Site icon Vistara News

Fifa World Cup | ಹುಚ್ಚು ಫುಟ್ಬಾಲ್‌ ಅಭಿಮಾನ ನಿಲ್ಲಿಸುವಂತೆ ಯುವಕರಿಗೆ ಕೇರಳ ಮುಸ್ಲಿಂ ಸಂಘಟನೆ ಒತ್ತಾಯ

Fifa kerala footbal

ಕೊಚ್ಚಿ: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್‌(Fifa World Cup) ನಲ್ಲಿ ಭಾಗವಹಿಸುವ ತಂಡಗಳಿಗೆ ಬೆಂಬಲವಾಗಿ ಆಟಗಾರರ ಬೃಹತ್ ಕಟೌಟ್‌, ಮೆರವಣಿಗೆ ಇನ್ನಿತರ ಕಾರ್ಯಕ್ರಮಗಳಲ್ಲಿ ತೊಡಗಿ ಅಭಿಮಾನ ತೋರುತ್ತಿರುವ ಕೇರಳದ ಮುಸ್ಲಿಂ ಯುವಕರಿಗೆ ತಮ್ಮ ಈ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸುವಂತೆ ಕೇರಳದ ಸುನ್ನಿ ಮುಸ್ಲಿಂ ಸಂಘಟನೆ ಎಚ್ಚರಿಕೆ ನೀಡಿದೆ.

ಶುಕ್ರವಾರ ಈ ಬಗ್ಗೆ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ (Samastha Kerala Jam-Iyyathul Ulama) ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಸರ್ ಫೈಝಿ ಕೂಡತಾಯಿ ಕಳವಳ ವ್ಯಕ್ತಪಡಿಸಿದ್ದು, ಫುಟ್ಬಾಲ್‌ ಸೆಲೆಬ್ರಿಟಿಗಳನ್ನು ಪೂಜಿಸುವುದು ಮತ್ತು ಅನೇಕ ದೇಶಗಳನ್ನು ತನ್ನ ವಸಾಹತುಗಳನ್ನಾಗಿ ಮಾಡಿಕೊಂಡಿರುವ ಪೋರ್ಚುಗಲ್‌ ದೇಶದ ಧ್ವಜಗಳನ್ನು ಬೀಸುವು ಸರಿಯಲ್ಲ ಎಂದು ಹೇಳಿದ್ದಾರೆ.

“ಕೇರಳದಲ್ಲಿ ಫುಟ್ಬಾಲ್ ಅಭಿಮಾನಿಗಳು ಬೀದಿಗಳಲ್ಲಿ ತಮ್ಮ ನೆಚ್ಚಿನ ಫುಟ್ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ನೇಮರ್ ಅವರ ಬೃಹತ್ ಕಟೌಟ್‌ಗಳನ್ನು ನಿರ್ಮಿಸಲು ಹೆಚ್ಚು ಹಣವನ್ನು ಖರ್ಚು ಮಾಡುತ್ತಿರುವುದು ಕಂಡುಬಂದಿದೆ. ಈ ಹುಚ್ಚು ಅಭಿಮಾನದಿಂದ ಯಾವುದೇ ಪ್ರಯೋಜವಿಲ್ಲ ಇದರ ಬದಲು ಈ ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಿಸಿಕೊಳ್ಳಿ ಇದರಿಂದ ಅದೊಷ್ಟೋ ಜನರಿಗೆ ಸಹಾಯವಾಗುತ್ತದೆ. ಜತೆಗೆ ತಮ್ಮ ನೆಚ್ಚಿನ ಪಂದ್ಯ ಸೋತಾಗ ಇತರ ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಥಳಿಸಿದ ಹಲವು ಘಟನೆಗಳು ನಡೆದಿವೆ. ಕೂಡಲೇ ಇದಕ್ಕೆ ಬ್ರೇಕ್‌ ಹಾಕಬೇಕು” ಎಂದು ಕೂಡತಾಯಿ ಮುಸ್ಲಿಂ ಯುವಕರಲ್ಲಿ ಒತ್ತಾಯಿಸಿದ್ದಾರೆ.

ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನ

ಹಲವು ದೇಶಗಳನ್ನು ವಸಾಹತುವನ್ನಾಗಿ ಮಾಡಿದ ಪೋರ್ಚುಗಲ್‌ ದೇಶದ ಧ್ವಜವನ್ನು ಭಾರತದಲ್ಲಿ ಬೀಸುವುದು ಸರಿಯಲ್ಲ. ಭಾರತೀಯ ನಾಗರಿಕರಾದ ನಾವು ಇತರ ದೇಶದ ಧ್ವಜವನ್ನು ನಮ್ಮ ದೇಶದಲ್ಲಿ ಹಾರಿಸಿದರೆ ಅದು ರಾಷ್ಟ್ರಧ್ವಜದ ಮೇಲೆ ತೋರಿದ ಅಗೌರವವಾಗುತ್ತದೆ. ಆದ್ದರಿಂದ ಫುಟ್ಬಾಲ್‌ ಅಭಿಮಾನದ ಬರದಲ್ಲಿ ಯಾವುದೇ ಇತರ ದೇಶದ ಧ್ವಜವನ್ನು ಬೀಸುವುದು ಸರಿಯಲ್ಲ ಎಂದು ಕೂಡತಾಯಿ ಹೇಳಿದ್ದಾರೆ.

ನಾವು ಫುಟ್ಬಾಲ್‌ ವಿರೋಧಿಗಳಲ್ಲ

ನಮ್ಮ ಸಂಘಟನೆ ಫುಟ್ಬಾಲ್ ವಿರೋಧಿಯಲ್ಲ. ಈ ಆಟವನ್ನು ಕ್ರೀಡಾಪಟುವಿನ ಉತ್ಸಾಹದಲ್ಲಿ ನೋಡಬೇಕೆ ಹೊರತು ಇದಕ್ಕೆ ವ್ಯಸನಿಯಾಗಬಾರದು. ಇದು ಒಳ್ಳೆಯ ಪ್ರವೃತ್ತಿಯಲ್ಲ. ಈ ಆಟವನ್ನು ದೈಹಿಕ ಚಟುವಟಿಕೆಗೆ ಉತ್ತೇಜಿಸುವ ಸಲುವಾಗಿ ಮಾತ್ರ ಪ್ರಚಾರ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ | Fifa World Cup | ಬ್ರೆಜಿಲ್ ತಂಡದ ನಾಯಕ ನೇಮರ್‌ಗೆ ಗಾಯ; ಮುಂದಿನ ಪಂದ್ಯಕ್ಕೆ ಅನುಮಾನ!

Exit mobile version