Site icon Vistara News

ಧೋನಿ ಮಾಡಿದ್ರೆ ತಪ್ಪು, ರಿಜ್ವಾನ್​ ಉಗ್ರರಿಗೆ ಬೆಂಬಲ ಕೊಟ್ರೆ ಸರಿ; ಐಸಿಸಿ ವಿರುದ್ಧ ನೆಟ್ಟಿಗರು ಗರಂ

Latest Kannada News

ಬೆಂಗಳೂರು: ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ (ICC World Cup 2023) ಪಾಕ್ ತಂಡ ವಿಕೆಟ್​ಕೀಪರ್ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್ ಶತಕ ಬಾರಿಸಿ ಮಿಂಚಿದ್ದರು. ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಾಖಲೆಯ 6 ವಿಕೆಟ್​ ಜಯ ಸಾಧಿಸಿತ್ತು. ಈ ವಿಜಯವನ್ನು ಶತಕ ವೀರ ಮೊಹಮ್ಮದ್ ರಿಜ್ವಾನ್ ಅವರು ಇಸ್ರೇಲ್​ ದಾಳಿಗೊಳಗಾಗಿರುವ ಗಾಜಾದ ಜನರಿಗೆ ಅರ್ಪಿಸಿದ್ದರು. ಒಂದು ಕಡೆ ಇದು ಮಾನವೀಯತೆಯ ಸಂಗತಿ ಎಂದು ಅನಿಸಿದರೂ ಎರಡು ದೇಶಗಳ ನಡುವಿನ ರಾಜಕೀಯ ಗಲಾಟೆ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ವಿಶ್ವ ಕಪ್​ ಟೂರ್ನಿಯ ನಡುವೆ ವ್ಯಕ್ತಪಡಿಸಿರುವುದು ವಿವಾದಕ್ಕೆ ಒಳಗಾಗಿದೆ. ಕ್ರಿಕೆಟ್​ ಅಭಿಮಾನಿಗಳು ಅವರ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಗಳನ್ನೂ ಓದಿ
ICC World Cup 2023 : ಕಾಂಗರೂ- ಹರಿಣಗಳ ನಡುವಿನ ಹಣಾಹಣಿಯಲ್ಲಿ ಗೆಲುವು ಯಾರಿಗೆ?
Hardik Pandya : ಸ್ಟೇಡಿಯಮ್​ನಲ್ಲೇ ಕೇಕ್ ಕತ್ತರಿಸಿ ಬರ್ತ್​ಡೇ ಆಚರಿಸಿಕೊಂಡ ಪಾಂಡ್ಯ
ind vs pak : ಇಂಡೋ-ಪಾಕ್​ ಮ್ಯಾಚ್​ಗೆ ಮೊದಲು ಅದ್ಧೂರಿ ಕಾರ್ಯಕ್ರಮ

ಪಂದ್ಯದ ಗೆಲುವನ್ನು ಗಾಜಾದಲ್ಲಿರುವ ತನ್ನ ಸಹೋದರ ಸಹೋದರಿಯರಿಗಾಗಿ ಅರ್ಪಿಸುತ್ತೇನೆ ಎಂಬುದಾಗಿ ರಿಜ್ವಾನ್ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ರಾಜಕೀಯ ಹೇಳಿಕೆ ನೀಡಿದ್ದಕ್ಕಾಗಿ ಪಾಕಿಸ್ತಾನದ ಬ್ಯಾಟರ್​​ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನ್ನು ಒತ್ತಾಯಿಸಿದ್ದಾರೆ.

ಇದೇ ವೇಳೆ 2019ರಲ್ಲಿ ವಿಕೆಟ್​ಕೀಪಿಂಗ್ ಗ್ಲವ್ಸ್​ ಮೇಲೆ ಭಾರತೀಯ ಸೇನೆಯ ಲಾಂಛನ ತೆಗೆದು ಹಾಕಿಸಿದ್ದ ಕ್ರಮವನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ಧೋನಿ ತಮ್ಮ ದೇಶದ ಸೇನೆಯ ಚಿಹ್ನೆಯನ್ನು ತಮ್ಮ ಗ್ಲವ್ಸ್​ನಲ್ಲಿ ಬಳಸುವುದು ತಪ್ಪು ಎಂದಾದರೆ ರಿಜ್ವಾನ್ ರಾಜಕೀಯ ಹೇಳಿಕೆ ನೀಡಿದ್ದೂ ಸರಿಯಲ್ಲ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಶೇಷವೆಂದರೆ, ಐಸಿಸಿ ಕಾರ್ಯಕ್ರಮಗಳಲ್ಲಿ ಕ್ರಿಕೆಟಿಗರು ರಾಜಕೀಯ ಮತ್ತು ಧಾರ್ಮಿಕ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಐಸಿಸಿ ಕಟ್ಟುನಿಟ್ಟಾಗಿ ಹೇಳಿದೆ. ಆದಾಗ್ಯೂ, ರಿಜ್ವಾನ್ ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮೈದಾನದ ಹೊರಗಿನ ವಿಷಯದ ಕುರಿತು ಕಾಮೆಂಟ್​​ಗಳನ್ನು ಮಾಡಿದ್ದಾರೆ. ಅವರು ಪಂದ್ಯದ ಸಮಯದಲ್ಲಿ ಯಾವುದೇ ಹೇಳಿಕೆ ನೀಡಿಲ್ಲವಾಗಿರುವ ಕಾರಣ 31 ವರ್ಷದ ಆಟಗಾರನ ವಿರುದ್ಧ ಐಸಿಸಿ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇಲ್ಲ .

ಮುಹಮ್ಮದ್ ರಿಜ್ವಾನ್ ಅಜೇಯ 131 ರನ್ ಬಾರಿಸುವ ಮೂಲಕ ಪಾಕಿಸ್ತಾನ ತಂಡ ವಿಶ್ವಕಪ್ ನಲ್ಲಿ 346 ರನ್ ಗಳ ದಾಖಲೆಯನ್ನು ಬೆನ್ನಟ್ಟಲು ನೆರವಾದರು. ಅಕ್ಟೋಬರ್ 14ರಂದು ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡ ಸೆಣಸಲಿದೆ.

ಗಾಯದ ನಡುವೆ ಆಡಿದ್ದ ರಿಜ್ವಾನ್​

ಈ ಪಂದ್ಯದಲ್ಲಿ ಗಾಯದ ಮಧ್ಯೆಯೂ ಹೋರಾಡಿದ ರಿಜ್ವಾನ್​ 121 ಎಸೆತಗಳಿಂದ 8 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ ಅಜೇಯ 131 ರನ್​ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ಅಬ್ದುಲ್ಲಾ ಶಫೀಕ್ 113 ರನ್​ ಬಾರಿಸಿದರು. ಹೈದರಾಬಾದ್‌ನ ಬ್ಯಾಟಿಂಗ್‌ ಸ್ನೇಹಿ ಟ್ರ್ಯಾಕ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 344 ರನ್‌ ಪೇರಿಸಿತು. ಬೃಹತ್​ ಮೊತ್ತವನ್ನು ದಿಟ್ಟ ರೀತಿಯಲ್ಲಿ ಚೇಸಿಂಗ್‌ ನಡೆಸಿ ಪಾಕಿಸ್ತಾನ 48.2 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 348 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿಯೂ ಗೆಲುವು ದಾಖಲಿಸಿ ಅಜೇಯ ಓಟವನ್ನು ಕಾಯ್ದುಕೊಂಡಿದೆ.

ಇಸ್ರೇಲ್‌ಗೆ ಭಾರತ ಬೆಂಬಲ

ಇಸ್ರೇಲ್‌ಗೆ ಭಾರತ ಬೆಂಬಲ ಘೋಷಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ, ಇಸ್ರೇಲ್ ಮತ್ತು ಹಮಾಸ್ ಮಧ್ಯೆ ನಡೆಯುತ್ತಿರುವ ಕಾಳಗದ ಕುರಿತು ವಿಸ್ತಾರ ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಂಚಿಕೊಂಡಿದ್ದಾರೆ. ತಮ್ಮ ದೂರವಾಣಿ ಸಂಭಾಷಣೆ ವೇಳೆ, ಈ ಸಂಕಷ್ಟದ ಸ್ಥಿತಿಯ್ಲಲಿ ಭಾರತವು ಇಸ್ರೇಲ್ ಜತೆಗೆ ನಿಲ್ಲಲಿದೆ. ಭಾರತವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಅವರಿಗೆ ತಿಳಿಸಿದ್ದಾರೆ.

Exit mobile version