ದೋಹಾ: ಕತಾರ್ ಲಕ್ಷಾಂತರ ಕೋಟಿ ರೂ. ಖರ್ಚು ಮಾಡಿ ಫಿಫಾ ವಿಶ್ವ ಕಪ್ ಟೂರ್ನಿ ಆಯೋಜಿಸಿದ್ದರೂ ಆ ದೇಶಕ್ಕೆ ವಿಶ್ವ ಕಪ್ ವೀಕ್ಷಣೆಗೆ ತೆರಳಿರುವ ಹಲವು ದೇಶಗಳ ಅಭಿಮಾನಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಮಾತ್ರ ಹಿಂದೆ ಬಿದ್ದಿದ್ದು ಹಲವು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಟನ್‌ನ ‘ಡೈಲಿ ಮೇಲ್’ ಎಂಬ ಮಾಧ್ಯಮ ಪ್ರಕಟಿಸಿದ ವರದಿಯಿಂದ ಈ ವಿಚಾರ ಬಹಿರಂಗಗೊಂಡಿದ್ದು, ಕತಾರ್ನಲ್ಲಿ ವಾಸ್ತವ್ಯ ವ್ಯವಸ್ಥೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ತಿಳಿದುಬಂದಿದೆ. ಇದಕ್ಕೆ ಸಾಕ್ಷಿಯಾಗಿ ಇರಾನ್‌ನ ಫುಟ್ಬಾಲ್ ಅಭಿಮಾನಿಯೊಬ್ಬರು ತಾವು ಹಡಗಿನ ಕಂಟೈನರ್‌ಗಳಿಂದ ಸಿದ್ಧಪಡಿಸಿರುವ ಕೊಠಡಿಗೆ ಒಂದು ರಾತ್ರಿಗೆ 185 ಪೌಂಡ್(ಅಂದಾಜು 18,000 ರೂ.) ಪಾವತಿಸಿದ್ದಾಗಿ ಹೇಳಿದ್ದಾರೆ. ಕೊಠಡಿಯು ತೀರಾ ಚಿಕ್ಕದಾಗಿದ್ದು, 6 ಅಡಿ ಎತ್ತರವಿರುವ ತಮಗೆ ಸರಿಯಾಗಿ ಮಲಗಲು ಆಗುತ್ತಿಲ್ಲ. ಬ್ಯಾಗ್‌ಗಳನ್ನು ಇಡಲು ಜಾಗವೇ ಇಲ್ಲ. ಕೊಠಡಿಯೂ ಶೂ ಬಾಕ್ಸ್‌ನಂತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸುಳ್ಳು ಭರವಸೆ
ಅಭಿಮಾನಿಗಳ ವಾಸ್ತವ್ಯಕ್ಕೆಂದು ಸಿದ್ಧಗೊಂಡಿರುವ ಸ್ಥಳದಲ್ಲಿ ಜಿಮ್, ಕೆಫೆ, ಓಪನ್ ಥಿಯೇಟರ್ ಮತ್ತಿತರ ಸೌಕರ್ಯ ಇರಲಿದೆ ಎಂದು ಕತಾರ್ ಭರವಸೆ ನೀಡಿತ್ತು. ಆದರೆ ಎಲ್ಲಿ ನೋಡಿದರೂ ಕಟ್ಟಡ ನಿರ್ಮಾಣದಿಂದ ಉಂಟಾದ ಕಸದ ರಾಶಿಗಳಿವೆ ಎಂದು ಹಲವು ಫುಟ್ಬಾಲ್ ಅಭಿಮಾನಿಗಳು ಸಿಟ್ಟು ಹೊರಹಾಕಿದ್ದಾರೆ.
ಇದನ್ನೂ ಓದಿ | FIFA World Cup | ಜಾಕಿರ್ ನಾಯ್ಕ್‌ಗೆ ಆಹ್ವಾನ, ಭಾರತದಲ್ಲಿ ಬಾಯ್ಕಾಟ್ ವಿಶ್ವ ಕಪ್ ಟ್ರೆಂಡಿಂಗ್