್ಡದಾಗಿ ಹಾಕಿ ಯಾರನ್ನೂ ಒಲೈಕೆ ಮಾಡುತ್ತಿದ್ದಾರೆ. ಐಸಿಸ್‌ ಉಗ್ರ ತಾಣವಾದ ಕೇರಳದ ಕರಾಳ ಮುಖ ಈ ಘಟನೆಯಿಂದ ಮತ್ತೊಮ್ಮೆ ಬಯಲಾಗಿದೆ. ಇಷ್ಟು ದೊಡ್ಡ ಧ್ವಜ ಹಾಕಿ ನಿಯಮ ಉಲ್ಲಂಘನೆ ಮಾಡಿದರೂ ಇಲ್ಲಿನ ಸರ್ಕಾರ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲವು ನಿಟ್ಟಿಗರು ಪ್ರಶ್ನೆ ಮಾಡಿದ್ದರು. ಈ ವಿವಾದ ದೊಡ್ಡ ಮಟ್ಟದಲ್ಲಿ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಲುಲೂ ಮಹಲ್​ ಇದರ ಅಸಲಿ ಕತೆಯನ್ನು ಜನರ ಮುಂದಿಟ್ಟಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಅಕ್ಟೋಬರ್​ 14ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ನೋಡಲು ಉಭಯ ದೇಶಗಳ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

Exit mobile version