ದೋಹಾ: ಫಿಫಾ ವಿಶ್ವಕಪ್‌ನ ಸೌದಿ ಅರೇಬಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಅಂರ್ಜೆಂಟೀನಾ ತಂಡ ಭಾನುವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೋ ತಂಡವನ್ನು 2-0 ಅಂತರದಿಂದ ಮಣಿಸಿ ಗೆಲುವಿನ ಖಾತೆ ತರೆದಿದೆ. ಜತೆಗೆ ತಂಡದ ನಾಯಕ ಲಿಯೋನಲ್ ಮೆಸ್ಸಿ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅರ್ಜೆಂಟೀನಾ ಪರ ಡಿಗೋ ಮರಡೋನಾ ಹೆಸರಿನಲ್ಲಿದ್ದ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದರು. ಮೆಸ್ಸಿ, ಮೆಕ್ಸಿಕೋ ವಿರುದ್ಧ ಮೈದಾನಕ್ಕಿಳಿಯುವ ಮೂಲಕ ಅರ್ಜೆಂಟೀನಾ ಪರ 21 ವಿಶ್ವಕಪ್ ಪಂದ್ಯಗಳನ್ನು ಆಡಿದ ಮತ್ತು 8 ಗೋಲ್ಗಳನ್ನು ಬಾರಿಸಿದ ಮರಡೋನಾ ಅವರ ದಾಖಲೆಯನ್ನು ಸರಿಗಟ್ಟಿದರು.
ಪಂದ್ಯದ ದ್ವಿತೀಯಾರ್ಧದಲ್ಲಿ ಮೆಕ್ಸಿಕೋ ವಿರುದ್ಧ ಗೋಲು ಗಳಿಸುವ ಮೂಲಕ ಮೆಸ್ಸಿ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಯಾವುದೇ ಗೋಲು ಗಳಿಸಿರಲಿಲ್ಲ. ಅಂತಿಮವಾಗಿ ಪಂದ್ಯವನ್ನು 2-0 ಅಂತರದಿಂದ ಗೆದ್ದ ಅರ್ಜೆಂಟೀನಾ ವಿಶ್ವ ಕಪ್ ಆಸೆ ಜೀವಂತವಾಗಿರಿಸಿದೆ.
ಇದನ್ನೂ ಓದಿ | FIFA World Cup | ಡೆನ್ಮಾರ್ಕ್ ವಿರುದ್ಧ ಫ್ರಾನ್ಸ್‌ಗೆ 2-1 ಗೋಲ್‌ಗಳ ರೋಚಕ ಜಯ