Site icon Vistara News

FIFA World Cup | ವಿಶ್ವ ಕಪ್​ ಫೈನಲ್​ನಲ್ಲಿ ಸೋಲು, ಫ್ರಾನ್ಸ್​ನಲ್ಲಿ ಫುಟ್ಬಾಲ್​ ಅಭಿಮಾನಿಗಳಿಂದ ದೊಂಬಿ

fifa world cup

ಪ್ಯಾರಿಸ್​ : ಭಾನುವಾರ ರಾತ್ರಿ ನಡೆದ ಫಿಫಾ ವಿಶ್ವ ಕಪ್​ (FIFA World Cup) ಫೈನಲ್​ನಲ್ಲಿ ಲಿಯೋನೆಲ್​ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಟ್ರೋಫಿ ಗೆದ್ದಿದೆ. ಇದೇ ವೇಳೆ ಹ್ಯೂಗೋ ಲೋರಿಸ್​ ನೇತೃತ್ವದ ಫ್ರಾನ್ಸ್​ ತಂಡ 4-2 ಗೋಲ್​ಗಳ ಅಂತರದಿಂದ ಸೋಲು ಕಂಡಿದೆ. ಮಾಜಿ ಚಾಂಪಿಯನ್ ಫ್ರಾನ್ಸ್​ ತಂಡ ಅತ್ತ ಸೋಲು ಅನುಭವಿಸುತ್ತಿದ್ದಂತೆ ಆ ದೇಶದ ರಾಜಧಾನಿ ಪ್ಯಾರಿಸ್​ ಸೇರಿದಂತೆ ಹಲವೆಡೆ ಅಭಿಮಾನಿಗಳು ದೊಂಬಿ ಸೃಷ್ಟಿಸಿದ್ದಾರೆ.

ಫೈನಲ್​ ಪಂದ್ಯವನ್ನು ನೋಡುತ್ತಿದ್ದ ಫುಟ್ಬಾಲ್​ ಅಭಿಮಾನಿಗಳು ಸೋಲಿನ ನೋವಿನಲ್ಲಿ ಏಕಾಏಕಿ ರಸ್ತೆಗಳಿಗೆ ನುಗ್ಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ರಸ್ತೆಯ ಮೇಲೆ ಪೆಟ್ರೋಲ್​ ಸುರಿದು ಅಗ್ನಿ ಸ್ಪರ್ಶ ಮಾಡಿದ್ದಾರೆ. ಕಂಡ ಕಂಡ ವಸ್ತುಗಳನ್ನು ಚಿಂದಿ ಮಾಡುತ್ತಾ ಸಾಗಿದ್ದಾರೆ. ರಸ್ತೆ ಮೇಲೆ ಚಲಿಸುತ್ತಿದ್ದ ಕಾರುಗಳನ್ನು ತಡೆಗೆ ಅವುಗಳನ್ನು ಉರುಳಿಸಿ ಹಾಕಿದ್ದಾರೆ. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಅಭಿಮಾನಿಗಳ ಹಚ್ಚಾಟವನ್ನು ನಿಯಂತ್ರಿಸಲು ಸಾಧ್ಯವಾಗದೇ ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ. ಅದೇ ರೀತಿ ಹಲವೆಡೆ ಲಾಠಿ ಚಾರ್ಜ್​ ಮಾಡಿ ಅಭಿಮಾನಿಗಳನ್ನು ಚದುರಿಸಿದ್ದಾರೆ. ಜನರು ಗುಂಪು ಸೇರದಂತೆ ನೋಡಿಕೊಳ್ಳುತ್ತಿದ್ದಾರೆ.

ಡೈಲಿ ಮೇಲ್​ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಅಭಿಮಾನಿಗಳ ಅತಿರೇಕದ ವಿಡಿಯೊಗಳು ಪ್ರಸಾರವಾಗುತ್ತಿವೆ. ಗಲಾಟೆ ಇನ್ನೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಭದ್ರತೆಗಾಗಿ 14000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂಬುದಾಗಿ ಅಲ್ಲಿ ಮಾಧ್ಯಮಗಳು ವರದಿ ಮಾಡಿವೆ.

ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-2 ಗೋಲ್​ಗಳಿಂದ ಜಯಗಳಿಸಿತು. 1986ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ಡಿಯಾಗೋ ಮರಡೋನಾ-ನೇತತೃದ ತಂಡ ಪ್ರಶಸ್ತಿ ಗೆದ್ದ ಬಳಿ ಇದು ದೇಶಕ್ಕೆ ದೊರೆತ ಮೂರನೇ ವಿಶ್ವಕಪ್ ಪ್ರಶಸ್ತಿಯಾಗಿದೆ. ಅವರು 1978 ರಲ್ಲಿ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿದ್ದರು.

ಹಾಲಿ ವಿಶ್ವ ಕಪ್ ಪಂದ್ಯಗಳ ಫಲಿತಾಂಶಗಳ ಬಳಿಕ ಯುರೋಪಿನಾದ್ಯಂತ ಗಲಭೆಗಳು ನಡೆದಿದ್ದವು. ಡಿಸೆಂಬರ್ 15 ರಂದು, ಫ್ರಾನ್ಸ್ ಸೆಮಿ-ಫೈನಲ್‌ನಲ್ಲಿ 2-0 ಗೆಲುವಿನೊಂದಿಗೆ ಮೊರಾಕ್ಕೊ ತಂಡದ ವಿರುದ್ಧ ಜಯಿಸಿದಾಗ ನಂತರ, ಫ್ರಾನ್ಸ್ ಮತ್ತು ಬೆಲ್ಜಿಯಂನಾದ್ಯಂತ ಹಲವಾರು ನಗರಗಳಲ್ಲಿ ಗಲಭೆಗಳು ನಡೆದಿದ್ದವು.

ಮೊರಾಕೊ ವಿರುದ್ಧದ ಗೆಲುವಿನ ಬಳಿಕ ಫ್ರಾನ್ಸ್‌ನಾದ್ಯಂತ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 14 ವರ್ಷದ ಬಾಲಕ ಮೃತಪಟ್ಟಿದ್ದ. ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನಲ್ಲಿ ಪೊಲೀಸರು ಸುಮಾರು 100 ಜನರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | FIFA World Cup | ಇನ್ನೂ ಆಡುವೆ ಎಂದ ಲಿಯೋನೆಲ್​ ಮೆಸ್ಸಿ; ನಿರ್ಧಾರ ಬದಲಿಸಲು ಕಾರಣವೇನು?

Exit mobile version