ದೋಹಾ : ಕತಾರ್ಗೆ ವಿಶ್ವ ಕಪ್(FIFA World Cup) ಆತಿಥ್ಯ ನೀಡಿದಾಗಲೇ ಪಾಶ್ಚಿಮಾತ್ಯ ದೇಶಗಳು ವಿರೋಧ ವ್ಯಕ್ತಪಡಿಸಿದ್ದವು. ಅದಕ್ಕೆ ಕಾರಣ ಅಲ್ಲಿನ ಕಾನೂನು. ಫುಟ್ಬಾಲ್ ವಿಶ್ವ ಕಪ್ ಕ್ರೀಡಾ ಲೋಕದ ದೊಡ್ಡ ಜಾತ್ರೆಯಾಗಿರುವ ಕಾರಣ ಅಲ್ಲಿಗೆ ಬರುವ ಅಭಿಮಾನಿಗಳು ಚಿತ್ರ, ವಿಚಿತ್ರವಾಗಿ ವರ್ತಿಸುತ್ತಾರೆ. ಕುಡಿದು, ಕುಣಿದು ಕುಪ್ಪಳಿಸುತ್ತಾರೆ. ಖುಷಿ ಹೆಚ್ಚಾದಾಗ ಬಟ್ಟೆ ಬಿಚ್ಚಿ ನರ್ತಿಸುತ್ತಾರೆ. ಆದರೆ, ಕತಾರ್ನ ಕಾನೂನು ಇದ್ಯಾವುದಕ್ಕೂ ಅವಕಾಶ ಕೊಡುವುದಿಲ್ಲ. ಮದ್ಯ ಮತ್ತು ಮೋಜಿಗೆ ಸಂಪೂರ್ಣ ನಿರಾಕರಣೆ. ಇದನ್ನು ಆರಂಭದಿಂದ ಕೊನೆಯವರೆಗೂ ಪಾಲಿಸಿಕೊಂಡು ಬರಲಾಗಿದೆ.
ಇಷ್ಟೆಲ್ಲ ಗೊತ್ತಿದ್ದರೂ ಫೈನಲ್ ಪಂದ್ಯದ ವೇಳೆ ಅರ್ಜೆಂಟೀನಾ ತಂಡದ ಅಭಿಮಾನಿಯೊಬ್ಬಳು ತಾನಿದ್ದ ಸ್ಥಳದ ಕಠಿಣ ಕಾನೂನನ್ನೇ ಮರೆತು ಟಾಪ್ ಲೆಸ್ ಆಗಿ ಕುಣಿದಿದ್ದು, ಅವರಿಗೆ ಶಿಕ್ಷೆ ಕಾದಿದೆ. ಅವರು ಟಿಶರ್ಟ್ ತೆಗೆದು ಕುಣಿಯುತ್ತಿರುವ ವಿಡಿಯೊ ಪಂದ್ಯದ ನೇರ ಪ್ರಸಾರದ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದೆ. ಅದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.
ಅರ್ಜೆಂಟೀನಾ ತಂಡ ಕಪ್ ಗೆಲ್ಲುತ್ತಿದ್ದಂತೆ ಆ ತಂಡ ಅಭಿಮಾನಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸಿದ್ದರು. ಈ ಗುಂಪೊಂದರ ನಡುವೆ ಇದ್ದ ಮಹಿಳೆ ಮೇಲಿನ ಬಟ್ಟೆಯನ್ನು ತೆಗೆದು ಕುಣಿದಿದ್ದಾಳೆ. ತಕ್ಷಣ ವಿಡಿಯೊ ಕ್ಯಾಮೆರಾ ಬೇರೆ ಕಡೆಗೆ ತಿರುಗುತ್ತದೆ.
ಏನು ಶಿಕ್ಷೆ?
ನಮ್ಮ ದೇಶದಲ್ಲಿ ಸಲಿಂಗಿಗಳಿಗೆ ಅವಕಾಶ ಇಲ್ಲ. ಹೆಣ್ಣು ಮಕ್ಕಳು ತಮ್ಮ ಎದೆ ಹಾಗೂ ಭುಜವನ್ನು ಯಾವ ಕಾರಣಕ್ಕೂ ತೋರಿಸಬಾರದು ಎಂದು ವಿಶ್ವ ಕಪ್ ನೋಡಲು ಬರುವ ಅಭಿಮಾನಿಗಳಿಗೆ ಕತಾರ್ ಹೇಳಿತ್ತು. ಹಾಗೇನಾದರೂ ತೋರಿಸಿದರೆ ಜೈಲು ಶಿಕ್ಷೆ ಗ್ಯಾರಂಟಿ ಎಂದೂ ಎಚ್ಚರಿಸಿತ್ತು. ಅಂತೆಯೇ ಇದೀಗ ತೆರೆದ ಎದೆಯನ್ನು ಎಲ್ಲರಿಗೂ ತೋರಿಸಿದ ಅರ್ಜೆಂಟೀನಾದ ಮಹಿಳೆಗೆ ಜೈಲು ಶಿಕ್ಷೆ ಹಾಗೂ ದಂಡದ ಶಿಕ್ಷೆ ನಿಶ್ಚಿತ. ಅದರ ಪ್ರಮಾಣ ಎಷ್ಟು ಎಂಬುದು ಗೊತ್ತಿಲ್ಲ.
ಪಾಶ್ಚಿಮಾತ್ಯ ದೇಶಗಳಲ್ಲಿ ಫುಟ್ಬಾಲ್ ಅಭಿಮಾನಿಗಳು ಶರ್ಟ್ ಬಿಚ್ಚಿ ಕುಣಿಯವುದು ಹೊಸದೇನಲ್ಲ. ಖುಷಿ ಹೆಚ್ಚಾದಾಗ ವಸ್ತ್ರಗಳ ಪರಿವೇ ಇಲ್ಲದೆ ಕುಣಿಯುತ್ತಾರೆ. ಅಲ್ಲಿ ಅದು ಸಹ್ಯ ಸಂಗತಿ. ಆದರೆ ಕಟ್ಟರ್ ಇಸ್ಲಾಮಿಕ್ ದೇಶವಾಗಿರುವ ಕತಾರ್ಗೆ ಅದು ಅಸಹ್ಯ.
ಇದನ್ನೂ ಓದಿ | FIFA World Cup | ಇನ್ನೂ ಆಡುವೆ ಎಂದ ಲಿಯೋನೆಲ್ ಮೆಸ್ಸಿ; ನಿರ್ಧಾರ ಬದಲಿಸಲು ಕಾರಣವೇನು?