ದೋಹಾ: ಈ ಬಾರಿಯ ಫಿಫಾ ವಿಶ್ವ ಕಪ್(Fifa World Cup) ಆತಿಥ್ಯ ವಹಿಸಿದ ಕತಾರ್ ಮೇಲೆ ಆರಂಭದಿಂದಲೂ ಸಾಲು ಸಾಲು ಆರೋಪಗಳು ಕೇಳಿಬಂದಿದ್ದವು. ಆದರೆ ಇದೀಗ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಕತಾರ್ ವಿರುದ್ಧ ಫಿಕ್ಸಿಂಗ್ ಆರೋಪವೊಂದು ಕೇಳಿಬಂದಿದೆ.
ಸೌದಿ ಅರೇಬಿಯಾದ ಬ್ರಿಟಿಷ್ ಕೇಂದ್ರದ ಕಾರ್ಯತಂತ್ರದ ರಾಜಕೀಯ ವ್ಯವಹಾರಗಳ ತಜ್ಞ ಮತ್ತು ಪ್ರಾದೇಶಿಕ ನಿರ್ದೇಶಕ ಅಮ್ಜದ್ ತಾಹಾ ಟ್ವೀಟ್ ಮಾಡುವ ಮೂಲಕ ಕತಾರ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಗೆಲ್ಲಲು ಆತಿಥೇಯ ಕತಾರ್ ತಂಡ ಈಕ್ವೆಡಾರ್ ತಂಡದ ಆಟಗಾರರಿಗೆ ಲಂಚ ನೀಡಲು ಪ್ರಯತ್ನಿಸಿದೆ ಎಂದು ನೇರ ಆರೋಪ ಮಾಡಿದ್ದಾರೆ. ಇದೀಗ ಅಮ್ಜದ್ ತಾಹಾ ಅವರ ಈ ಆರೋಪ ಭಾರಿ ಸಂಚಲನ ಮೂಡಿಸಿದ್ದು ಹಲವು ಅನುಮಾನಕ್ಕೆ ಎಡೆಮಾಡಿದೆ.
ಟ್ವೀಟ್‌ನಲ್ಲಿ ಏನಿದೆ
ಅಮ್ಜದ್ ತಾಹಾ ಟ್ವೀಟ್‌ನಲ್ಲಿ, ಎದುರಾಳಿ ತಂಡದ 8 ಈಕ್ವೆಡಾರ್ ಆಟಗಾರರಿಗೆ ಸುಮಾರು 60 ಕೋಟಿ ರೂಪಾಯಿ ಲಂಚ ನೀಡಲು ಕತಾರ್ ಪ್ರಯತ್ನಿಸಿದೆ. ಅಲ್ಲದೆ ದ್ವಿತೀಯಾರ್ಧದಲ್ಲಿ ಪಂದ್ಯವನ್ನು 1-0 ಅಂತರದಲ್ಲಿ ಪಂದ್ಯವನ್ನು ಸೋಲುವಂತೆ ಕೇಳಿಕೊಂಡಿದ್ದು ಇದನ್ನು ಕತಾರ್ ಮತ್ತು ಈಕ್ವೆಡಾರ್ ಶಿಬಿರಗಳ 5 ಜನರು ಖಚಿತಪಡಿಸಿದ್ದಾರೆ. ಹಾಗಾಗದಿರಲಿ ಎಂದು ಆಶಿಸೋಣ. ಇದೀಗ ಪಂದ್ಯಕ್ಕೂ ಮುನ್ನವೇ ಈ ವಿಚಾರವನ್ನು ಬಹಿರಂಗ ಪಡಿಸಿದ ಕಾರಣ ಈ ಭ್ರಷ್ಟಾಚಾರವನ್ನು ಫಿಫಾ ಜಗತ್ತು ತಡೆಗಟ್ಟಬಹುದು ಎಂಬ ವಿಶ್ವಾಸವಿದೆ’ ಎಂದು ಅಮ್ಜದ್ ಹೇಳಿದ್ದಾರೆ.
ಒಂದೊಮ್ಮೆ ಈ ಆರೋಪ ಸಾಬೀತದಲ್ಲಿ ಹಲವು ತಂಡಗಳು ಈ ಕೂಟದಿಂದ ಹಿಂದೆ ಸರಿಯುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಈಗಾಗಲೇ ಕೆಲ ದೇಶಗಳು ಕತಾರ್ ದೇಶದ ಕೆಲ ಕಟ್ಟುನಿಟ್ಟಿನ ಹಾಗೂ ಮಾನವತಾ ವಿರೋಧಿ ನೀತಿಯನ್ನು ಬಹಿಷ್ಕರಿಸಿ ಈ ವಿಶ್ವ ಕಪ್ನಿಂದ ಹಿಂದೆ ಸರಿದಿವೆ.
ಇದನ್ನೂ ಓದಿ | Fifa World Cup| ಕಾಲ್ಚೆಂಡಿನ ಕಾಳಗಕ್ಕೆ ಕತಾರ್, ಈಕ್ವೆಡಾರ್ ಸಜ್ಜು; ಯಾರಿಗೆ ಒಲಿಯಲಿದೆ ಗೆಲುವು?