ಕತಾರ್: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿ ಬಹುತೇಕ ಅಂತಿಮ ಘಟ್ಟ ತಲುಪಿದ್ದು ಕ್ವಾರ್ಟರ್ ಪಂದ್ಯಗಳು ಆರಂಭವಾಗಿದೆ. ಈ ನಡುವೆ ಅರ್ಜೆಂಟೀನಾ ತಂಡದ ಲಿಯೊನೆಲ್ ಮೆಸ್ಸಿ ಈ ಬಾರಿ ಫಿಫಾ ವಿಶ್ವಕಪ್ ಗೆಲ್ಲುವ ನೆಚ್ಚಿನ 4 ತಂಡಗಳನ್ನು ಹೆಸರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಮೆಸ್ಸಿ “ಈ ಬಾರಿ ಫಿಫಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಅರ್ಜೆಂಟೀನಾ ಮುಂಚೂಣಿಯಲ್ಲಿದೆ. ಜತೆಗೆ 5 ಬಾರಿಯ ಚಾಂಪಿಯನ್ಸ್ ಬ್ರೆಜಿಲ್, ಹಾಲಿ ಚಾಂಪಿಯನ್ ಫ್ರಾನ್ಸ್ ಹಾಗೂ ಸ್ಪೇನ್ ತಂಡಗಳಿಗೂ ಪ್ರಶಸ್ತಿ ಗೆಲ್ಲುವ ಅವಕಾಶವಿದೆ” ಎಂದು ಭವಿಷ್ಯ ನುಡಿದಿದ್ದಾರೆ.
“ಅರ್ಜೆಂಟೀನಾ ತಂಡದಲ್ಲಿ ಗುಣಮಟ್ಟದ ಆಟಗಾರರಿದ್ದು, ಸದಾ ಉತ್ತಮ ಪ್ರದರ್ಶನ ತೋರಲು ಉತ್ಸುಕರಾಗಿದ್ದಾರೆ. ಸೌದಿ ಅರೆಬಿಯಾ ವಿರುದ್ಧದ ಸೋಲು ನಮ್ಮಲ್ಲಿ ಮತ್ತಷ್ಟು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಅದರಂತೆ ಮುಂದಿನ ಪಂದ್ಯಗಳಲ್ಲೂ ಬಲಿಷ್ಠ ತಂಡಗಳು ನೀಡುವ ಕಠಿಣ ಸವಾಲನ್ನು ಮೆಟ್ಟಿ ನಿಂತು ನಾವು ಚಾಂಪಿಯನ್ ಆಗುವು ನಿರೀಕ್ಷೆ ಇದೆ” ಎಂದು ಮೆಸ್ಸಿ ಹೇಳಿದರು.
ಅರ್ಜೆಂಟೀನಾ ತಂಡ ಶುಕ್ರವಾರ (ಡಿಸೆಂಬರ್ 9) ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ಸವಾಲನ್ನು ಎದುರಿಸಲಿದೆ.
ಇದನ್ನೂ ಓದಿ | Fifa World Cup | ಬ್ರೆಜಿಲ್ ಬೊಂಬಾಟ್ ಆಟಕ್ಕೆ ತಲೆಬಾಗಿದ ದಕ್ಷಿಣ ಕೊರಿಯಾ; ಕ್ವಾರ್ಟರ್ ಫೈನಲ್ ತಲುಪಿದ ನೇಮರ್ ಪಡೆ