Site icon Vistara News

Fifa World Cup | ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿ ಮೊರೊಕ್ಕೊ; ಕ್ವಾರ್ಟರ್​ ಫೈನಲ್​ನಲ್ಲಿ ಪೋರ್ಚುಗಲ್​ ಎದುರಾಳಿ

morocco fifa world cup

ದೋಹಾ: ಕತಾರ್​ ಫಿಫಾ ವಿಶ್ವ ಕಪ್(Fifa World Cup) ಟೂರ್ನಿಯಲ್ಲಿ ಈಗಾಗಲೇ ಅಚ್ಚರಿಯ ಫಲಿತಾಂಶದಿಂದ ಬಲಿಷ್ಠ ತಂಡಗಳನ್ನು ಹೆಡೆಮುರಿಕಟ್ಟಿದ ಮೊರೊಕ್ಕೊ ತಂಡ ಕ್ವಾರ್ಟರ್‌ ಫೈನಲ್‌ ಕಾದಾಟದಲ್ಲಿ ಪೋರ್ಚುಗಲ್‌ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿಯೂ ಮೊರೊಕ್ಕೊ ಮೇಲುಗೈ ಸಾಧಿಸಿ ಐತಿಹಾಸಿಕ ಗೆಲುವಿನ ಸಾಧನೆಯ ಹಂಬಲದಲ್ಲಿದೆ.

ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ಶನಿವಾರ ಈ ಮುಖಾಮುಖಿ ನಡೆಯಲಿದೆ. ಮೊರೆಕ್ಕೊ ಕಳೆದ ಫ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಈ ಬಾರಿಯ ಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಸ್ಪೇನ್​ ತಂಡವನ್ನು ಮಗುಚಿಹಾಕಿತ್ತು. ಇದೀಗ ಪೋರ್ಚುಗಲ್​ಗೂ ಶಾಕ್​ ನೀಡಲು ಸಜ್ಜಾಗಿದೆ. ಮತ್ತೊಂಡೆದೆ ಸ್ವಿಜರ್​ಲ್ಯಾಂಡ್​ ತಂಡವನ್ನು 6-1 ರಿಂದ ಬಗ್ಗುಬಡಿದಿದ್ದ ಪೋರ್ಚುಗಲ್‌ ತಂಡ ಮೊರೊಕ್ಕೊ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿ ಸೆಮಿಫೈನಲ್​ಗೇರುವ ಯೋಜನೆಯಲ್ಲಿದೆ.

36 ವರ್ಷಗಳ ಹಿಂದೆ ಮೆಕ್ಸಿಕೊದಲ್ಲಿ ನಡೆದಿದ್ದ ಫಿಫಾ ಟೂರ್ನಿಯಲ್ಲಿ 16ರ ಘಟ್ಟ ಪ್ರವೇಶಿಸಿದ್ದ ಮೊರೊಕ್ಕೊ ಈ ಸಾಧನೆ ಮಾಡಿದ ಆಫ್ರಿಕಾದ ಮೊದಲ ದೇಶ ಎಂಬ ಗೌರವ ಪಡೆದುಕೊಂಡಿತ್ತು. ಇದೀಗ ಕತಾರ್​ನಲ್ಲಿ ಪೊರ್ಚುಗಲ್ ತಂಡವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಆಫ್ರಿಕಾ ಮತ್ತು ಅರಬ್‌ ನಾಡಿನ ಮೊದಲ ತಂಡ ಎಂಬ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ 1986ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಆಡುತ್ತಿರುವ ಪೋರ್ಚುಗಲ್‌ ಕೂಡ ವಿಶ್ವ ಕಪ್​ ಗೆಲ್ಲುವ ಹಂಬಲದಲ್ಲಿದೆ.

ಮೊರೆಕ್ಕೊ ಬಲಿಷ್ಠ

ಮೊರೆಕ್ಕೊ ತಂಡ ಈ ಬಾರಿಯ ಫಿಫಾ ವಿಶ್ವಕಪ್​ ಟೂರ್ನಿಯಲ್ಲಿ ಅಂಡರ್‌ ಡಾಗ್ಸ್‌ ಎಂದೇ ಕಡೆಗಣಿಸಲಾಗಿತ್ತು. ಆದರೆ ಲೀಗ್​ ಹಂತದಿಂದ ಇಲ್ಲಿಯ ವರೆಗೆ ಮೊರೆಕ್ಕೊ ತೋರಿದ ಪ್ರದರ್ಶನವನ್ನು ಗಮನಿಸಿದರೆ ಇದೀಗ ಫಿಫಾ ವಿಶ್ವ ಕಪ್​ ಗೆಲ್ಲಲಿದೆ ಎಂಬ ಮಟ್ಟಕ್ಕೆ ಬೆಳೆದು ನಿಂತಿದೆ. ಆಡಿದ ಎಲ್ಲ ಪಂದ್ಯಗಳಲ್ಲೂ ಎದುರಾಳಿ ತಂಡಕ್ಕೆ ಒಂದೂ ಗೋಲ್​ ಬಿಟ್ಟುಕೊಡದ ಖ್ಯಾತಿಯನ್ನು ಪಡೆದಿದಿದೆ. ಆದರೆ ಕೆನಡಾ ವಿರುದ್ಧ 2-1ರಲ್ಲಿ ಗೆದ್ದ ಪಂದ್ಯದಲ್ಲಿ ಡಿಫೆಂಡರ್‌ ನಯೇಫ್‌ ಅವರು ಸೆಲ್ಫ್ ಗೋಲ್ ಹೊಡೆದು ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡ್ಡಿದ್ದರು. ಈ ಅಂಕಿ ಅಂಶದಿಂದ ಮೊರೆಕ್ಕೊ ತಂಡ ಬಲಿಷ್ಠ ಎನ್ನಲಡ್ಡಿಯಿಲ್ಲ

ರಾಮೋಸ್​ ಮೇಲೆ ನಿರೀಕ್ಷೆ

ಕಳೆದ ಫ್ರೀ ಕ್ವಾರ್ಟರ್‌ ಪಂದ್ಯದಲ್ಲಿ ಸ್ವಿಜರ್‌ಲ್ಯಾಂಡ್​ ವಿರುದ್ಧ ಕ್ರಿಸ್ಟಿಯಾನೋ ರೊನಾಲ್ಡೊ ಬದಲಿಗೆ ಆಡಲಿಳಿದ 21 ವರ್ಷದ ಗೊನ್ಸಾಲೋ ರಾಮೋಸ್‌ ಹ್ಯಾಟ್ರಿಕ್‌ ಗೋಲ್​ ಬಾರಿಸಿ ಮಿಂಚಿದ್ದರು. ಇದೀಗ ಈ ಪಂದ್ಯದಲ್ಲಿಯೂ ಅವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಜತೆಗೆ ಈ ಪಂದ್ಯದಲ್ಲಿ ಕೋಚ್‌ ಫೆರ್ನಾಂಡೊ ಸಾಂಟೋಸ್‌ ಅವರು ರೊನಾಲ್ಡೊಗೆ ಆಡುವ ಅವಕಾಶ ನೀಡಲಿದ್ದಾರ ಎಂದು ಕಾದು ನೋಡಬೇಕಿದೆ. ಉಳಿದಂತೆ ಜಾವೊ ಫೆಲಿಕ್ಸ್‌ ಮತ್ತು ಬ್ರೂನೊ ಫೆರ್ನಾಂಡಿಸ್‌ ಅವರೂ ಉತ್ತಮ ಲಯದಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ | Fifa World Cup | ಅರ್ಜೆಂಟೀನಾ ಮತ್ತು ನೆದರ್ಲೆಂಡ್ಸ್​ ಪಂದ್ಯದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಪತ್ರಕರ್ತ ಗ್ರಾಂಟ್ ವಾಲ್

Exit mobile version