ದೋಹಾ : ಅರ್ಜೆಂಟೀನಾ ತಂಡ ವಿಶ್ವ ಕಪ್ ಗೆಲ್ಲುವುದಕ್ಕೆ ಲಿಯೋನೆಲ್ ಮೆಸ್ಸಿ ಎಷ್ಟು ಕಾರಣವೊ ಗೋಪ್ಕೀಪರ್ ಎಮಿಲಿಯೊ ಮಾರ್ಟಿನೆಜ್ ಕೂಡ ಅಷ್ಟೇ ನೆರವು ಕೊಟ್ಟಿದ್ದಾರೆ. ಪಂದ್ಯದ ಪೂರ್ಣ ಅವಧಿಯಲ್ಲಿ ಇತ್ತಂಡಗಳು 3-3 ಗೋಲ್ ಬಾರಿಸಿದ ಕಾರಣ ಪೆನಾಲ್ಟಿ ಮೊರೆ ಹೋಗಲಾಯಿತು. ಈ ವೇಳೆ ಫ್ರಾನ್ಸ್ ತಂಡ ಬಾರಿಸಿದ್ದ ಮೊದಲೆರಡು ಪೆನಾಲ್ಟಿಯನ್ನು ಮಾರ್ಟಿನೆಜ್ ವಿಫಲಗೊಳಿಸಿದ್ದರು. ಹೀಗಾಗಿ 4-2 ಗೋಲ್ಗಳ ಅಂತರದಿಂದ ವಿಜಯ ಸಾಧಿಸಿತ್ತು.
ಫೈನಲ್ನಲ್ಲಿ ನೀಡಿದ ಉತ್ತಮ ಪ್ರದರ್ಶನ ಸೇರಿದಂತೆ ಟೂರ್ನಿಯುದ್ದಕ್ಕೂ ಅವರು ತೋರಿಸಿದ ಪ್ರದರ್ಶನಕ್ಕೆ ಗೋಲ್ಡನ್ ಗ್ಲವ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಆದರೆ, ಪ್ರಶಸ್ತಿ ಪಡೆದ ಅವರು ಸುಮ್ಮನಿರದೇ ಅದನ್ನು ತಮ್ಮ ತೊಡೆ ಸಂದಿನ ಮಧ್ಯದಲ್ಲಿ ಇಟ್ಟುಕೊಂಡು ವಿಚಿತ್ರ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಅದನ್ನು ನೋಡಿದ ಕಾಮೆಂಟೇಟರ್ಗಳು ಆ ರೀತಿ ಮಾಡಬೇ, ಆ ರೀತಿ ಮಾಡಬೇಡ ಎಂದು ಹೇಳುತ್ತಾರೆ. ಬಳಿಕ ಅವರು ಅದನ್ನು ಸರಿಪಡಿಸಿಕೊಳ್ಳುತ್ತಾರೆ.
ಪಂದ್ಯ ಗೆದ್ದ ಸಂಭ್ರಮದಲ್ಲಿ ಅರ್ಜೆಂಟೀನಾ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ. ಕ್ಲಾಕ್ ರೂಮ್ನಲ್ಲಿ ಬಿಯರ್ ಕುಡಿದುಕೊಂಡು ಸಂಭ್ರಮಿಸಿದ್ದಾರೆ. ಅದರ ವಿಡಿಯೊ ಕೂಡ ವೈರಲ್ ಆಗಿದೆ.
ಇದನ್ನೂ ಓದಿ | FIFA World Cup | ಅರ್ಜೆಂಟೀನಾಗೆ ಇದು ಎಷ್ಟನೇ ವಿಶ್ವಕಪ್; ಗರಿಷ್ಠ ಪ್ರಶಸ್ತಿ ಸಿಕ್ಕಿದ್ದು ಯಾವ ದೇಶಕ್ಕೆ?