Site icon Vistara News

Fifa World Cup | ರೊನಾಲ್ಡೊ ಹೊರಗಿಟ್ಟು ತಂಡದ ಸೋಲಿಗೆ ಕಾರಣವಾದ ಕೋಚ್‌ ಫೆರ್ನಾಂಡೊ ಸ್ಯಾಂಟೋಸ್‌ಗೆ ಗೇಟ್​ ಪಾಸ್​

Fernando Santos

ಲಿಸ್ಬನ್: ಕತಾರ್​ ಫಿಫಾ ವಿಶ್ವ ಕಪ್(Fifa World Cup)​ ನ​ ಕ್ವಾರ್ಟರ್‌ ಫೈನಲ್‌ನ ಪಂದ್ಯದಲ್ಲಿ ಪೋರ್ಚುಗಲ್​ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊರನ್ನು ತಂಡದಿಂದ ಹೊರಹಾಕಿ ಸೋಲಿಗೆ ಕಾರಣವಾದ ತಂಡದ ಕೋಚ್‌ ಫೆರ್ನಾಂಡೊ ಸ್ಯಾಂಟೋಸ್‌ ತಮ್ಮ ತಪ್ಪಿಗೆ ಇದೀಗ ಬೆಲೆ ತೆತ್ತಿದ್ದಾರೆ.

ಸ್ವಿಜರ್​ಲ್ಯಾಂಡ್​ ವಿರುದ್ಧದ 16ರ ಘಟ್ಟದ ಪಂದ್ಯದಲ್ಲಿ ರೊನಾಲ್ಡೊ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಈ ಪಂದ್ಯದಲ್ಲಿ ಪೋರ್ಚುಗಲ್​ ತಂಡ 6-1 ಗೋಲ್​ಗಳ ಅಂತರದಿಂದ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ನೆಗಿದಿತ್ತು. ರೊನಾಲ್ಡೊ ಅವರನ್ನು ತಂಡದಿಂದ ಹೊರಗಿಟ್ಟರೂ ಸ್ವಿಜರ್​ಲ್ಯಾಂಡ್​ ವಿರುದ್ಧ ಗೆಲುವು ಸಾಧಿಸಿದ ಅತಿಯಾದ ಆತ್ಮ ವಿಶ್ವಾಸದಲ್ಲಿದ್ದ ಕೋಚ್​ ಫೆರ್ನಾಂಡೊ ಸ್ಯಾಂಟೋಸ್‌, ಕ್ವಾರ್ಟರ್​ ಪೈನಲ್​ ಪಂದ್ಯದಲ್ಲಿಯೂ ಹೆಚ್ಚು ರೊನಾಲ್ಡೊ ಅವರಿಗೆ ಆಡುವ ಅವಕಾಶ ನೀಡಲಿಲ್ಲ ಈ ಪರಿಣಾಮ ಪೋರ್ಚುಗಲ್​ ಸೋತು ಕೂಟದಿಂದ ಹೊರಬಿದ್ದ ಅವಮಾನಕ್ಕೆ ಸಿಲುಕಿತು.

ಇದೀಗ ಮೊರಾಕ್ಕೋ ವಿರುದ್ಧದ ಸೋಲಿಗೆ ಫೆರ್ನಾಂಡೊ ಸ್ಯಾಂಟೋಸ್‌ರನ್ನು ಪೋರ್ಚುಗಲ್​ ತಂಡದ ಕೋಚ್​ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಆದರೆ ರೊನಾಲ್ಡೊ ತಂಡದಲ್ಲಿ ಆಡಲು ಅವಕಾಶ ಸಿಗದ ಅವಮಾನದಿಂದ ತಂಡದಲ್ಲಿ ಮುಂದುವರಿಯಲಿದ್ದಾರಾ ಎಂದು ಕಾದು ನೋಡಬೇಕಿದೆ. ಸದ್ಯ ಫೆರ್ನಾಂಡೊ ಸ್ಯಾಂಟೋಸ್‌ ಹುದ್ದೆಗೆ ಯಾರು ಆಯ್ಕೆ ಆಗಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ | FIFA World Cup | ಸೋಲಿನ ಬೇಸರಕ್ಕೆ ಕಣ್ಣೀರು ಹಾಕಿದ ಸ್ಟಾರ್​ ಫುಟ್ಬಾಲ್​ ಆಟಗಾರ ರೊನಾಲ್ಡೊ

Exit mobile version