Site icon Vistara News

Fifa World Cup | ಭವಿಷ್ಯದಲ್ಲಿ ಭಾರತವೂ ಫಿಫಾ ವಿಶ್ವ ಕಪ್​ ಆತಿಥ್ಯ ವಹಿಸಲಿದೆ; ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ

Fifa World Cup

ನವದೆಹಲಿ: ಮುಂದೊಂದು ದಿನ ಭಾರತದಲ್ಲಿಯೇ ಫಿಫಾ ವಿಶ್ವಕಪ್ ಆಯೋಜನೆಯಾಗಲಿದೆ. ಜತೆಗೆ ಈ ವಿಶ್ವ ಕಪ್​ನಲ್ಲಿ ಭಾರತ ತಂಡವೂ ಆಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿಲ್ಲಾಂಗ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಈ ಬಗ್ಗೆ ವಿಶ್ವಾಸ ಹೊರಹಾಕಿದ್ದಾರೆ. ಭಾರತವು ಇದುವರೆಗೆ ಬಾಲಕರ ಮತ್ತು ಬಾಲಕಿಯರ ಎರಡು ಅಂಡರ್-17 ಫಿಫಾ ವಿಶ್ವ ಕಪ್‌ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಅದರಂತೆ ಮುಂದಿನ ದಿನಗಳಲ್ಲಿ ವಿಶ್ವ ಮಟ್ಟದ ಫಿಫಾ ವಿಶ್ವ ಕಪ್​ ಆತಿಥ್ಯವನ್ನು ಭಾರತ ವಹಿಸಲಿದೆ ಎಂದು ಮೋದಿ ಹೇಳಿದ್ದಾರೆ.

“ನಾನು ಇಂದು ಶಿಲ್ಲಾಂಗ್‌ಗೆ ಹೇಳಲು ಬಯಸುತ್ತೇನೆ, ನಾವೆಲ್ಲರು ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವ ಕಪ್‌ನ ಮೇಲೆ ಗಮನ ಹರಿಸಿದ್ದೇವೆ, ಮೈದಾನದಲ್ಲಿ ವಿದೇಶಿ ತಂಡಗಳಿವೆ. ಆದರೆ ನಮ್ಮ ಯುವ ಶಕ್ತಿಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಆದ್ದರಿಂದ ಭಾರತದಲ್ಲಿ ನಾವು ಅದೇ ರೀತಿ ಫಿಫಾ ಜಾತ್ರಯನ್ನು ಆಚರಿಸುವ ಮತ್ತು ತ್ರಿವರ್ಣ ಧ್ವಜಕ್ಕೆ ಮೆರಗು ನೀಡುವ ದಿನ ದೂರವಿಲ್ಲ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ” ಎಂದು ಮೋದಿ ಹೇಳಿದರು.

“ಭಾರತವು ಇದರವರೆಗೆ ಫಿಫಾ ವಿಶ್ವ ಕಪ್ ಪಂದ್ಯವನ್ನು ಆಡಿಲ್ಲ ಮತ್ತು ಆಯೋಜಿಸಿಲ್ಲ. ಈ ಕೊರಗು ಎಲ್ಲ ಭಾರತೀಯ ಫುಟ್ಬಾಲ್​ ಆಟಗಾರರಲ್ಲಿ ಮತ್ತು ಅಭಿಮಾನಿಗಳಲ್ಲಿದೆ. ಆದರೆ ಮುಂದೊಂದು ದಿನ ಭಾರತವು ಫಿಫಾ ವಿಶ್ವ ಕಪ್‌ಗೆ ಆತಿಥ್ಯ ವಹಿಸುತ್ತದೆ ಮತ್ತು ಭಾಗವಹಿಸುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | FIFA World Cup | Lionel Messi | ವಿಶ್ವ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್​ ಮೆಸ್ಸಿಯ ಖುಷಿಯ ಕ್ಷಣಗಳು

ಇದನ್ನೂ ಓದಿ | ಸಂಪಾದಕೀಯ | ರೋಮಾಂಚಕ ಫುಟ್‌ಬಾಲ್‌, ನಾವು ವಿಶ್ವಕಪ್ ಆಡುವುದು ಯಾವಾಗ?

Exit mobile version