ಬ್ರಸೆಲ್ಸ್: ಕತಾರ್ ಫಿಫಾ ವಿಶ್ವ ಕಪ್(Fifa World Cup) ನಲ್ಲಿ ಬುಧವಾರ ತಡ ರಾತ್ರಿ ನಡೆದ ಸೆಮಿಫೈನಲ್ ಕಾದಾಟದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ಮೊರಾಕ್ಕೊ ತಂಡ 2-0 ಗೋಲ್ಗಳ ಅಂತರದಿಂದ ಸೋಲು ಕಂಡಿದೆ. ಈ ಸೋಲಿನಿಂದ ರೊಚ್ಚಿಗೆದ್ದ ಆಫ್ರಿಕನ್ ಅಭಿಮಾನಿಗಳು ಬ್ರಸೆಲ್ಸ್ನಲ್ಲಿ ಪೊಲೀಸರ ವಿರುದ್ಧ ದಾಂಧಲೆ ನಡೆಸಿದ್ದಾರೆ.
ಪಂದ್ಯ ಸೋತ ಬಳಿಕ 100ಕ್ಕೂ ಅಧಿಕ ಅಭಿಮಾನಿಗಳು ಬ್ರಸೆಲ್ಸ್ನ ರಸ್ತೆಗಿಳಿದು ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಗಲಾಟೆಯನ್ನು ತಡೆಯಲು ಬಂದ ಪೊಲೀಸರ ಮೇಲೆ ಈ ಅಭಿಮಾನಿಗಳು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಐತಿಹಾಸಿಕ ಗೆಲುವು ದಾಖಲಿಸುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಮೊರಾಕ್ಕೊ ಸೋಲುವ ಮೂಲಕ ನಿರಾಸೆಯಾಯಿತು. ಇದೇ ವೇಳೆ ಸಂಭ್ರಮಿಸಲು ತಂದಿದ್ದ ಪಟಾಕಿಗಳನ್ನು ಅಭಿಮಾನಿಗಳು ಖಾಕಿ ಪಡೆಯ ಮೇಲೆ ಎಸೆದಿದ್ದಾರೆ. ಬಳಿಕ ಸಿಕ್ಕ ಸಿಕ್ಕ ವಸ್ತುಗಳನ್ನು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಮತ್ತು ಆಶ್ರುವಾಯು ಸಿಡಿಸಿ ಗಲಾಟೆಯನ್ನು ಹತೋಡಿಗೆ ತಂದಿದ್ದಾರೆ. ಘಟನೆಗೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | FIFA World Cup | ಮೊರಾಕ್ಕೊ ಆಸೆ ಭಗ್ನ, ಸತತ ಎರಡನೇ ಬಾರಿ ಫೈನಲ್ಗೇರಿದ ಫ್ರಾನ್ಸ್ ಬಳಗ