ದೋಹಾ: ಕತಾರ್ ಫಿಫಾ ವಿಶ್ವ ಕಪ್ನಲ್ಲಿ ಬ್ರೆಜಿಲ್ ತಂಡ ನಾಕೌಟ್ ತಲುಪಿದೆ. ಆದರೆ ನಾಯಕ ನೇಮರ್ ಆಡಿದ ಮೊದಲ ಪಂದ್ಯದಲ್ಲಿ ಗಾಯಗೊಂಡು ಪಂದ್ಯದಿಂದ ಹೊರಗುಳಿದು ವಾರಗಳೇ ಕಳೆದರೂ ಅವರು ಇನ್ನೂ ತಂಡಕ್ಕೆ ಮರಳದಿರುವುದು ಚಿಂತೆಗೀಡು ಮಾಡಿದೆ.
ಸರ್ಬಿಯಾ ವಿರುದ್ಧದ ಲೀಗ್ ಹಂತದ ಮೊದಲ ಪಂದ್ಯದ ವೇಳೆ ನೇಮರ್ ಕಾಲು ಉಳುಕಿಸಿಕೊಂಡಿದ್ದರು. ಹೀಗಾಗಿ ಪಂದ್ಯ ಮುಕ್ತಾಯಕ್ಕೆ ೧೦ ನಿಮಿಷಗಳು ಬಾಕಿ ಇರುವಂತೆಯೇ ಮೈದಾನ ತೊರೆದಿದ್ದರು. ಅದಕ್ಕಿಂತ ಮೊದಲು ಅವರಿಗೆ ಐಸ್ ಪ್ಯಾಕ್ ಸೇರಿದಂತೆ ನಾನಾ ರೀತಿಯಲ್ಲಿ ಪ್ರಥಮ ಚಿಕಿತ್ಸೆಗಳನ್ನು ನೀಡಲಾಗಿತ್ತು. ಆದರೆ ಸುಧಾರಿಸಿಕೊಳ್ಳದ ಕಾರಣ ಹೋಟೆಲ್ ರೂಮ್‌ಗೆ ಮರಳಿದ್ದರು ಆಗಲೇ ಈ ವಿಶ್ವಕಪ್‌ನಲ್ಲಿ ಅವರ ಆಟ ಮುಗಿಯಿತು ಎಂದು ಭಾವಿಸಲಾಗಿತ್ತು. ಆದರೆ ಇನ್ನೆರಡು ಪಂದ್ಯಗಳ ಬಳಿಕ ನಿರ್ಧರಿಸೋಣ ಎಂದು ತಂಡದ ಆಡಳಿತ ಮಂಡಳಿ ತೀರ್ಮಾನಿಸಿತ್ತು.
ಇದೀಗ ಗುಂಪು ಹಂತದ ಪಂದ್ಯಗಳು ಮುಗಿದು ಕೆಲವು ನಾಕೌಟ್ ಪಂದ್ಯಗಳು ಅಂತಿಮ ಹಂತಕ್ಕೆ ತಲುಪಿದೆ. ಆದರೂ ನೇಮರ್ ತಂಡ ಸೇರಿಲ್ಲ. ಇದೀಗ ನೇಮರ್ ಅವರ ಆಟ ಈ ವಿಶ್ವ ಕಪ್ನಲ್ಲಿ ಅಂತ್ಯಗೊಂಡಿದೆ ಎಂಬ ಅನುಮಾನವೊಂದು ಮೂಡಿದೆ. ಒಂದೊಮ್ಮೆ ಅವರು ಮುಂದಿನ ನಾಕೌಟ್ ಪಂದ್ಯದಲ್ಲಿ ತಂಡದ ಪರ ಕಣಕ್ಕಿಳಿಯದೇ ಹೋದರೆ ಈ ವಿಶ್ವಕಪ್‌ನಿಂದ ಅವರು ಪೂರ್ಣವಾಗಿ ಹೊರಬಿದಿರುವುದು ಬಹುತೇಕ ಖಚಿತ ಎನ್ನಬಹುದು.
ಇದನ್ನೂ ಓದಿ | Fifa World Cup | ಮೆಸ್ಸಿ ದಾಖಲೆಯ ಗೋಲಿನಿಂದ ಕ್ವಾರ್ಟರ್ ಫೈನಲ್ ತಲುಪಿದ ಅರ್ಜೆಂಟೀನಾ