ದೋಹಾ: ರಿಚರ್ಲಿಸನ್ ದಾಖಲಿಸಿದ ಅವಳಿ ಗೋಲ್ ನೆರವಿನಿಂದ ಶುಕ್ರವಾರದ ಫಿಫಾ ವಿಶ್ವಕಪ್ (FIFA World Cup 2022)ನ ಜಿ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಬ್ರೆಝಿಲ್ ತಂಡ ಸರ್ಬಿಯಾ ವಿರುದ್ಧ 2-0 ಅಂತರದ ಗೆಲುವಿನ ಮೂಲಕ ಶುಭಾರಂಭ ಮಾಡಿದೆ.
ಬ್ರೆಝಿಲ್ ತಂಡದ ಗೆಲುವಿಗಿಂತ ಸುದ್ದಿಯಾಗಿರುವುದು ರಿಚರ್ಲಿಸನ್ ಅವರು ಗಳಿಸಿದ ಎರಡನೇ ಗೋಲು. ಗಾಳಿಯಲ್ಲಿ ತೇಲಾಡುತ್ತಿದ್ದ ಚೆಂಡನ್ನು ರಿವರ್ಸ್ ಪಲ್ಟಿಯ ಮೂಲಕ ಗೋಲು ಪೆಟ್ಟಿಗೆಗೆ ಸೇರಿದ ಸಾಹಸ ಇದೀಗ ಎಲ್ಲರನ್ನು ನಿಬ್ಬೆರಗಾಗಿಸಿದೆ. ರಿಚರ್ಲಿಸನ್ ಅವರ ಈ ಸೂಪರ್ ಮ್ಯಾನ್ ಶೈಲಿಯ ಸಾಹಸಮಯ ಗೋಲ್ಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಬ್ರೆಝಿಲ್ ಪರ ಚೊಚ್ಚಲ ವಿಶ್ವ ಕಪ್ ಪಂದ್ಯವನ್ನಾಡಿದ ಅವರು ಎರಡು ಗೋಲ್ ದಾಖಲಿಸಿದ ಸಾಧನೆಯನ್ನು ನಿರ್ಮಿಸಿದರು. ಇದಕ್ಕೂ ಮೊದಲು 2014ರಲ್ಲಿ ನೇಮರ್ ತಮ್ಮ ಚೊಚ್ಚಲ ವಿಶ್ವ ಕಪ್ ಪಂದ್ಯದಲ್ಲಿ ಎರಡು ಗೋಲು ಗಳಿಸಿದ್ದರು.
ಇದನ್ನೂ ಓದಿ | Fifa World Cup | ರೊನಾಲ್ಡೊ ವಿಶ್ವ ದಾಖಲೆ; ಘಾನಾ ವಿರುದ್ಧ ಮೇಲುಗೈ ಸಾಧಿಸಿದ ಪೋರ್ಚುಗಲ್