Site icon Vistara News

MS Dhoni: ಚಾಣಕ್ಯನ 3ಡಿ ಇಮೇಜ್ ಅಭಿವೃದ್ಧಿಪಡಿಸಲು ಹೋಗಿ ಧೋನಿಯ ಚಿತ್ರ ಬಿಡಿಸಿದ ವಿಜ್ಞಾನಿಗಳು!

MS Dhoni

ಪಾಟ್ನಾ: ಇಂದಿನ ತಂತ್ರಜ್ಞಾನ ಯುಗದಲ್ಲಿ ಯಾವುದೂ ಕೂಡ ಅಸಾಧ್ಯವೆಂಬ ಮಾತಿಲ್ಲ. ತಂತ್ರಜ್ಞಾನ ಬಳಿಸಿಕೊಂಡು ಏನು ಬೇಕಾದರೂ ಮಾಡಬಹುದು ಇಂತಹದ್ದೇ ಸಾಹಸವೊಂದಕ್ಕೆ ಕೈ ಹಾಕಿ ಬಿಹಾರದ ಮಗಧಾ ಡಿಎಸ್ ವಿಶ್ವವಿದ್ಯಾಲಯದ(Magadha DS University) ವಿಜ್ಞಾನಿಗಳು ನಗೆಪಾಟಲಿಗೀಡಾಗಿದ್ದಾರೆ.

ವಿಶ್ವ ಶ್ರೇಷ್ಠ ತತ್ವಜ್ಞಾನಿ ಚಾಣಕ್ಯನ ಚಿತ್ರವನ್ನು 3ಡಿ ಇಫೆಕ್ಟ್​ ಮೂಲಕ ಅಭಿವೃದ್ಧಿಪಡಿಸಿ ಇದೀಗ ಎಲ್ಲಡೆ ನಗೆಪಾಟಲಿಗೀಡಾಗಿದ್ದಾರೆ. ಹೌದು ಇವರು ಮಾಡಿರುವ ಚಾಣಕ್ಯನ ಚಿತ್ರ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯ(MS Dhoni) ಚಹರೆಯನ್ನೇ ಹೊಲುತ್ತಿದೆ. ಹೀಗಾಗಿ ಈ ಫೋಟೊವನ್ನು ನೆಟ್ಟಿಗರು ವೈರಲ್​ ಮಾಡಿದ್ದಾರೆ.

ಧೋನಿ ಅವರು 2011ರ ಏಕದಿನ ವಿಶ್ವಕಪ್​ ಗೆದ್ದ ಬಳಿಕ ತಲೆ ಕೂದಲು ತೆಗಿಸಿಕೊಂಡಿದ್ದರು. ಇದೇ ವೇಳೆ ಟ್ರೋಫಿಯೊಂದಿಗೆ ಫೋಟೊವೊಂದನ್ನು ತೆಗಿಸಿಕೊಂಡಿದ್ದರು. ಈ ಫೋಟೊ ಮತ್ತು ಡಿಎಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬಿಡಿಸಿದ 3ಡಿ ಫೋಟೋ ಕೂಡ ಒಂದೇ ರೀತಿ ಕಾಣುತ್ತಿದೆ. ಧೋನಿ ಮತ್ತು ಚಾಣಕ್ಯನ 3ಡಿಯ ಫೋಟೊವನ್ನು ನೆಟ್ಟಿಗರು ವೈರಲ್​ ಮಾಡಿದ್ದು, ವಿಜ್ಞಾನಿಗಳು ಕನ್ಫ್ಯೂಸ್ ಆಗಿದ್ದಾರೆ, ನೀವು ಅಭಿವೃದ್ಧಿಪಿಡಿಸಿದ್ದು, ಕ್ರಿಕೆಟ್ ಚಾಣಕ್ಯ, ತತ್ವಜ್ಞಾನಿ ಧೋನಿ ಎಂಬ ಚಾಣಕ್ಯನದ್ದು ಎಂದಿದ್ದಾರೆ.

ಇದನ್ನೂ ಓದಿ MS Dhoni: ಧೋನಿಗೆ ವಿಷ್ಣುವಿನ ಮೂರ್ತಿ ಉಡುಗೊರೆ ನೀಡಿದ ಅಭಿಮಾನಿ


ವಿದಾಯದ ಐಪಿಎಲ್(IPL 2024)​ ಟೂರ್ನಿ ಆಡುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್(chennai super kings)​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿಯ(MS Dhoni) ಆಟವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಧೋನಿ ಅವರು ನೆಟ್ಸ್​ನಲ್ಲಿ(training session for CSK) ಭರ್ಜರಿ ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ವಿಂಟೇಜ್ ಶೈಲಿಯ ಉದ್ದನೆಯ ಕೂದಲಿನೊಂದಿಗೆ ಧೋನಿ ಬ್ಯಾಟಿಂಗ್​ ನಡೆಸುತ್ತಿರುವ ಫೋಟೊ ವೈರಲ್​ ಆಗಿದೆ.

ಧೋನಿ ಅವರು ಕೇವಲ ದೊಡ್ಡ ಹೊಡೆತಗಳನ್ನು ಮಾತ್ರ ಅಭ್ಯಾಸ ನಡೆಸಿದ್ದಾರೆ. ಈ ಬಾರಿ 7ನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ. ಇದೇ ಕಾರಣಕ್ಕೆ ಅವರು ದೊಡ್ಡ ಹೊಡೆತಗಳನ್ನು ಅಭ್ಯಾಸ ಮಾಡಿದಂತಿದೆ.

ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ(IPL 2024) ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

Exit mobile version