Site icon Vistara News

Fifa World Cup | ಬ್ರೆಜಿಲ್​ ಬೊಂಬಾಟ್​ ಆಟಕ್ಕೆ ತಲೆಬಾಗಿದ ದಕ್ಷಿಣ ಕೊರಿಯಾ; ಕ್ವಾರ್ಟರ್​ ಫೈನಲ್​ ತಲುಪಿದ ನೇಮರ್​ ಪಡೆ

brazil vs south korea

ದೋಹಾ: ಐದು ಬಾರಿಯ ಫಿಫಾ ವಿಶ್ವ (Fifa World Cup) ಚಾಂಪಿಯನ್​ ಬ್ರೆಜಿಲ್ ತಂಡ​ 16ರ​ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 4-1 ಗೋಲುಗಳ ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ತಲುಪಿದೆ. ಕ್ವಾರ್ಟರ್​ ಫೈನಲ್​ ಕಾದಾಟದಲ್ಲಿ ಕಳೆದ ಬಾರಿಯ ರನ್ನರ್​ ಅಪ್​ ತಂಡವಾದ ಬಲಿಷ್ಠ ಕ್ರೊವೇಶಿಯಾ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ದೋಹಾದ 974 ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಬ್ರೆಜಿಲ್​ ಗೋಲುಗಳ ಸುರಿಮಳೆಗೈದಿತು. ಎದುರಾಳಿ ದಕ್ಷಿಣ ಕೊರಿಯಾ, ನೇಮರ್​ ಪಡೆಯ ಆರ್ಭಟದ ಮುಂದೆ ಯಾವ ಹಂತದಲ್ಲಿಯೂ ತಿರುಗೇಟು ನೀಡುವಲ್ಲಿ ಯಶಸ್ಸು ಕಾಣದೆ ಅಂತಿಮವಾಗಿ ಒಂದು ಗೋಲು ಬಾರಿಸಲಷ್ಟೇ ಸೀಮಿತವಾಯಿತು.

ತಂಡಕ್ಕೆ ಮರಳಿದ ನೇಮರ್
ಸರ್ಬಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಕಾಲು ಉಳುಕಿನ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ನೇಮರ್,​ ಮಹತ್ವದ ಪಂದ್ಯದಲ್ಲಿ ಕಣ್ಣಕ್ಕಿಳಿಯುವ ಮೂಲಕ ಒಂದು ಗೋಲು ದಾಖಲಿಸಿ ಭರ್ಜರಿ ಕಮ್​ಬ್ಯಾಕ್​ ಮಾಡಿದರು. ನೇಮರ್​ ಆಗಮನದಿಂದ ತಂಡಕ್ಕಿದ್ದ ಬಹುದೊಡ್ಡ ಚಿಂತೆ ನಿವಾರಣೆಯಾಯಿತು.

ಬ್ರೆಜಿಲ್​ ಆಕ್ರಮಣಕಾರಿ ಆಟ ​
ಪಂದ್ಯದ ಮೊದಲಾರ್ಧದ 36 ನಿಮಿಷದಲ್ಲಿ 4 ಗೋಲು ಬಾರಿಸಿದ ಬ್ರಜಿಲ್​ ಪಂದ್ಯದಲ್ಲಿ ಸಂಪೂರ್ಣವಾಗಿ ಹಿಡಿತ ಸಾಧಿಸಿತು. ಇದಾಗಲೇ ದಕ್ಷಿಣ ಕೊರಿಯಾ ತಮ್ಮ ಸೋಲನ್ನು ಖಚಿತ ಪಡಿಸಿತ್ತು. ವಿನಿಶಿಯಸ್​ ಜೂನಿಯರ್​(7ನೇ ನಿಮಿಷ), ನೇಮರ್​ (13ನೇ ನಿಮಿಷ), ರಿಚಾರ್ಲಿಸನ್​ (29ನೇ ನಿಮಿಷ), ಪ್ಯಾಕ್ವೆಟಾರ (36ನೇ ನಿಮಿಷ) ಅಮೋಘ ಗೋಲು ಬಾರಿಸಿ ಬ್ರೆಜಿಲ್​​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ದಕ್ಷಿಣ ಕೊರಿಯಾ ಪರ ಪೈಕ್​ ಸೆಯುಂಗ್​ 76 ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದರು. ದಕ್ಷಿಣ ಕೊರಿಯಾ ಈ ಸೋಲಿನೊಂದಿಗೆ ವಿಶ್ವ ಕಪ್​ನಿಂದ ಹೊರಬಿದ್ದ ಕೊನೆಯ ಏಷ್ಯಾ ತಂಡವಾಯಿತು.

ಇದನ್ನೂ ಓದಿ | FIFA World Cup | ಜಪಾನ್‌ ಸೋಲಿಸಿದ ಕ್ರೊಯೇಷ್ಯಾ ತಂಡ ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶ

Exit mobile version