Site icon Vistara News

Fifa Ranking: ಉತ್ತಮ ಪ್ರಗತಿ ಸಾಧಿಸಿದ ಭಾರತೀಯ ಫುಟ್ಬಾಲ್​ ತಂಡ

indian football team

ನವದೆಹಲಿ: ಉತ್ತಮ ಪ್ರಗತಿಯಲ್ಲಿರುವ ಭಾರತೀಯ ಫುಟ್ಬಾಲ್​ ತಂಡ(indian football team) 2018ರ ಬಳಿಕ ಮೊದಲ ಬಾರಿ ಫಿಫಾ ಶ್ರೇಯಾಂಕದಲ್ಲಿ(Fifa Ranking) ಅಗ್ರ 100ರೊಳಗೆ ಸ್ಥಾನ ಪಡೆದಿದೆ. ಸ್ಯಾಫ್​ ಪುಟ್ಬಾಲ್​ ಟೂರ್ನಿಯಲ್ಲಿ ಗೆದ್ದ ಕಾರಣದಿಂದ ಭಾರತ ತಂಡ ಈ ಪ್ರಗತಿ ಸಾಧಿಸಿದೆ. ಫಿಫಾ ಚಾಂಪಿಯನ್​ ಲಿಯೋನಲ್ ಮೆಸ್ಸಿ (lionel messi)ಸಾರಥ್ಯದ ಅರ್ಜೆಂಟೀನಾ(Argentina) ತಂಡ ನಂ.1 ಸ್ಥಾನದಲ್ಲಿ ಮುಂದುವರಿದಿದೆ.

ಭಾರತದ ಖಾತೆಯಲ್ಲಿ ಸದ್ಯ 1,208.69 ಅಂಕಗಳಿವೆ. ಭಾರತದ ಶ್ರೇಷ್ಠ ಶ್ರೇಯಾಂಕ 94 ಇದನ್ನು 1966ರಲ್ಲಿ ಸಾಧಿಸಿತ್ತು. ಈ ಮುನ್ನ 2017, 2018ರಲ್ಲಿ 96ನೇ ಸ್ಥಾನಕ್ಕೇರಿತ್ತು. 1993ರಲ್ಲಿ 99ನೇ ಸ್ಥಾನದಲ್ಲಿತ್ತು. ಸ್ಯಾಫ್​ ಟೂರ್ನಿಗೂ ಮುನ್ನ ಭಾರತ 101ರಿಂದ 100ನೇ ಸ್ಥಾನಕ್ಕೇರಿತ್ತು. ಫಿಫಾ ವಿಶ್ವ ಚಾಂಪಿಯನ್​ ಅರ್ಜೆಂಟೀನಾ ನಂ.1 ಸ್ಥಾನದಲ್ಲಿದ್ದರೆ ಫ್ರಾನ್ಸ್​, ಬ್ರೆಜಿಲ್​,ಇಂಗ್ಲೆಂಡ್​ ಮತ್ತು ಬೆಲ್ಜಿಂಯಂ ಕ್ರಮವಾಗಿ ಆಬಳಿಕದ ಸ್ಥಾನದಲ್ಲಿದೆ.ಏಷ್ಯಾ ತಂಡಗಳ ಪೈಕಿ ಜಪಾನ್​ 20ನೇ ಸ್ಥಾನದಲ್ಲಿದೆ.

ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದಕ್ಕೆ ಸಂತಸ ವ್ಯಕ್ತಪಡಿಸಿರುವ ಭಾರತ ತಂಡದ ಕೋಚ್​ ಐಗರ್‌ ಸ್ಟಿಮಾಕ್‌, ಮುಂದಿನ ಕೆಲವು ಪ್ರಮುಖ ಪಂದ್ಯಗಳಲ್ಲಿಯೂ ಶ್ರೇಷ್ಠ ನಿರ್ವಹಣೆ ಕಾಯ್ದುಕೊಂಡು 100 ಒಳಗಡೆ ಶ್ರೇಯಾಂಕವನ್ನು ಉಳಿಸಿಕೊಳ್ಳಬೇಕಿದೆ. ಶ್ರೇಯಾಂಕ ಪ್ರಗತಿಯ ಸುದ್ದಿ ಕೇಳಿ ಖುಷಿಯಾಗಿದೆ” ಎಂದರು.

ಇದನ್ನೂ ಓದಿ SAFF Championship : 9ನೇ ಬಾರಿ ಸ್ಯಾಫ್​​ ಟ್ರೋಫಿ ಮುಡಿಗೇರಿಸಿಕೊಂಡ ಭಾರತ ಫುಟ್ಬಾಲ್​ ತಂಡ

ಏಷ್ಯನ್ ಗೇಮ್ಸ್​ಗೆ ಅರ್ಹತೆ ಪಡೆಯುವಲ್ಲಿ ವಿಫಲ

ಭಾರತೀಯ ಫುಟ್ಬಾಲ್​ ತಂಡ(Indian Football Team) ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್​(Asian Games) ಕ್ರೀಡಾಕೂಟದಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕ್ರೀಡಾಕೂಟದಲ್ಲಿ ಭಾಗಿಯಾಗುವ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಕ್ರೀಡಾ ಸಚಿವಾಲಯದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತ ಫುಟ್ಬಾಲ್ ತಂಡ ವಿಫಲವಾಗಿರುವುದರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಮತ್ತು ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಶನ್‍ಗಳಿಗೆ(NSFS) ಕಳುಹಿಸಲಾದ ಪತ್ರದಲ್ಲಿ ಕ್ರೀಡಾ ಸಚಿವಾಲಯವು ಟೀಮ್ ಈವೆಂಟ್‍ಗಳಿಗೆ, ಏಷ್ಯಾದ ಭಾಗವಹಿಸುವ ದೇಶಗಳಲ್ಲಿ ಎಂಟನೇ ಸ್ಥಾನವನ್ನು ಗಳಿಸಿದ ಕ್ರೀಡೆಗಳು ಮಾತ್ರ ಭಾಗವಹಿಸಬಹುದಾಗಿದೆ. ಜತೆಗೆ ಕಳೆದ ಒಂದು ವರ್ಷವನ್ನು ಪರಿಗಣಿಸಬೇಕು.

ಏಷ್ಯಾದ ಅಗ್ರ-8ರ ತಂಡಗಳ ಸಮೀಪದಲ್ಲಿ ಭಾರತ ಎಲ್ಲಿಯೂ ಇಲ್ಲ. ಪ್ರಸ್ತುತ ಭಾರತ ಏಷ್ಯನ್ ಫುಟ್ಬಾಲ್ ಒಕ್ಕೂಟದ ಅಡಿಯಲ್ಲಿ ಬರುವ ದೇಶಗಳ ಶ್ರೇಯಾಂಕದಲ್ಲಿ 18ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತ ತಂಡಕ್ಕೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡುವುದಾಗಿ ಎಐಎಫ್‍ಎಫ್(AIFF ) ಹೇಳಿಕೊಂಡಿದೆ.

Exit mobile version