ದೋಹಾ: ಮೊರಾಕ್ಕೊ ವಿರುದ್ಧ ಬುಧವಾರ ತಡರಾತ್ರಿ ನಡೆದ ಫಿಫಾ ವಿಶ್ವ ಕಪ್(Fifa World Cup) ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ 2-0 ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದೆ. ಆದರೆ ಪಂದ್ಯ ಗೆದ್ದರೂ ಫ್ರಾನ್ಸ್ ತಂಡದ ಆಟಗಾರ ಕೈಲಿಯನ್ ಎಂಬಾಪೆ ತಮ್ಮ ಸ್ನೇಹಿತ ಎದುರಾಳಿ ತಂಡದ ಆಟಗಾರ ಅಶ್ರಫ್ ಹಕೀಮಿ ಅವರನ್ನು ಸಮಾಧಾನಪಡಿಸಿ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.
ಎಂಬಾಪೆ ಸೆಮಿ ಫೈನಲ್ ಮುಗಿದ ತಕ್ಷಣವೇ ಪ್ಯಾರಿಸ್ ಸೇಂಟ್-ಜರ್ಮೈನ್ ಫುಟ್ಬಾಲ್ ಕ್ಲಬ್ನ ಸಹ ಆಟಗಾರ ಅಶ್ರಫ್ ಹಕೀಮಿ ಅವರನ್ನು ಸೋಲಿನ ಬಳಿಕ ಸಮಾಧಾನಪಡಿಸಿದ್ದಾರೆ. ಅದರಂತೆ ಎಂಬಾಪೆ ಹಾಗೂ ಹಕೀಮಿ ಪರಸ್ಪರ ಆಲಿಂಗಿಸಿಕೊಂಡು ತಮ್ಮ ಜೆರ್ಸಿಗಳನ್ನು ವಿನಿಮಯ ಮಾಡಿಕೊಂಡರು.
ಇದರ ಬೆನ್ನಲ್ಲೇ ಟ್ವೀಟ್ ಮಾಡಿದ ಎಂಬಾಪೆ “ದುಃಖಪಡಬೇಡಿ ಸಹೋದರ, ನೀನು ಮಾಡಿರುವ ಸಾಧನೆಗೆ ಎಲ್ಲರೂ ಹೆಮ್ಮೆಪಡುತ್ತಾರೆ, ನೀನು ಇತಿಹಾಸ ಸೃಷ್ಟಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ. ಫೈನಲ್ ಪ್ರವೇಶಿಸಿದ ಫ್ರಾನ್ಸ್ ತಂಡ ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಕಣಕ್ಕಿಳಿಯಲಿದೆ.
ಇದನ್ನೂ ಓದಿ | Fifa World Cup | ಫ್ರಾನ್ಸ್ ವಿರುದ್ಧ ಸೋಲಿನ ಹತಾಶೆಯಿಂದ ಪೊಲೀಸರ ಮೇಲೆ ದಾಳಿ ನಡೆಸಿದ ಮೊರಾಕ್ಕೊ ಅಭಿಮಾನಿಗಳು