ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್ ಫುಟ್ವಾಲ್(Fifa World Cup) ಟೂರ್ನಿಯ ಶುಕ್ರವಾರ ತಡರಾತ್ರಿಯ ಅರ್ಜೆಂಟೀನಾ ಮತ್ತು ನೆದರ್ಲೆಂಡ್ಸ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಅಮೆರಿಕದ ಪತ್ರಕರ್ತ ಗ್ರಾಂಟ್ ವಾಲ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಫಿಫಾ ವರ್ಲ್ಡ್ ಕಪ್ ಆರಂಭದಲ್ಲಿ ಪಂದ್ಯವೊಂದಕ್ಕೆ ಸಲಿಂಗ ಸಂಬಂಧಗಳು ಕಾನೂನು ಬಾಹಿರವಾಗಿರುವ ದೇಶದಲ್ಲಿ ಎಲ್ಜಿಬಿಟಿಕ್ಯು ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲು ಟಿ-ಶರ್ಟ್ ಧರಿಸಿಕೊಂಡು ಬಂದು ಸಿಬ್ಬಂದಿಗಳಿಂದ ಪ್ರವೇಶಕ್ಕೆ ತಡೆಯಾದ ಅಮೆರಿಕದ ಪತ್ರಕರ್ತ ಗ್ರಾಂಟ್ ವಾಲ್ ಶುಕ್ರವಾರ ಪಂದ್ಯ ನಡೆಯುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಗ್ರಾಂಟ್ ಸಹೋದರ ಎರಿಕ್ “ಶುಕ್ರವಾರದ ಅರ್ಜೆಂಟೀನಾ ಹಾಗೂ ನೆದರ್ಲೆಂಡ್ಸ್ ನಡುವಣ ಕ್ವಾರ್ಟರ್ ಫೈನಲ್ ಪಂದ್ಯದ ವರದಿ ಮಾಡುವ ವೇಳೆ ಗ್ರಾಂಟ್ ವಾಲ್ (48) ಕುಸಿದು ಬಿದ್ದು ಮೃತ ಪಟ್ಟಿದ್ದಾರೆ” ಎಂದು ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.
ಇದು ಸಹಜ ಸಾವಲ್ಲ ಕೊಲೆ; ಸಹೋದರನ ಆರೋಪ
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊವೊಂದನ್ನು ಹಚಿಕೊಂಡಿರುವ ಎರಿಕ್, ನಾನು ಗ್ರಾಂಟ್ ವಾಲ್ ಅವರ ಸಹೋದರ, ನಾನೊಬ್ಬ ಗೇ. ಕತಾರ್ ವಿಶ್ವ ಕಪ್ ಪಂದ್ಯದ ವೇಳೆ ನನ್ನ ಅಣ್ಣ ಕಾಮನಬಿಲ್ಲು ಟಿ- ಶರ್ಟ್ ಧರಿಸಿಕೊಂಡು ಹೋಗಲು ನಾನು ಕಾರಣ. ನನ್ನ ಅಣ್ಣ ಆರೋಗ್ಯದಿಂದ ಇದ್ದರು. ಕತಾರ್ನಲ್ಲಿ ನಡೆದ ಘಟನೆ ಬಳಿಕ ಆತನಿಗೆ ಜೀವ ಬೆದರಿಕೆ ಇತ್ತೆಂದು ಹೇಳುತ್ತಿದ್ದರು. ನನ್ನ ಅಣ್ಣ ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಯಾರೋ ನನ್ನ ಅಣ್ಣನ ಪ್ರಾಣಕ್ಕೆ ಕುತ್ತು ತಂದಿದ್ದಾರೆ. ಇದರಲ್ಲಿ ಸರ್ಕಾರದ ಕೈವಾಡವೂ ಇರಬಹುದೆಂದು ಎರಿಕ್ ಆರೋಪಿಸಿದ್ದಾರೆ.
ಇದನ್ನೂ ಓದಿ | Fifa World Cup | ಕ್ರೊವೇಶಿಯ ವಿರುದ್ಧ ಸೋತು ಫಿಫಾ ಟೂರ್ನಿಯಿಂದ ಹೊರ ಬಿದ್ದ ಬೇಸರದಲ್ಲಿ ಕಣ್ಣೀರು ಸುರಿಸಿದ ನೇಮರ್