Site icon Vistara News

Fifa World Cup | ಫಿಫಾ ವಿಶ್ವ ಕಪ್​ ಫೈನಲ್​ಗೂ ಮುನ್ನ ಎಸ್​ಬಿಐ ಪಾಸ್​ಬುಕ್​ ಫುಲ್​ ಟ್ರೆಂಡ್​; ಕಾರಣ ಏನು?

fifa world cup

ನವದೆಹಲಿ: ಕತಾರ್​ ಫಿಫಾ ವಿಶ್ವ ಕಪ್​ ಟೂರ್ನಿ ಅಂತಿಮ ಘಟ್ಟ ತಲುಪಿದ್ದು ಭಾನುವಾರ ಅರ್ಜೆಂಟೀನಾ ಮತ್ತು ಫ್ರಾನ್ಸ್​ ವಿರುದ್ಧ ಫೈನಲ್​ ಪಂದ್ಯ ನಡೆಯಲಿದೆ. ಈ ಮೂಲಕ ಕಳೆದ ಒಂದು ತಿಂಗಳ ಕಾಲ ನಡೆದ ಈ ಕಾಲ್ಚೆಂಡಿನ ಕಾಳಗಕ್ಕೆ ತೆರೆ ಬೀಳಲಿದೆ. ಆದರೆ ಇದೀಗ ಫೈನಲ್​ ಪಂದ್ಯ ನಡೆಯುವ ಮುನ್ನ ಭಾರತೀಯ ಸ್ಟೇಟ್​ ಬ್ಯಾಂಕಿನ ಪಾಸ್​ಬುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡಿಸೆಂಬರ್ 18 ರಂದು ನಡೆಯಲಿರುವ ಫಿಫಾ ಫೈನಲ್​ನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ಕತಾರ್‌ನ ರಾಷ್ಟ್ರೀಯ ದಿನದಂದು ಲುಸೈಲ್ ಕ್ರೀಡಾಂಗಣದಲ್ಲಿ ಟ್ರೋಫಿ ಗೆಲ್ಲಲು ಸೆಣಸಾಡಲಿವೆ. ಸೆಮಿಫೈನಲ್​ನಲ್ಲಿ ಕ್ರೊವೇಷ್ಯಾ ತಂಡವನ್ನು ಮಣಿಸಿರುವ ಅರ್ಜೆಂಟೀನಾ ತಂಡ ಮೂರನೇ ಬಾರಿಗೆ ವಿಶ್ವ ಕಪ್ ಗೆಲ್ಲುವ ಕನಸಿನೊಂದಿಗೆ ಅಖಾಡಕ್ಕಿಳಿಯುತ್ತಿದೆ. ಅತ್ತ ಫ್ರಾನ್ಸ್ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಹೊರಾಟ ನಡೆಸಲಿದೆ. ಆದರೆ ಇದೀಗ ಲಿಯೋನೆಲ್​ ಮೆಸ್ಸಿ ತಂಡ ಫೈನಲ್​ಗೇರುತ್ತಿದ್ದಂತೆ ಭಾರತದಲ್ಲಿ ಪ್ರತಿಷ್ಠಿತ ಎಸ್​ಬಿಐ ಬ್ಯಾಂಕ್​ನ ಪಾಸ್​ಬುಕ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಪಾಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಲು ಕಾರಣ ಏನೆಂದರೆ ಅರ್ಜೆಂಟೀನಾ ತಂಡದ ಜೆರ್ಸಿ ನಡುವೆ ಇರುವಸಾಮ್ಯತೆ. ಇದರಿಂದ ಪಾಸ್​ಬುಕ್​ ಟ್ರೆಂಟ್​ ಆಗಿದೆ. ಅರ್ಜೆಂಟೀನಾ ತಂಡದ ಆಟಗಾರರು ಧರಿಸುವ ಜೆರ್ಸಿ ಹಾಗೂ ಎಸ್​ಬಿಐ ಪಾಸ್​ಬುಕ್​ ಎರಡಕ್ಕೂ ಸಾಕಷ್ಟು ಹೊಲಿಕೆ ಇದೆ. ಎಸ್​ಬಿಐ ಪಾಸ್​ಬುಕ್ ನೀಲಿ ಹಾಗೂ ಬಿಳಿ ಬಣ್ಣದಿಂದ ಕೂಡಿದ್ದರೆ, ಇತ್ತ ಅರ್ಜೆಂಟೀನಾ ತಂಡದ ಆಟಗಾರರು ಧರಿಸುವ ಜೆರ್ಸಿಯೂ ಕೂಡ ಈ ಎರಡು ಬಣ್ಣಗಳ ಮಿಶ್ರಣದಿಂದ ಕೂಡಿದೆ. ಹೀಗಾಗಿ ಎಸ್‌ಬಿಐ ಪಾಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.

ಇದಕ್ಕೆ ತಕ್ಕಂತೆ ಕೆಲವರು ಟ್ವಿಟರ್​ನಲ್ಲಿ ಅರ್ಜೆಂಟಿನಾ ತಂಡಕ್ಕೆ ಭಾರತೀಯ ಬ್ಯಾಂಕ್​ ಕೂಡಾ ಬೆಂಬಲ ಸೂಚಿಸಿದೆ ಎಂದು ಅಭಿಮಾನಿಯೊಬ್ಬ ಟ್ವೀಟ್​ ಮಾಡಿದ್ದಾರೆ. ಇನ್ನು ಕೆಲವರು ಅರ್ಜೆಂಟೀನಾ ತಂಡದ ಪಂದ್ಯದ ವೇಳೆ ಎಸ್​ಬಿಐಗೆ ಲಂಚ್​ ಬ್ರೇಕ್​ ನೀಡಬೇಕು ಎಂದು ಹಾಸ್ಯಮಯ ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಒಂದೊಮ್ಮೆ ಅರ್ಜೆಂಟೀನಾ ಪಂದ್ಯ ಸೋತರೆ ಎಸ್​ಬಿಐ ಎಲ್ಲ ಹಣವನ್ನು ಕಳೆದುಕೊಳ್ಳುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ | Fifa World Cup | ರೊನಾಲ್ಡೊ ಹೊರಗಿಟ್ಟು ತಂಡದ ಸೋಲಿಗೆ ಕಾರಣವಾದ ಕೋಚ್‌ ಫೆರ್ನಾಂಡೊ ಸ್ಯಾಂಟೋಸ್‌ಗೆ ಗೇಟ್​ ಪಾಸ್​

Exit mobile version