ದೋಹಾ: ಅಪಾಯಕಾರಿ ಕ್ರೊವೇಶಿಯವನ್ನು ಸೆಮಿಫೈನಲ್ನಲ್ಲಿ 3-0 ಗೋಲುಗಳ ಅಂತರದಿಂದ ಬಗ್ಗುಬಡಿಯುವ ಮೂಲಕ 6ನೇ ಸಲ ಫಿಫಾ ವಿಶ್ವಕಪ್(Fifa World Cup) ಫೈನಲ್‌ಗೆ ಲಗ್ಗೆ ಇರಿಸಿದ ಆರ್ಜೆಂಟೀನಾ ತಂಡಕ್ಕೆ ಫೈನಲ್ ಪಂದ್ಯಕ್ಕೂ ಮುನ್ನ ದೊಡ್ಡ ಆಘಾತ ಎದುರಾಗಿದೆ. ತಂಡದ ನಾಯಕ ಲಿಯೋನೆಲ್ ಮೆಸ್ಸಿ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರದಂದು ನಡೆಯಲ್ಲಿರುವ ಫೈನಲ್ ಕಾಳಗದಲ್ಲಿ ಅರ್ಜೆಂಟೀನಾ ಹಾಗೂ ಹಾಲಿ ಚಾಂಪಿಯನ್ ಫ್ರಾನ್ಸ್ ಮುಖಾಮುಖಿಯಾಗಲು ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಮಂಡಿರಜ್ಜು ಗಾಯದಿಂದಾಗಿ ಫೈನಲ್ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ. ಈ ಸುದ್ದಿ ಹೊರಬೀಳುತಿದ್ದಂತೆಯೇ ಮೆಸ್ಸಿ ಮತ್ತು ಅರ್ಜೆಂಟೀನಾ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಗೆದ್ದ ಬಳಿಕ ಮೆಸ್ಸಿ ಫಿಫಾ ವಿಶ್ವ ಕಪ್ ಫೈನಲ್ ಪಂದ್ಯವೇ ನನ್ನ ಕೊನೆಯ ಪಂದ್ಯ ಎಂಬ ಹೇಳಿಕೆ ನೀಡಿದ್ದರು. ಹೀಗಾಗಿ ಮೆಸ್ಸಿಯ ಕೊನೆಯ ವಿಶ್ವಕಪ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರು. ಆದರೆ ಮೆಸ್ಸಿ ಮಂಡಿರಜ್ಜು (hamstring) ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಫೈನಲ್ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನವಿದೆ ಎಂದು ವರದಿಯಾಗಿದೆ.
ಅಭ್ಯಾಸಕ್ಕೆ ಗೈರು
ಗುರುವಾರ ಮತ್ತು ಶುಕ್ರವಾರ ನಡೆದ ತಂಡದ ಅಭ್ಯಾಸದಲ್ಲಿ ಮೆಸ್ಸಿ ಕಾಣಿಸಿಕೊಂಡಿಲ್ಲ. ಹೀಗಾಗಿ ಭಾನುವಾರ ಫ್ರಾನ್ಸ್ ವಿರುದ್ಧದ ವಿಶ್ವ ಕಪ್ ಫೈನಲ್ ಪಂದ್ಯಕ್ಕೆ ಅವರು ಅಲಭ್ಯರಾಗುತ್ತಾರಾ ಎಂಬುದು ಅರ್ಜೆಂಟೀನಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಒಂದೊಮ್ಮೆ ಫೈನಲ್ ಪಂದ್ಯದಲ್ಲಿಯೂ ಕಣಕ್ಕಿಳಿದರೂ ಪಂದ್ಯದ ಮಧ್ಯೆ ನೋವು ಕಾಣಿಸಿಕೊಂಡರೆ ತಂಡಕ್ಕೆ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ | Fifa World Cup | ಪಂದ್ಯ ಸೋತರೂ ನೀನು ಇತಿಹಾಸ ನಿರ್ಮಿಸಿದೆ ಸಹೋದರ; ಎದುರಾಳಿ ತಂಡದ ಆಟಗಾರನಿಗೆ ಎಂಬಾಪೆ ಪ್ರಶಂಸೆ